For Quick Alerts
ALLOW NOTIFICATIONS  
For Daily Alerts
 

ಹೋಟೆಲ್‌ ಕಾರಿಡಾರ್‌ನಲ್ಲಿ ಕುಲ್ದೀಪ್‌, ಪಂತ್‌ ಕ್ರಿಕೆಟ್‌ ಪ್ರಾಕ್ಟೀಸ್‌: ವಿಡಿಯೊ

pant and kuldeep hotel practice 2019

ಪೋರ್ಟ್‌ ಆಫ್‌ ಸ್ಪೇನ್‌, ಆಗಸ್ಟ್‌ 11: ಟೀಮ್‌ ಇಂಡಿಯಾದ ಯುವ ಪ್ರತಿಭೆಗಳಾದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಮತ್ತು ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಇಲ್ಲಿನ ಹೋಟೆಲ್‌ ಒಂದರ ಕಾರಿಡಾರ್‌ನಲ್ಲೇ ಕ್ರಿಕೆಟ್‌ ಅಭ್ಯಾಸ ಮಾಡಿರುವ ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತ ತಂಡ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಆದರೆ, ಗುರುವಾರ ನಡೆಯಬೇಕಿದ್ದ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾಯಿತು. ಇದೀಗ ಭಾನುವಾರ ಇಲ್ಲಿನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿವೆ.

ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಪಂತ್‌, ಮೊದಲ ಎರಡು ಪಂದ್ಯಗಳಲ್ಲಿ ಅನಗತ್ಯ ಹೊಡೆತಗಳಿಗೆ ಮುಂದಾಗಿ ವಿಕೆಟ್‌ ಒಪ್ಪಿಸುವ ಮೂಲಕ ಟೀಕೆಗೆ ಗುರಿಯಾಗಿದ್ದರೂ. ಬಳಿಕ 3ನೇ ಹಾಗೂ ಅಂತಿಮ ಟಿ20ರಲ್ಲಿ ತಲಾ ನಾಲ್ಕು ಸಿಕ್ಸರ್‌ ಮತ್ತು ಫೋರ್‌ಗಳನ್ನು ಒಳಗೊಂಡ ಅಜೇಯ ಅರ್ಧಶತಕ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು.

ಮತ್ತೊಂದೆಡೆ ಮಳೆಗೆ ಆಹುತಿಯಾದ ಮೊದಲ ಏಕದಿನ ಪಂದ್ಯದಲ್ಲಿ ಕುಲ್ದೀಪ್‌, ವಿಂಡೀಸ್‌ನ ದೈತ್ಯ ಮತ್ತು ಅಪಾಯಕಾರಿ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಟಿ20 ಸರಣಿಗೆ ಕುಲ್ದೀಪ್‌ ಅವರನ್ನು ಹೊರಗಿಟ್ಟು ವಿಶ್ರಾಂತಿ ನೀಡಲಾಗಿತ್ತು.

ಮಾಜಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂ.ಎಸ್‌ ಧೋನಿ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಎನಿಸಿರುವ ಪಂತ್‌, ಅಭ್ಯಾಸ ವಿಚಾರದಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ. ವಿಂಡೀಸ್‌ ವಿರುದ್ಧದ 2ನೇ ಪಂದ್ಯ ಸಲುವಾಗಿ ಕಾರಿಡಾರ್‌ನಲ್ಲೂ ಪಂತ್‌ ವಿಕೆಟ್‌ ಕೀಪಿಂಗ್‌ ಅಭ್ಯಾಸ ನಡೆಸಿದ್ದಾರೆ.

ಕುಲ್ದೀಪ್‌ ಎಸೆಯುತ್ತಿದ್ದ ಅದ್ಭುತವಾಗಿ ತಿರುವು ಪಡೆಯುತ್ತಿದ್ದ ಚೆಂಡುಗಳನ್ನು ಪಂತ್‌ ಉತ್ತಮ ರೀತಿಯಲ್ಲಿ ಹಿಡಿದು ವಿಕೆಟ್‌ಕೀಪಿಂಗ್‌ ಸಾಮರ್ಥ್ಯವನ್ನು ಅನಾವರಣ ಪಡಿಸಿದ್ದಾರೆ. ಕುಲ್ದೀಪ್‌ ಎಸೆಯುತ್ತಿದ್ದ ಎಸೆತಗಳು ಅದ್ಭುತವಾಗಿ ತಿರುವ ಪಡೆದುಕೊಳ್ಳುತ್ತಿರುವುದನ್ನು ಕಂಡ ನೆಟ್ಟಿಗರು ಮೆಚ್ಚಿದ್ದು, ಪ್ರಸಂಶೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಹೋಟೆಲ್‌ ಕಾರಿಡಾರ್‌ನಲ್ಲಿ ಕ್ರಿಕೆಟ್‌ ಅಭ್ಯಾಸದ ವಿಡಿಯೊವನ್ನು ಪಂತ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಶೇರ್‌ ಮಾಡಿದ್ದಾರೆ.

Story first published: Sunday, August 11, 2019, 17:12 [IST]
Other articles published on Aug 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+