Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸುರೇಶ್ ರೈನಾಗೆ ಮಾಡಿದ್ದನ್ನು ಧೋನಿಗೆ ಮಾಡಬೇಡ: ಪಂತ್‌ಗೆ ಎಚ್ಚರಿಕೆ!

ಪಂತ್ ಗೆ ವಾರ್ನಿಂಗ್ ಕೊಟ್ಟ ಅಭಿಮಾನಿಗಳು..!?
Pant Blocks Suresh Rainas Way, Fans Say Dont Try This With MS Dhoni

ಚೆನ್ನೈ, ಮೇ 2: ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಷಬ್ ಪಂತ್ ಮೈದಾನದಲ್ಲಿ ಇತ್ತೀಚೆಗೆ ತರ್ಲೆ-ತಮಾಷೆಗೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಪಂದ್ಯದ ವೇಳೆ ಕುಚೇಷ್ಟೆ, ಕಾಮೆಂಟ್ ಮಾಡುತ್ತ ಪಂತ್ ಆಗೀಗ ಸುದ್ದಿಯಾಗುತ್ತಲೇ ಇದ್ದಾರೆ. ಬುಧವಾರ (ಮೇ 2) ಐಪಿಎಲ್ ಪಂದ್ಯದ ವೇಳೆ ಪಂತ್ ತರ್ಲೆ ಮತ್ತೆ ಕಾಣಸಿಕ್ಕಿತು.

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ಪರ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ರಿಷಬ್ ಪಂತ್, ಎದುರಾಳಿ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಅವರನ್ನು ಅಡ್ಡಗಟ್ಟಿ ತರ್ಲೆ ಮಾಡಿದ್ದರು. ಆದರೆ ಸುರೇಶ್ ರೈನಾ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ, ತಮಾಷೆಯಾಗೇ ತೇಲಿಸಿಬಿಟ್ಟಿದ್ದರು.

ಓವರ್‌ವೊಂದು ಮುಕ್ತಾಯವಾಗಿ ಸಣ್ಣ ಬ್ರೇಕ್‌ ಬಳಿಕ ಕ್ರೀಸ್‌ನತ್ತ ತೆರಳುತ್ತಿದ್ದ ಸುರೇಶ್ ರೈನಾ ದಾರಿಗೆ ಅಡ್ಡನಿಂತ ಪಂತ್, ತರ್ಲೆ ಪ್ರದರ್ಶಿಸಿದ್ದು ನಡೆದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಟ್ವಿಟರ್ ವಿಡಿಯೋ ಹಾಕಿಕೊಂಡಿರುವ ಸಾಮಾಜಿಕ ಜಾಲತಣಾಣಿಗರು, 'ರೈನಾಗೆ ಮಾಡಿದ ತರ್ಲೆಯನ್ನು ಧೋನಿ ಮುಂದೆ ಮಾಡಬೇಡ' ಎಂದು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣಿಗರು ಪಂತ್‌ಗೆ ಹೀಗೆ ಎಚ್ಚರಿಸಿದ್ದಕ್ಕೆ ಕಾರಣವೂ ಇದೆ. ಎಂಎಸ್ ಧೋನಿ 'ಕೂಲ್ ಕ್ಯಾಪ್ಟನ್' ಎಂದು ಫೇಮಸ್ಸಾದರೂ, ತಲೈವಾ ಧೋನಿ ಪಂದ್ಯದ ವೇಳೆ ಸಿಡುಕು ಪ್ರದರ್ಶಿಸಿದ್ದ ಸಂಗತಿಗಳೂ ಇವೆ. ಹೀಗಾಗಿ ಪಂತ್, ಧೋನಿ ಎದುರು ಇಂಥ ತರ್ಲೆ ಪ್ರದರ್ಶಿಸಬಾರದು ಎಂಬರ್ಥದಲ್ಲಿ ಕ್ರಿಕೆಟ್ ಪ್ರಿಯರು ಬರೆದುಕೊಂಡಿದ್ದಾರೆ.

Story first published: Thursday, May 2, 2019, 17:08 [IST]
Other articles published on May 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+