Paras mhambrey: ಯಾವುದೇ ಕೋಚ್ ಮೊಹಮ್ಮದ್ ಶಮಿಯಂತಹ ಬೌಲರ್ ಸೃಷ್ಟಿಸಲು ಸಾಧ್ಯವಿಲ್ಲ
ಮೊಹಮ್ಮದ್ ಶಮಿಯಂತಹ ವೇಗದ ಬೌಲರನನ್ನು ಕೋಚ್ ಸೃಷ್ಟಿಸಲು ಸಾಧ್ಯವೇ ಇಲ್ಲ ಎಂದು ಭಾರತದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ತಿಳಿಸಿದ್ದಾರೆ.
33 ವರ್ಷದ ಶಮಿ ವರ್ಷದಿಂದ ವರ್ಷಕ್ಕೆ ತಮ್ಮ ಬೌಲಿಂಗ್ ಸುಧಾರಿಸಿಕೊಳ್ಳುತ್ತಿದ್ದಾರೆ. ಶಮಿ ಅವರ ಶ್ರಮವನ್ನು ಬೌಲಿಂಗ್ ಕೋಚ್ ಪಾರಸ್ ಶ್ಲಾಘಿಸಿದರು.

ಪಿಟಿಐ ಜೊತೆ ಮಾತನಾಡಿದ ಮಾಂಬ್ರೆ, 'ತರಬೇತುದಾರರು ಶಮಿಯಂತಹ ಬೌಲರ್ ಅನ್ನು ಸೃಷ್ಟಿಸಬಹುದು ಎಂದು ನಾನು ಹೇಳಿದರೆ, ನಾನು ಸುಳ್ಳು ಹೇಳುತ್ತೇನೆ. ಒಬ್ಬ ಬೌಲರ್ ಪ್ರತಿ ಬಾರಿಯೂ ಸೀಮ್ ಹಿಡಿತ ಸಾಧಿಸಿ ಚೆಂಡನ್ನು ಬೌಲ್ ಮಾಡಲು ಸಾಧ್ಯವಾದರೆ, ಪ್ರಪಂಚದ ಇತರ ಪ್ರತಿಯೊಬ್ಬ ಬೌಲರ್ ಶಮಿ ಆಗುತ್ತಾನೆ. ಇದು ಶಮಿ ಕಠಿಣ ಪರಿಶ್ರಮದಿಂದ ಸಂಪಾದಿಸಿದ ಕೌಶಲ್ಯ. ವರ್ಷದಿಂದ ವರ್ಷಕ್ಕೆ ಶ್ರಮವಹಿಸಿ ಅತ್ಯುತ್ತಮ ಬೌಲರ್ ಆಗಿ ತಮ್ಮನ್ನು ತಾವು ರೂಪಿಸಿಕೊಳ್ಳುದ್ದಾರೆ.
ಚೆಂಡನ್ನು ಸೀಮ್ ಕೆಳಗೆ ಬೌಲ್ ಮಾಡುವುದು ಮತ್ತು ಸರಿಯಾದ ಅಡ್ಜಸ್ಟ್ ಮೆಂಟ್ ನೊಂದಿಗೆ ಯಾವುದೇ ದಿಕ್ಕಿನಲ್ಲಿ ತಿರುಗಿಸುವ ಅಪರೂಪದ ಕೌಶಲ್ಯ ಅವರಿಗೆ ಕರಗತವಾಗಿದೆ ಎಂದು ಮಾಂಬ್ರೆ ಹೇಳುತ್ತಾರೆ. ಅನೇಕ ಬೌಲರ್‌ಗಳು ಚೆಂಡನ್ನು ಸೀಮ್‌ನಲ್ಲಿ ಬೌಲ್ ಮಾಡುತ್ತಾರೆ ಆದರೆ ಪಿಚ್‌ನಲ್ಲಿ ಬಿದ್ದ ನಂತರ ಅದು ನೇರವಾಗಿ ಹೋಗುತ್ತದೆ ಎಂದು ತಿಳಿಸಿದರು.
ಬುಮ್ರಾ ಬಗ್ಗೆ ಹೇಳಿದ್ದೇನು?
ಮಾಂಬ್ರೆ ಅವರು ಜಸ್ಪ್ರೀತ್ ಬುಮ್ರಾ ಅವರ ಬಗ್ಗೆ ಮಾತನಾಡಿ, 'ಬುಮ್ರಾ ತನ್ನ ಭಿನ್ನ ಶೈಲಿಯಿಂದಲೇ ಚೆಂಡನ್ನು ಒಳಗೆ ಅಥವಾ ಹೊರಗೆ ತೆಗೆದುಕೊಳ್ಳುತ್ತಾನೆ. ಇದು ಒಂದು ಕಲೆ ಮತ್ತು ಅದನ್ನು ಪರಿಪೂರ್ಣಗೊಳಿಸಲು ಸಾಕಷ್ಟು ಶ್ರಮ ಮತ್ತು ಸಮರ್ಪಣೆ ಬೇಕಾಗುತ್ತದೆ. ನನ್ನ ಪ್ರಕಾರ ಟೆಸ್ಟ್ ಪಂದ್ಯಗಳಲ್ಲಿ ನಮ್ಮಲ್ಲಿ ಬುಮ್ರಾ, ಶಮಿ ಮತ್ತು ಇಶಾಂತ್ ಶರ್ಮಾ ಈ ರೀತಿಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ನನ್ನ ಕನಸಿನಲ್ಲಿಯೂ ನಾನು ಅಂತಹ ಬೌಲಿಂಗ್ ಪ್ರದರ್ಶನವನ್ನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಕಳೆದ ತಿಂಗಳು ಭಾರತದಲ್ಲಿ ನಡೆದ 2023 ರ ವಿಶ್ವಕಪ್‌ನಲ್ಲಿ ಭಾರತೀಯ ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಶಮಿ-ಬುಮ್ರಾ ಮತ್ತು ಸಿರಾಜ್ ಅವರ ವೇಗದ ಬೌಲಿಂಗ್ ಮೂಲಕ ವಿಶ್ವದಲ್ಲಿ ಸಂಚಲನ ಮೂಡಿಸಿದ್ದಾರೆ. ಸ್ಪಿನ್ ಜೋಡಿ ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಕೂಡ ತಮ್ಮ ಮೋಡಿಯ ಕಲೆಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ. ಇಡೀ ವಿಶ್ವಕಪ್‌ನಲ್ಲಿ ಭಾರತದ ಬೌಲಿಂಗ್ ಪ್ರದರ್ಶನ ಇತರ ತಂಡಗಳಿಗೆ ಹೋಲಿಸಿದರೆ ಅತ್ಯುತ್ತಮವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications