Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಡೇಜಾ, ರೈನಾ, ಡು ಪ್ಲೆಸಿಸ್ ಅಲ್ಲ, ಚೆನ್ನೈ ತಂಡದ ಗೇಮ್ ಚೇಂಜರ್ ಈತನೇ ಎಂದ ಪಾರ್ಥೀವ್ ಪಟೇಲ್

Parthiv Patel names the primary game-changer for CSK in ipl 2021

2020ರ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿ ಟೀಕೆಗೆ ಗುರಿಯಾಗಿದ್ದ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿದೆ. ಮೊದಲ ಸುತ್ತಿನ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಸಿಎಸ್‌ಕೆ ಅಂಕಪಟ್ಟಿಯಲ್ಲಿಯೂ ಅಗ್ರ ಎರಡನೇ ತಂಡವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಸಿಎಸ್‌ಕೆ ತಂಡದ ಗೇಮ್ ಚೇಂಜರ್ ಯಾರು ಎಂದು ಹೇಳಿದ್ದಾರೆ.

ಸಾರ್‌ಸ್ಪೋರ್ಟ್ ಜೊತೆಗೆ ಮಾತನಾಡಿದ ಪಾರ್ಥೀವ್ ಪಟೇಲ್ ಈ ಬಾರಿಯ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಸಿಎಸ್‌ಕೆ ಪಾಲಿಗೆ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ.

ಪಾರ್ಥಿವ್ ಹೆಸರಿಸಿದ ಗೇಮ್ ಚೇಂಜರ್

ಪಾರ್ಥಿವ್ ಹೆಸರಿಸಿದ ಗೇಮ್ ಚೇಂಜರ್

ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಗೇಮ್ ಚೇಂಜರ್ ಆಗಿ ಕರ್ತವ್ಯವನ್ನು ನಿಭಾಯಿಸಿದ್ದು ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯೀನ್ ಅಲಿ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ಅಲಿ ನಿರ್ವಹಿಸಿದ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು ಆತನೇ ತಂಡದ ಗೇಮ್ ಚೇಂಜರ್ ಎಂದು ಪಟೇಲ್ ಆಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಾರಣ ಹೇಳಿದ ಪಾರ್ಥಿವ್

ಕಾರಣ ಹೇಳಿದ ಪಾರ್ಥಿವ್

"ನನ್ನ ಪ್ರಕಾರ ಮೊಯೀನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಗೇಮ್ ಚೇಂಜರ್. ಆತ ಆರಂಭಿಕನಾಗಿ ಕಣಕ್ಕಿಳಿಯಬಲ್ಲ, ಮೂರನೇ ಕ್ರಮಾಂಕದಲ್ಲಿ ಆಡಬಲ್ಲ. ತನ್ನ ಜವಾಬ್ಧಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ಆರಂಭಿಕರಾಗಿ ಫಾಪ್ ಹಾಗೂ ಋತುರಾಜ್ ಒದಗಿಸಿದ ಯಶಸ್ಸನ್ನು ಮುಂದುವರಿಸಬಲ್ಲ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಆತ ನೀಡುವ ಅತ್ಯುತ್ತಮ ಪ್ರದರ್ಶನ ನೋಡಲು ನಿಜಕ್ಕೂ ಸುಂದರ" ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ತಂಡವಾಗಿ ಕಮ್‌ಬ್ಯಾಕ್ ಮಾಡುವುದು ಮುಖ್ಯ

ತಂಡವಾಗಿ ಕಮ್‌ಬ್ಯಾಕ್ ಮಾಡುವುದು ಮುಖ್ಯ

"ಒಂದು ತಂಡವಾಗಿ ಕಮ್‌ಬ್ಯಾಕ್ ಮಾಡುವುದು ಬಹಳ ಮುಖ್ಯ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಗಿರುವುದು ಇದೇ. ಆರಂಭಿಕರು ಖಂಡಿತವಾಗಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ಇಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಅಂಬಾಟಿ ರಾಯುಡು, ಸುರೇಶ್ ರೈನಾ ಅರ್ಧ ಶತಕವನ್ನು ಬಾರಿಸಿದ್ದಾರೆ. ರವೀಂದ್ರ ಜಡೇಜಾ ಕೂಡ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ" ಎಂದು ಪಟೇಲ್ ಹೇಳಿದ್ದಾರೆ.

ನಾಯಕನ ನಿರ್ಧಾರಕ್ಕೆ ಪಾರ್ಥಿವ್ ಪ್ರಶಂಸೆ

ನಾಯಕನ ನಿರ್ಧಾರಕ್ಕೆ ಪಾರ್ಥಿವ್ ಪ್ರಶಂಸೆ

ಇನ್ನು ಇದೇ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನಿರ್ಧಾರವನ್ನು ಪಾರ್ಥೀವ್ ಪಟೇಲ್ ಪ್ರಶಂಸಿಸಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಮೊಯೀನ್ ಅಲಿಗೆ ಮೂರನೇ ಕ್ರಮಾಂಕದಲ್ಲಿ ಆಡಲು ಇಳಿಸಿದ ಧೋನಿ ನಿರ್ಧಾರ ಬಹಳ ಬುದ್ದಿವಂತಿಕೆಯ ನಿರ್ಧಾರ ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ.

Story first published: Sunday, May 9, 2021, 18:09 [IST]
Other articles published on May 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+