ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಜೊತೆಗೆ ಈ ಆಟಗಾರನೇ ಕಣಕ್ಕಿಳಿಯಬೇಕು: ಪಾರ್ಥೀವ್ ಪಟೇಲ್

ಆಸ್ಟ್ರೇಲಿಯಾದಲ್ಲಿ ಈ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅವರ ಜೊತೆಗೆ ಕಣಕ್ಕಿಳಿಯಬೇಕಾದ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಯಾರು ಎಂಬುದನ್ನ ಮಾಜಿ ವಿಕೆಟ್‌ಕೀಪರ್ ಮತ್ತು ವೀಕ್ಷಕ ವಿವರಣೆಗಾರ ಪಾರ್ಥಿವ್ ಪಟೇಲ್ ಸಲಹೆ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಮೊದಲ ಟಿ20 ಪಂದ್ಯದ ನಂತರ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಜೊತೆಗೂಡಿ ಯುವ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದ್ದರು. ಆರಂಭಿಕ ಜೊತೆಗಾರನಾಗಿ ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿದರು. ಆದ್ರೆ 35 ರನ್ ಗಳಿಸಿದ್ದ ವೇಳೆ ಔಟಾದರು. 42 ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಹೊಡೆದ ಇಶಾನ್, ಕೆಟ್ಟ ಆರಂಭವನ್ನು ಪಡೆದರೂ, ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.
ಅನುಭವದ ದೃಷ್ಟಿಯಿಂದ ಉಪನಾಯಕ ಆಗಿರುವ ಕೆಎಲ್ ರಾಹುಲ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ ಆರಂಭಿಕ ಪಾಲುದಾರರಾಗಿ ಆಡಬೇಕು ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಮತ್ತು ರಾಹುಲ್ ಆರಂಭಿಕರಾಗಿದ್ದರು. ಗಾಯದ ಸಮಸ್ಯೆಯಿಂದಾಗಿ ರಾಹುಲ್ ವಿಂಡೀಸ್ ವಿರುದ್ಧ ನಡೆಯುತ್ತಿರುವ ಸರಣಿಯಿಂದ ಹೊರಗುಳಿದಿದ್ದಾರೆ.
''ನನ್ನ ಪ್ರಕಾರ ರೋಹಿತ್ ಅವರ ಆರಂಭಿಕ ಪಾಲುದಾರನಾಗಿ ರಾಹುಲ್ ಅವರ ದೀರ್ಘಾವಧಿಯ ಆಯ್ಕೆಯಾಗಿದೆ. ರಾಹುಲ್ ತಂಡಕ್ಕೆ ವಾಪಸ್ಸಾದರೆ, ರೋಹಿತ್ ಜೊತೆ ಓಪನಿಂಗ್ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಮತ್ತು ರಾಹುಲ್ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಓಪನಿಂಗ್ ಮಾಡುತ್ತಾರೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ'' ಎಂದು ಪಾರ್ಥಿವ್ ಹೇಳಿದರು.
ಸರಿಯಾದ ಲಯದಲ್ಲಿದ್ದರೆ ಆರಂಭಿಕ ಆಟಗಾರನಾಗಿ ಇಶಾನ್ ಕಿಶನ್ ಕೆಟ್ಟ ಆಯ್ಕೆ ಎಂದು ನನಗೆ ಯಾವುದೇ ಅಭಿಪ್ರಾಯವಿಲ್ಲ. ಇಶಾನ್ ಉತ್ತಮ ಲಯದಲ್ಲಿದ್ದಾರೆ, ರೋಹಿತ್‌ಗೆ ಕ್ರೀಸ್‌ಗೆ ಕಚ್ಚಿಕೊಳ್ಳಲು ಸ್ವಲ್ಪ ಸಮಯಾವಕಾಶ ನೀಡಲಾಗುತ್ತದೆ. ಆದರೆ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಮತ್ತು ರಾಹುಲ್ ಆರಂಭಿಕರಾಗುತ್ತಾರೆ ಎಂದು ಪಾರ್ಥಿವ್ ಪಟೇಲ್ ಅಂದಾಜಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications