For Quick Alerts
ALLOW NOTIFICATIONS  
For Daily Alerts
 

ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈ ಮೂವರು ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದು ಅನುಮಾನ!

By ನಾಗೇಶ್

ಐಸಿಸಿ 2023 ಏಕದಿನ ವಿಶ್ವಕಪ್‌ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಎಲ್ಲ ತಂಡಗಳು ತಮ್ಮ ಬೆಸ್ಟ್ ತಂಡವನ್ನು ಕಟ್ಟುವಲ್ಲಿ ನಿರತವಾಗಿವೆ. ಹಲವು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಸ್ಟಾರ್ ಆಟಗಾರರು ಆಡುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಇನ್ನು ಖಚಿತ ಮಾಹಿತಿ ಇಲ್ಲ. ಈ ಪಟ್ಟಿಯಲ್ಲಿ ಹಲವು ಸ್ಟಾರ್ ಆಟಗಾರರು ಇದ್ದು, ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೂಡ ಇದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಐಸಿಸಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇವರು ಐಸಿಸಿ ನಿಯೋಜಿತ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಇವರು ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಇನ್ನು ಯಾವುದೇ ಅಪ್ ಡೇಟ್ ಲಭ್ಯವಿಲ್ಲ. ಇವರನ್ನು ಹೊರತು ಪಡಿಸಿದರೆ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಕೂಡ ವಿಶ್ವಕಪ್‌ನಲ್ಲಿ ಆಡುವುದು ಅನುಮಾನವಾಗಿದೆ.

 Participation Of Three Prominent Cricket Stars in Doubt for 2023 ODI World Cup

ವಿಶ್ವಕಪ್ 2023 ಕೇವಲ ಎರಡು ತಿಂಗಳಿಗಿಂತ ಕಡಿಮೆ ಸಮಯ ಇರುವಾಗ, ಆಟಗಾರರ ಫಿಟ್ನೆಸ್ ಮತ್ತು ಲಭ್ಯತೆಯ ಬಗ್ಗೆ ಊಹಾಪೋಹಗಳು ಎದ್ದಿವೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಫಿಟ್ನೆಸ್, ಫಾರ್ಮ್ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಅನೇಕ ತಾರೆಗಳು ಈ ಪಂದ್ಯಾವಳಿಯಿಂದ ದೂರ ಸರಿಯಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ನಿವೃತ್ತಿ ಪಡೆದುಕೊಂಡಿರುವ ಸ್ಟೋಕ್ಸ್

2019 ರಲ್ಲಿ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್ ರೌಂಡರ್ ಮತ್ತು ಆಂಗ್ಲರ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದಾಗ್ಯೂ, ಅವರು ವಿಶ್ವಕಪ್‌ಗಾಗಿ ನಿವೃತ್ತಿಯನ್ನು ಹಿಂಪಡೆಯಬಹುದು ಎಂದು ವರದಿಯಾಗಿತ್ತು. ಇದಕ್ಕೂ ಮುನ್ನ 2022ರಲ್ಲಿ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಸ್ಟೋಕ್ಸ್ ಪ್ರಮುಖ ಪಾತ್ರ ವಹಿಸಿದ್ದರು.

ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಮಾಡಲು ಅವರು ಏಕದಿನ ಪಂದ್ಯಗಳಿಗೆ ಮರಳುತ್ತಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಸ್ಟಾರ್ ಪ್ಲೇಯರ್ ಒಂದು ವೇಳೆ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆದು ಇಂಗ್ಲೆಂಡ್ ಸೇರಿಕೊಂಡರೆ, ತಂಡಕ್ಕೆ ಆನೆ ಬಲ ಸಿಗಲಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆಯಲ್ಲಿ ಇವರು ತಂಡಕ್ಕೆ ಬೂಸ್ಟ್ ನೀಡ ಬಲ್ಲರು. ಇವರ ಆಗಮನದಿಂದ ಇಂಗ್ಲೆಂಡ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮತ್ತಷ್ಟು ಬಲ ಪಡೆದುಕೊಳ್ಳಲಿದೆ. ಅನೇಕರು ಸ್ಟೋಕ್ಸ್ ನಿವೃತ್ತಿಯಿಂದ ಮರಳಬೇಕು ಎಂದು ಒತ್ತಾಯಿಸಿದ್ದಾರೆ.

ಶಿಖರ್ ಧವನ್‌ಗೆ ಸಿಗುತ್ತಾ ಅವಕಾಶ

ದೀರ್ಘಕಾಲದವರೆಗೆ ಟೀಂ ಇಂಡಿಯಾದಿಂದ ಹೊರಗುಳಿದಿರುವ ಶಿಖರ್ ಧವನ್ 2023ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಅನುಮಾನವಾಗಿದೆ. ಕಳೆದ 8 ತಿಂಗಳಿಂದ ಧವನ್ ಭಾರತ ಪರ ಏಕದಿನ ಪಂದ್ಯ ಆಡಿಲ್ಲ. ಆದಾಗ್ಯೂ, ಅವರನ್ನು ಐಸಿಸಿ ಪಂದ್ಯಾವಳಿಯ ಆಟಗಾರ ಎಂದು ಪರಿಗಣಿಸಲಾಗಿದೆ. ಐಸಿಸಿ ಪಂದ್ಯಾವಳಿಗಳಲ್ಲಿ ಶಿಖರ್ 20 ಪಂದ್ಯಗಳಲ್ಲಿ, 65ರ ಸರಾಸರಿಯಲ್ಲಿ ರನ್ ಗಳಿಸಿದ್ದು, 6 ಶತಕಗಳನ್ನು ಸಿಡಿದ್ದಾರೆ. 2023ರ ವಿಶ್ವಕಪ್ ತಂಡದಲ್ಲಿ ಧವನ್ ಸ್ಥಾನ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ನ್ಯೂಜಿಲೆಂಡ್‌ನ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಗಾಯದ ಕಾರಣ ತಂಡದಿಂದ ಬಹಳ ಸಮಯದಿಂದ ದೂರವಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇನ್ ವಿಲಿಯಮ್ಸನ್ ಮೈದಾನಕ್ಕೆ ಇಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಲಿಯಮ್ಸನ್ ವಿಶ್ವ ಕಪ್ ತಂಡದ ಭಾಗವಾಗುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

Story first published: Tuesday, August 15, 2023, 12:44 [IST]
Other articles published on Aug 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+