ಪಾಸ್‌ಪೋರ್ಟ್, ವೀಸಾ ಸಮಸ್ಯೆ: ತಂಡ ಸೇರದ ವೈದ್ಯರು, ಅಂಡರ್ -19 ತಂಡದೊಂದಿಗೆ ಇಲ್ಲ ಮ್ಯಾನೇಜರ್
ವೀಸಾ ಮತ್ತು ಪಾಸ್‌ಪೋರ್ಟ್ ಸಿಗದ ಕಾರಣ ಪಾಕಿಸ್ತಾನ ಕ್ರಿಕೆಟ್ ತಂಡ ಸಮಸ್ಯೆ ಎದುರಿಸುತ್ತಿದೆ. ಪಾಕಿಸ್ತಾನ ಹಿರಿಯ ತಂಡದ ವೈದ್ಯರಿಗೆ ಆಸ್ಟ್ರೇಲಿಯಾ ವೀಸಾ ಸಿಕ್ಕಿಲ್ಲ. ಇದರಿಂದಾಗಿ ವೈದ್ಯರಿಲ್ಲದೇ ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದೆ. ಇನ್ನು, ಅಂಡರ್ 19 ತಂಡದ ಮ್ಯಾನೇಜರ್‌ಗೆ ವೀಸಾ ಸಿಗದ ಕಾರಣ, ಯುಎಇಯಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯಾ ಕಪ್‌ನಲ್ಲಿ ತಂಡವು ಮ್ಯಾನೇಜರ್ ಸಮಸ್ಯೆ ಎದುರಿಸುತ್ತಿದೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯುವ ಸರಣಿಗೆ ಪಾಕಿಸ್ತಾನ ತಂಡದ ಅಧಿಕೃತ ವೈದ್ಯ ಸೊಹೈಲ್ ಸಲೀಮ್ ಇನ್ನೂ ತಂಡದೊಂದಿಗೆ ತೊಡಗಿಸಿಕೊಂಡಿಲ್ಲ. ಡಾ.ಸಲೀಮ್‌ಗೆ ವೀಸಾ ಪಡೆಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಪ್ರಯತ್ನಿಸುತ್ತಿದೆ ಮತ್ತು ವೀಸಾ ಬಂದ ತಕ್ಷಣ ಅವರು ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ವೇಳೆ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಶೋಯೆಬ್ ಮುಹಮ್ಮದ್ ಅಂಡರ್ 19 ತಂಡದ ಮ್ಯಾನೇಜರ್ ಆಗಿದ್ದರು. ಅವರು ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಭಾಗವಹಿಸುವ ಪಾಕಿಸ್ತಾನದ ತಂಡದ ಜೊತೆ ತೆರಳ ಬೇಕಿತ್ತು. ಅವರಿಗೂ ತಂಡದೊಂದಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಶೋಯೆಬ್ ಕೆಲವು ಪಾಸ್‌ಪೋರ್ಟ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದನ್ನು ಮಂಡಳಿಯು ಪರಿಹರಿಸುತ್ತಿದೆ. ಅವರು ಶೀಘ್ರದಲ್ಲೇ ಯುಎಇ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಅಬ್ರಾರ್ ಅಹ್ಮದ್ ಬದಲಿಗೆ ಪಾಕ್ ತಂಡದಲ್ಲಿ ಸ್ಥಾನ ಪಡೆದಿರುವ ಆಫ್ ಸ್ಪಿನ್ನರ್ ಸಾಜಿದ್ ಖಾನ್ ಅವರಿಗೂ ವೀಸಾ ಸಿಕ್ಕಿಲ್ಲ. ಈ ಕಾರಣದಿಂದಾಗಿ, ಅವರು ಇಲ್ಲಿಯವರೆಗೆ ತಂಡವನ್ನು ಸೇರಲು ಸಾಧ್ಯವಾಗಲಿಲ್ಲ. ಯಾವುದೇ ಪ್ರವಾಸಕ್ಕೆ ತಂಡದಲ್ಲಿ ಅಧಿಕಾರಿಗಳನ್ನು ಹೆಸರಿಸುವ ಮೊದಲು, ಅವರು ತಮ್ಮ ತಂಡಗಳೊಂದಿಗೆ ಸಮಯಕ್ಕೆ ಸೇರುತ್ತಾರೆ ಎಂದು ಮಂಡಳಿಯು ಖಚಿತಪಡಿಸಿಕೊಳ್ಳಬೇಕು. ಈ ಎಲ್ಲ ಕ್ರಾಸ್ ಚೆಕ್‌ಗಳನ್ನು ಮಾಡಿಕೊಂಡಾಗಲೂ ಈ ತಪ್ಪುಗಳು ನಡೆದಿವೆ.

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಸರಣಿಯ ಮೊದಲ ಪಂದ್ಯ ಡಿಸೆಬರ್ 14 ರಿಂದ ಪರ್ತ್‌ನಲ್ಲಿ, ಎರಡನೇ ಪಂದ್ಯ 26 ರಿಂದ ಮೆಲ್ಬೋರ್ನ್‌ನಲ್ಲಿ, ಮೂರನೇ ಪಂದ್ಯ ಜನೇವರಿ 3ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ ಪಾಕಿಸ್ತಾನವು ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತವನ್ನು ಎದುರಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications