Pat Cummins: ಐಪಿಎಲ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಪ್ಯಾಟ್ ಕಮ್ಮಿನ್ಸ್: RCB ವಿರುದ್ಧ ಜಿದ್ದು ಗೆದ್ದ SRH!
ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡ ಕಟ್ಟಿಕೊಳ್ಳಲು ಸ್ಟಾರ್ ಆಟಗಾರರಿಗಾಗಿ ಬಿಡ್ಡಿಂಗ್ ವಾರ್‌ನಲ್ಲಿ ಪಾಲ್ಗೊಂಡಿದ್ದವು.
ಇದೇ ವೇಳೆ ಆಸ್ಟ್ರೇಲಿಯಾದ ಏಕದಿನ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮ್ಮಿನ್ಸ್ 2024ರ ಐಪಿಎಲ್ ಹರಾಜಿನಲ್ಲಿ ದೊಡ್ಡ ಸದ್ದು ಮಾಡಿದರು.

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು 20.50 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತು. ಇದು 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನನ್ನಾಗಿ ಮಾಡಿತು.
ಬೆಂಗಳೂರು ಮೂಲದ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ನಡುವೆ ಬಿಡ್ಡಿಂಗ್ ವಾರ್ ಏರ್ಪಟ್ಟಿತು. ಕೊನೆಗೂ ಸನ್‌ರೈಸರ್ಸ್ ಹೈದರಾಬಾದ್ ಜಿದ್ದನ್ನು ಗೆದ್ದು ಬೀಗಿತು.

ಪ್ಯಾಟ್ ಕಮ್ಮಿನ್ಸ್ ಹರಾಜಿನಲ್ಲಿ ಭಾರೀ ಸದ್ದು ಮಾಡಿದರು. ಆರಂಭದಲ್ಲಿ ಸಿಎಸ್‌ಕೆ ಮತ್ತೆ ಆರಂಭಿಕ ಬಿಡ್ ಅನ್ನು ಮಾಡಿತು ಮತ್ತು ಮುಂಬೈ ಇಂಡಿಯನ್ಸ್‌ನೊಂದಿಗೆ ಮುಖಾಮುಖಿ ಬಳಿಕ 4 ಕೋಟಿ ರೂಪಾಯಿ ನಂತರ ಹಿಂದೆ ಸರಿಯಿತು.
ಚೆನ್ನೈ ಸೂಪರ್ ಕಿಂಗ್ಸ್ ಬಿಡ್ಡಿಂಗ್ ವಾರ್‌ನಲ್ಲಿ ತೊಡಗಿರುವಾಗ ಆರ್‌ಸಿಬಿ ಸೇರಿಕೊಂಡಿತು. ಆ ಬಳಿಕ ಸಿಎಸ್‌ಕೆ ಹಿಂದೆ ಸರಿಯಿತು. ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ಫ್ರಾಂಚೈಸಿಗಳು ಕೊನೆಯವರೆಗೂ ಪ್ಯಾಟ್ ಕಮ್ಮಿನ್ಸ್‌ಗಾಗಿ ಹೋರಾಟ ನಡೆಸಿದವು. ದಾಖಲೆಯ ಮೊತ್ತ ನೀಡುವ ಮೂಲಕ ಕಾವ್ಯ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ ಪ್ಯಾಟ್ ಕಮ್ಮಿನ್ಸ್ ಅವರನ್ನು ಖರೀದಿಸಿತು.
ನವೆಂಬರ್ 19ರಂದು 2023ರ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ನಿಖರವಾಗಿ ಒಂದು ತಿಂಗಳ (ಡಿಸೆಂಬರ್ 19ರಂದು) ಅಂತರದಲ್ಲಿ ಪ್ಯಾಟ್ ಕಮಿನ್ಸ್ ಮತ್ತೊಂದು ಜಾಕ್‌ಪಾಟ್ ಹೊಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications