ಹ್ಯಾಜಲ್‌ವುಡ್ ದಾಳಿಗೆ ನಲುಗಿದ ವಿಂಡೀಸ್: ತವರಿನಲ್ಲಿ ಮತ್ತೊಮ್ಮೆ ಅಬ್ಬರಿಸಿದ ಆಸೀಸ್
ಅಡಿಲೇಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ, 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ತಂಡ ಮಾಡಲು ಸಾಧ್ಯವಾಗದ ಸಾಧನೆಯನ್ನು ಆಸ್ಟ್ರೇಲಿಯಾ ತಂಡ ಸಾಧಿಸಿದೆ. ಪ್ಲೇಯಿಂಗ್-11 ರಲ್ಲಿ ನಾಲ್ವರು ಬೌಲರ್‌ಗಳು ಟೆಸ್ಟ್ ಪಂದ್ಯಗಳಲ್ಲಿ 250+ ವಿಕೆಟ್‌ಗಳನ್ನು ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಗಿದೆ.
ಇದುವರೆಗೆ ಟೆಸ್ಟ್‌ನಲ್ಲಿ ಈ ರೀತಿ ಸಾಧನೆ ಮಾಡಲು ಸಾಧ್ಯವಗಿರಲಿಲ್ಲ. ಈ ಅಂಕಿ ಅಂಶದ ಆಧಾರದ ಮೇಲೆ, ಆಸ್ಟ್ರೇಲಿಯಾದ ಪ್ರಸ್ತುತ ಬೌಲಿಂಗ್ ದಾಳಿಯು ಇತಿಹಾಸದಲ್ಲಿ ಅತ್ಯಂತ ಆಕ್ರಮಣಕಾರಿ ಬೌಲಿಂಗ್ ವಿಭಾಗ ಎಂದು ಹೇಳಬಹುದು.

ಆಸ್ಟ್ರೇಲಿಯನ್ ತಂಡವು ಅಡಿಲೇಡ್ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಕಣಕ್ಕೆ ಇಳಿದವು. ಆಸೀಸ್ ಹನ್ನೊಂದರ ಬಳಗದಲ್ಲಿ ಮೂವರು ಬೌಲರ್‌ಗಳಿದ್ದರು. ಅವರು 250 ಟೆಸ್ಟ್ ವಿಕೆಟ್‌ಗಳ ಗಡಿಯನ್ನು ದಾಟಿದ್ದರು. ಆದರೆ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮತ್ತೊಬ್ಬ ಬೌಲರ್ 250 ಟೆಸ್ಟ್ ವಿಕೆಟ್‌ಗಳ ಸಂಖ್ಯೆಯನ್ನು ದಾಟಿದರು.
ಈ ಪಟ್ಟಿಗೆ ಜೋಶ್ ಹ್ಯಾಜಲ್‌ವುಡ್ ಲೇಟೆಸ್ಟ್ ಆಗಿ ಸೇರ್ಪಡೆಗೊಂಡಿದ್ದಾರೆ. ಹ್ಯಾಜಲ್‌ವುಡ್ 249 ಟೆಸ್ಟ್ ವಿಕೆಟ್‌ಗಳೊಂದಿಗೆ ಈ ಪಂದ್ಯ ಆಡಿದರು. ಇಲ್ಲಿ ಅಲೆಕ್ ಅಥಾನಾಜೆ ಅವರ ವಿಕೆಟ್ ಪಡೆಯುವದರೊಂದಿಗೆ 250 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು.

ಈ ಪಂದ್ಯದಲ್ಲಿ ಹ್ಯಾಜಲ್‌ವುಡ್ ವೆಸ್ಟ್ ಇಂಡೀಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದರು. ಇವರೊಂದಿಗೆ ಆಸ್ಟ್ರೇಲಿಯಾದ ಇತರ ಬೌಲರ್‌ಗಳು ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 10 ವಿಕೆಟ್ ಗಳಿಂದ ಸೋಲು ಕಂಡಿತು.
ಆಸ್ಟ್ರೇಲಿಯಾದ ಪರ ಸ್ಪಿನ್ನರ್ ನಾಥನ್ ಲಿಯಾನ್ ಸದ್ಯದ ಬೌಲಿಂಗ್ ದಾಳಿಯಲ್ಲಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಲಿಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 511 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರ ನಂತರ ಮಿಚೆಲ್ ಸ್ಟಾರ್ಕ್ ಹೆಸರು ಬರುತ್ತದೆ.
ಸ್ಟಾರ್ಕ್ ಅವರ ಖಾತೆಯಲ್ಲಿ 348 ಟೆಸ್ಟ್ ವಿಕೆಟ್, ಪ್ಯಾಟ್ ಕಮಿನ್ಸ್ ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ 250+ ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದರು. ಈಗ ಅವರ ಖಾತೆಯಲ್ಲಿ 262 ವಿಕೆಟ್‌ಗಳಿವೆ. ನಾಲ್ಕನೇ ಬೌಲರ್ ಜೋಶ್ ಹ್ಯಾಜಲ್‌ವುಡ್, ಅವರು ಈಗ 258 ಟೆಸ್ಟ್ ವಿಕೆಟ್‌ಗಳಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications