ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎರಡು ಪಂದ್ಯಗಳು ನಡೆಯಲಿದ್ದು, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಕಾದಾಟ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದಾಗಿದೆ. ಪಂಜಾಬ್ ಮತ್ತೆ ತನ್ನ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದ್ದರೆ, ಇತ್ತ ಸಿಎಸ್‌ಕೆ ಸೋಲುಗಳ ಸರಪಳಿಯಿಂದ ಹೊರ ಬರುವ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈಗಾಗಲೇ ತವರಿನಲ್ಲಿ ಒಂದು ಪಂದ್ಯವನ್ನು ಸೋತಿರುವ ಪಂಜಾಬ್, ಅಭಿಮಾನಿಗಳಿಗೆ ಗಿಫ್ಟ್ ನೀಡಲು ಯೋಜನೆ ರೂಪಿಸಿಕೊಂಡಿದೆ.
ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಈ ವೇಳೆ ಡ್ರೀಮ್ ಇಲೆವೆನ್ ತಂಡವನ್ನು ಮಾಡುವಾಗ ಯಾರನ್ನು ತಂಡದಲ್ಲಿ ಇಟ್ಟುಕೊಳ್ಳುವುದು ಎಂಬ ಚಿಂತೆ ಇದ್ದೇ ಇರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ. ಅಂಕಿ ಅಂಶಗಳನ್ನು ನೋಡಿದರೆ ಸಿಎಸ್‌ಕೆ ಸ್ಟ್ರಾಂಗ್ ಆಗಿದೆ. ಆದರೆ ಪ್ರಸಕ್ತ ಲೀಗ್‌ನಲ್ಲಿ ಪಂಜಾಬ್ ಆಟ ಎದುರಾಳಿಗಳ ನಿದ್ದೆ ಗೆಡಿಸಿದೆ. ಈ ಲೆಕ್ಕಾಚಾರದಲ್ಲಿ 11 ಆಟಗಾರರನ್ನು ಆರಿಸುವುದು ಕಷ್ಟ. ಆದರೆ 18ನೇ ಆವೃತ್ತಿಯಲ್ಲಿ ನೀಡುತ್ತಿರುವ ಪ್ರದರ್ಶನವನ್ನು ಆಧರಿಸಿ ಆಟಗಾರರಿಗೆ ಮಣೆ ಹಾಕಲಾಗಿದೆ.

ಚೆನ್ನೈ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಭರವಸೆ ಮೂಡಿಸಿರುವ ಆಟಗಾರ. ಈ ಪ್ಲೇಯರ್ ತನ್ನ ನೈಜ್ಯ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದೇ ಆದಲ್ಲಿ ಗೇಮ್ ಚೇಂಜ್ ಮಾಡಬಹುದು. ಪಂಜಾಬ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಸ್ಟಾರ್ ಆಟಗಾರರು ಇದ್ದಾರೆ. ಈ ವೇಳೆ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನ ತಂಡದ ಮನೋ ಬಲವನ್ನು ಹೆಚ್ಚಿಸಿದೆ. ನಿಮ್ಮ ತಂಡದಲ್ಲಿ ಎರಡೂ ತಂಡದ ನಾಯಕರನ್ನು ಹಾಕಿಕೊಳ್ಳುವುದು ಬೆಸ್ಟ್.
ವಿಕೆಟ್ ಕೀಪರ್: ಎರಡೂ ತಂಡದಲ್ಲೂ ಉತ್ತಮ ವಿಕೆಟ್ ಕೀಪರ್‌ಗಳು ಇದ್ದಾರೆ. ಆದರೆ ಪ್ರಸಕ್ತ ಫಾರ್ಮ್ ನೋಡಿದರೆ, ಪಂಜಾಬ್ ವಿಕೆಟ್ ಕೀಪರ್ ಪ್ರಭಸಿಮ್ರನ್ ಸಿಂಗ್ ಅವರ ಮೇಲೆ ಹೆಚ್ಚಿನ ಭರವಸೆ ಇಡಬಹುದು. ಕಾರಣ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದರಿಂದ ಇವರಿಂದ ನಿಮ್ಮ ತಂಡಕ್ಕೆ ಹೆಚ್ಚಿನ ಲಾಭ ಆಗುವುದು ಕಡಿಮೆ.

ಬ್ಯಾಟರ್ಸ್: ಒಟ್ಟಾರೆ ಪ್ರದರ್ಶನವನ್ನು ನೋಡಿದಾಗ ಚೆನ್ನೈ ತಂಡದ ಡ್ವೇನ್ ಕಾನ್ವೆ ಅವರಿಗೆ ಮಣೆ ಹಾಕುವುದು ಸೂಕ್ತ. ರುತುರಾಜ್ ಗಾಯಕ್ವಾಡ್ ಭರವಸೆಯ ಆಟಗಾರ. ಪಂಜಾಬ್ ತಂಡದ ಪರ ಶ್ರೇಯಸ್ ಅಯ್ಯರ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದರೆ ಬೆಸ್ಟ್.
ಆಲ್‌ರೌಂಡರ್ಸ್: ಟಿ20 ಸ್ವರೂಪದ ಅಸಲಿ ಹೀರೋಗಳಾದ ಆಲ್‌ರೌಂಡರ್ಸ್‌ಗಳು ಎರಡೂ ತಂಡಗಳಲ್ಲಿ ಇದ್ದಾರೆ. ಸಿಎಸ್‌ಕೆ ಪರ ರಚಿನ್ ರವೀಂದ್ರ ಪಸಕ್ತ ಲೀಗ್‌ನಲ್ಲಿ ಭರವಸೆ ಮೂಡಿಸಿದ್ದು ಇವರಿಗೆ ಮಣೆ ಹಾಕಬಹುದು. ಇನ್ನು ಪಂಜಾಬ್ ಪರ ನೆಹಲ್ ವಧೇರಾ, ಗ್ಲೇನ್ ಮ್ಯಾಕ್ಸ್‌ವೆಲ್ ಪರಿಸ್ಥಿತಿಗೆ ತಕ್ಕಂತೆ ಆಡುವ ಕ್ಷಮತೆ ಹೊಂದಿದ್ದಾರೆ. ಇವರ ಆಯ್ಕೆ ಬೆಸ್ಟ್.
ಬೌಲರ್ಸ್: ಪಂಜಾಬ್ ತವರಿನಲ್ಲಿ ಪಂದ್ಯವನ್ನು ಆಡುತ್ತಿರುವುದುರಿಂದ ಇಲ್ಲಿಯ ಪರಿಸ್ಥಿತಿಗಳಿಗೆ ಪಂಜಾಬ್ ನ ವೇಗಿ ಅರ್ಷದೀಪ್ ಸಿಂಗ್ ಹೊಂದಿಕೊಳ್ಳಬಹುದು. ಸಿಎಸ್‌ಕೆ ಪರ ಮತೀಶ್ ಪತಿರಾಣಾ ಹಾಗೂ ಸ್ಪಿನ್ ಬೌಲರ್ ನೂರ್ ಅಹ್ಮದ್ ಅವರ ಆಯ್ಕೆ ಒಳ್ಳೆಯದು.
ನಾಯಕ, ಉಪನಾಯ: ಪ್ರಸಕ್ತ ಫಾರ್ಮ್ ನೋಡಿದರೆ ಶ್ರೇಯಸ್ ಅಯ್ಯರ್ ಅಥವಾ ರುತುರಾಜ್ ಗಾಯಕ್ವಾಡ್ ಅವರನ್ನು ನಾಯಕರನ್ನಾಗಿ ಮಾಡುವುದು ಒಳ್ಳೆಯ ನಿರ್ಧಾರವಾಗಬಹುದು. ಇನ್ನು ಉಪನಾಯಕನ ಸ್ಥಾನಕ್ಕೆ ರಚಿನ್ ರವೀಂದ್ರ, ಗ್ಲೇನ್ ಮ್ಯಾಕ್ಸ್‌ವೆಲ್ ಉತ್ತಮ ಆಟಗಾರರು.