IPL 2022: ಸತತ 5 ಪಂದ್ಯ ಸೋತ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 2022ರ ಐಪಿಎಲ್ ಸೀಸನ್‌ನಲ್ಲಿ ಆರಂಭದಿಂದಲೇ ಎಲ್ಲವೂ ಸರಿಯಿಲ್ಲ ಎಂಬಂತೆ ಪ್ರದರ್ಶನ ತೋರಿದ್ದಲ್ಲದೆ, ಇದೀಗ ಸತತ ಐದು ಪಂದ್ಯಗಳನ್ನ ಸೋಲುವ ಮೂಲಕ ಹೀನಾಯ ಮುಖಭಂಗ ಎದುರಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನ ಕಾಣುವ ಮೂಲಕ ಮುಂಬೈ ಇಂಡಿಯನ್ಸ್ ಈ ಬಾರಿಯು ಕಪ್ ಗೆಲ್ಲುವ ಕನಸು ಬಹಳಷ್ಟು ದೂರವಾಗಿದೆ. ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಸೀಸನ್‌ನಲ್ಲೂ ಹೀನಾಯ ಪ್ರದರ್ಶನ ತೋರಿ ನಿರ್ಗಮಿಸಿತ್ತು.
ಟಾಸ್ ಸೋತು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ಪಂಜಾಬ್‌ನ ಆರಂಭಿಕ ವಿಕೆಟ್ ಪಡೆಯುವಲ್ಲಿ ಎಡವಿತು. ಶಿಖರ್ ಧವನ್ ಮತ್ತು ಮಯಾಂಕ್ ಅಗರ್ವಾಲ್ ಅರ್ಧಶತಕದ ನೆರವಿನಿಂದ ಹಾಗೂ ಕೆಳಕ್ರಮಾಂಕದಲ್ಲಿ ಜಿತೆಶ್ ಶರ್ಮಾ ಅಬ್ಬರದ ನೆರವಿನಿಂದ 198 ರನ್ ಕಲೆಹಾಕಿತು.
ಶಿಖರ್ ಧವನ್ 50 ಎಸೆತಗಳಲ್ಲಿ 70 ರನ್ ಸಿಡಿಸಿದ್ರೆ, ಮಯಾಂಕ್ ಅಗರ್ವಾಲ್ 32 ಎಸೆತಗಳಲ್ಲಿ 52 ರನ್ ಕಲೆಹಾಕಿದ್ರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ 15 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 30 ರನ್ ಕಲೆಹಾಕಿದ್ರು. ಶಾರೂಖ್ ಖಾನ್ 6 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 15 ರನ್ ಕಲೆಹಾಕಿದರು.
ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಲು ವಿಫಲಗೊಂಡಿತು. ರೋಹಿತ್ 27, ಇಶಾನ್ ಕಿಶನ್ 3, ಡೆವಾಲ್ಡ್ ಬ್ರೆವಿಸ್ ಸ್ಫೋಟಕ 49 ರನ್, ತಿಲಕ್ ವರ್ಮ 36, ಸೂರ್ಯಕುಮಾರ್ ಯಾದವ್ 43 ರನ್‌ಗಳ ಜೊತೆಗೆ ಪೊಲಾರ್ಡ್ ಕ್ರೂಶಿಯಲ್ 10ರನ್‌ಗಳ ರನೌಟ್‌ನಿಂದಾಗಿ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 186 ರನ್‌ಗಳಿಸಲಷ್ಟೇ ಶಕ್ತವಾಯಿತು.

ಪಂಜಾಬ್ ಕಿಂಗ್ಸ್ ಪರ ಅಂತಿಮ ಓವರ್ ಬೌಲಿಂಗ್ ಮಾಡಿದ ಓಡಿಯನ್ ಸ್ಮಿತ್ ಮೂರು ವಿಕೆಟ್ ಪಡೆಯುವ ಮೂಲಕ ಒಟ್ಟಾರೆ ಮೂರು ಓವರ್‌ಗೆ ನಾಲ್ಕು ವಿಕೆಟ್ ಪಡೆದರು. ಮಯಾಂಕ್ ನಾಯಕತ್ವದ ಪಂಜಾಬ್ 12 ರನ್‌ಗಳಿಂದ ಪಂದ್ಯ ಗೆದ್ದು ಬೀಗಿತು.
ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ 5 ಪಂದ್ಯಕ್ಕೆ 5 ಪಂದ್ಯ ಸೋತು ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದ್ದು, ಸೀಸನ್‌ನಲ್ಲಿ ಗೆಲುವಿನ ಅಕೌಂಟ್ ಅನ್ನೇ ತೆರೆಯದ ಏಕೈಕ ತಂಡವಾಗಿ ಉಳಿದಿದೆ. ಅಲ್ಲದೆ ಪ್ಲೇ ಆಫ್‌ಗೆ ತಲುಪುವ ಬಹುತೇಕ ಕನಸನ್ನ ಕೈ ಬಿಟ್ಟಿದೆ.
ಇನ್ನು ಐದು ಪಂದ್ಯಗಳಲ್ಲಿ ಮೂರು ಪಂದ್ಯ ಜಯಿಸಿರುವ ಪಂಜಾಬ್ ಕಿಂಗ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದು 6 ಪಾಯಿಂಟ್ಸ್ ಗಳಿಸಿದೆ. ರಾಜಸ್ತಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲೆರಡು ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications