Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shikhar Dhawan: RCB ವಿರುದ್ಧ ಯಾಕೆ ಕಣಕ್ಕಿಳಿಯಲಿಲ್ಲ ಶಿಖರ್ ಧವನ್? ಕಾರಣ ಇಲ್ಲಿದೆ

ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗುರುವಾರ ಕಣಕ್ಕಿಳಿದಿದ್ದು ರೋಚಕ ಕಾದಾಟ ನಡೆಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಕಣಕ್ಕಳಿದು ಆರ್‌ಸಿಬಿ ಅಭಿಮಾಣಿಗಳಿಗೆ ಅಚ್ಚರಿ ಮೂಡಿಸಿದರು. ಅತ್ತ ಪಂಜಾಬ್ ಕಿಂಗ್ಸ್ ತಂಡದ ಖಾಯಂ ನಾಯಕ ಶಿಖರ್ ಧವನ್ ಕೂಡ ಈ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಕನಕ್ಕಿಳಿಯಲಿಲ್ಲ. ಧವನ್ ಬದಲಾಗಿ ಸ್ಯಾಮ್ ಕರನ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಒರವಾಗಿ ಅದ್ಭುತ ರನ್‌ಗಳಿಸುತ್ತಿರುವ ಧವನ್ ಈ ಪಂದ್ಯದಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯಾಗಿರುವುದು ನಿಜ. ಆದರೆ ಧವನ್ ಆಡುವ ಬಳಗದಿಂದ ಹೊರಗುಳಿಯಲು ಕಾರಣವೇನು? ಈ ಬಗ್ಗೆ ಹಂಗಾಮಿ ನಾಯಕ ಸ್ಯಾಮ್ ಕರನ್ ಮಾಹಿತಿ ನೀಡಿದ್ದಾರೆ.

PBKS vs RCB: Shikhar Dhawan not playing for Punjab Kings against RCB: here is the reason

ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಭುಜದ ನೋವಿನಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಧವನ್ ಈ ಹಿಂದಿನ ಪಂದ್ಯದಿಂದಲೂ ಹೊರಗುಳಿದಿದ್ದರು. ಪಂದ್ಯದ ಮುನ್ನದಿನ ಪರೀಕ್ಷೆಗೆ ಒಳಗಾಗಿದ್ದ ಧವನ್ ಸಂಪೂರ್ಣವಾಗಿ ಚೇತರಿಕೆ ಕಾಣದ ಕಾರಣ ಆರ್‌ಸಿಬಿ ವಿರುದ್ಧದ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಯಿತು.

ಟಾಸ್ ಸಂದರ್ಭದಲ್ಲಿ ಧವನ್ ಗಾಯದ ಸ್ಥಿತಿಯ ಬಗ್ಗೆ ಸ್ಯಾಮ್ ಕರನ್ ಮಾಹಿತಿ ಹಂಚಿಕೊಂಡಿದ್ದಾರೆ. "ನಾವು ಕಳೆದ ಪಂದ್ಯದಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದೇವೆ. ಇಲ್ಲಿನ ಪರಿಸ್ಥಿತಿಯಲ್ಲೊ ಯಾವುದೇ ಬದಲಾವಣೆಯಾಗಲಿಲ್ಲ. ಇನ್ನು ಶಿಖರ್ ಧವನ್ ಚೇತರಿಕೆಯ ಸನಿಹದಲ್ಲಿ ಇದ್ದಾರೆ. ಆದರೆ ಇಂದಿನ ಪಂದ್ಯದಿಂದ ಅವರು ಹೊರಗುಳಿಯುತ್ತಿದ್ದಾರೆ. ಆತನೋರ್ವ ಗುಣಮಟ್ಟದ ಆಟಗಾರನಾಗಿದ್ದು ಯುವ ಆಟಗಾರರು ಆತನ ಬದಲಿಗೆ ಜವಾಬ್ಧಾರಿ ತೆಗೆದುಕೊಳ್ಳಲಿದ್ದಾರೆ. ಲಿವಿಂಗ್‌ಸ್ಟನ್ ಸೇರ್ಪಡೆಯಾಗಿದ್ದು ಎಲ್ಲೀಸ್ ಕೂಡ ಆಡುವ ಬಳಗದಲ್ಲಿದ್ದಾರೆ" ಎಂದು ಸ್ಯಾಮ್ ಕರನ್ ಮಾಹಿತಿ ನೀಡಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್
ಬೆಂಚ್: ವಿಜಯ್‌ಕುಮಾರ್ ವೈಶಾಕ್, ಡೇವಿಡ್ ವಿಲ್ಲಿ, ಆಕಾಶ್ ದೀಪ್, ಕರ್ಣ್ ಶರ್ಮಾ, ಅನುಜ್ ರಾವತ್, ಮನೋಜ್ ಭಾಂಡಗೆ, ಮೈಕೆಲ್ ಬ್ರೇಸ್‌ವೆಲ್, ಫಿನ್ ಅಲೆನ್, ಸಿದ್ದಾರ್ಥ್ ಕೌಲ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ, ಸೋನು ಯಾದವ್

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್
ಬೆಂಚ್: ಪ್ರಭಾಸಿಮ್ರಾನ್ ಸಿಂಗ್, ಸಿಕಂದರ್ ರಜಾ, ಮೋಹಿತ್ ರಾಠೀ, ರಿಷಿ ಧವನ್, ಶಿವಂ ಸಿಂಗ್, ಭಾನುಕಾ ರಾಜಪಕ್ಸೆ, ಗುರ್ನೂರ್ ಬ್ರಾರ್, ಬಲ್ತೇಜ್ ಸಿಂಗ್, ವಿಧ್ವತ್ ಕಾವೇರಪ್ಪ, ಶಿಖರ್ ಧವನ್, ಕಗಿಸೊ ರಬಾಡ

Story first published: Thursday, April 20, 2023, 17:56 [IST]
Other articles published on Apr 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+