Champion Trophy 2025: ಹೈಬ್ರಿಡ್ ಮಾದರಿಗೆ ಪಿಸಿಬಿ ಒಪ್ಪಿಗೆ; ಐಸಿಸಿ ಮುಂದೆ 3 ಷರತ್ತು!
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆಯೋಜನೆ ಬಗ್ಗೆ ಇದ್ದ ಗೊಂದಲಗಳಿಗೆ ಬಹುತೇಕ ತೆರೆ ಬಿದ್ದಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ನಿರ್ಧಾರಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಂದಿದೆ. ಐಸಿಸಿ ಮುಂದೆ ಭದ್ರತೆ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳಿಸಲು ನಿರಾಕರಿಸಿತ್ತು. ಇತ್ತ ಪಿಸಿಬಿ ಕೂಡ ಯಾವುದೇ ಕಾರಣಕ್ಕೂ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವುದಿಲ್ಲ ಎಂದ ಹಠ ಹಿಡಿದು ಕೂತಿತ್ತು.
ಮುಂದಿನ ವರ್ಷ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇದೀಗ ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಿಸಿಬಿ ದಾರಿಗೆ ಬಂದಂತೆ ಕಾಣುತ್ತಿದೆ. ಟೀಮ್ ಇಂಡಿಯಾ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವುದಿಲ್ಲ ಎಂಬ ಸತ್ಯವನ್ನು ತಿಳಿದ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜನೆ ಮಾಡಲು ಒಪ್ಪಿಕೊಂಡಿದೆ. ಆದರೆ ಐಸಿಸಿ ಮುಂದೆ ಪಿಸಿಬಿ ಮೂರು ಪ್ರಮುಖ ಷರತ್ತುಗಳನ್ನು ಹಾಕಿದೆ.

ಪಿಸಿಬಿ ಷರತ್ತುಗಳು
1) ಲಾಹೋರ್‌ನಲ್ಲಿ ಬ್ಯಾಕಪ್ ಹೋಸ್ಟಿಂಗ್: ಭಾರತ ತಂಡ ಗುಂಪು ಹಂತದಲ್ಲಿ ಸೋತು ಹೊರಗುಳಿದರೆ, ಲಾಹೋರ್‌ನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
2) ತಟಸ್ಥ ಸ್ಥಳದಲ್ಲಿ ಪಾಕಿಸ್ತಾನ ಪಂದ್ಯಗಳು: ಭವಿಷ್ಯದಲ್ಲಿ ಭಾರತ ಆಯೋಜಿಸಲಿರುವ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಬೇಕು ಎಂಬ ಷರತ್ತನ್ನು ಪಿಸಿಬಿ ಹಾಕಿದೆ.
3) ಆದಾಯದ ಪಾಲು ಹೆಚ್ಚಳ: ಭಾರತ ತಂಡ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗುತ್ತದೆ. ಆದರೆ ಆದಾಯದ ಪಾಲನ್ನು 5.75% ಹೆಚ್ಚಿಸಬೇಕು ಎಂದು ಐಸಿಸಿ ಮುಂದೆ ಪಿಸಿಬಿ ಬೇಡಿಕೆ ಇಟ್ಟಿದೆ.
ಭಾರತದ ನಡೆಗೆ ಸಿಟ್ಟಿಗೆದ್ದಿರುವ ಪಾಕಿಸ್ತಾನ ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿದೆ. 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಐಸಿಸಿ ಅಯೋಜಿಸಿದ ಸಭೆಯಲ್ಲಿ ಒತ್ತಾಯಿಸಿದೆ. ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಬರದಿದ್ದ ಮೇಲೆ, ಪಾಕಿಸ್ತಾನ ತಂಡವನ್ನು ಕೂಡ ಭಾರತಕ್ಕೆ ಕಳಿಸಲ್ಲ ಎಂದು ಐಸಿಸಿ ಮುಂದೆ ಪಿಸಿಬಿ ಹೇಳಿದೆ. 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪಂದ್ಯಗಳನ್ನು ಭಾರತದಿಂದ ಹೊರಗಡೆ ಆಯೋಜಿಸಬೇಕು ಎಂದು ಷರತ್ತು ಇಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications