ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಮಂಡಳಿಯ ಮುಖ್ಯಸ್ಥನಾಗಿ ವಹಾಬ್ ರಿಯಾಜ್ ಆಯ್ಕೆ
ವಿಶ್ವಕಪ್ ಟೂರ್ನಿಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಭಾರೀ ಬದಲಾವಣೆಗಳಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನೂತನ ಆಯ್ಕೆ ಮಂಡಳಿಯ ಮುಖ್ಯಸ್ಥನನ್ನಾಗಿ ಮಾಜಿ ಕ್ರಿಕೆಟಿಗ ವಾಹಬ್ ರಿಯಾಜ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೇಮಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದೆ.
ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ಬಳಿಕ ಬಂದ ಆರೋಪಗಳ ಕಾರಣಗಳಿಂದ ಆಯ್ಕೆ ಮಂಡಳಿಯ ಮುಖ್ಯಸ್ಥರಾಗಿದ್ದ ಇನ್‌ಜಮಾಮ್ ಉಲ್ ಹಕ್ ತನ್ನ ಸ್ಥಾನದಿಂದ ಕೆಳಗಿಳಿದಿದ್ದರು. ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಪಾಕ್ ಆಯ್ಕೆ ಮಂಡಳಿಯಲ್ಲಿ ಸ್ವಜನಪಕ್ಷಪಾತದ ಆರೋಪ ಕೇಳಿಬಂದಿತ್ತು. ಈ ಆರೋಪದಿಂದ ಮುಕ್ತನಾಗುವವರೆಗೆ ನಾನು ಈ ಹುದ್ದೆಯಲ್ಲಿ ಮುಂದುವರಿಯಲಾರೆ ಎಂದು ಇನ್‌ಜಮಾಮ್ ಉಲ್ ಹಕ್ ತನಮ್ಮ ಜವಾಬ್ಧಾರಿಯಿಂದ ಕೆಳಗಿಳಿದಿದ್ದರು.

ಪಾಕಿಸ್ತಾನ ಆಯ್ಕೆ ಮಂಡಳಿಯ ನೂತನ ಮುಖ್ಯಸ್ಥನಾಗಿ ಆಯ್ಕೆಯಾಗಿರುವ ವಹಾಬ್ ರಿಯಾಜ್ ಪಾಕಿಸ್ತಾನ ತಂಡವನ್ನು 154 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇತ್ತೀಚೆಗಷ್ಟೇ ವಾಹಬ್ ರಿಯಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ ಅವರಿಗೆ ಪಾಕ್ ತಂಡದ ಆಯ್ಕೆ ಸಮಿತಿಯನ್ನು ಮುನ್ನಡೆಸುವ ಮಹತ್ವದ ಜವಾಬ್ಧಾರಿ ದೊರೆತಿದೆ. ಕುತೂಹಲಕಾರಿ ಸಂಗತಿಯೆಂದರೆ ವಹಾಬ್ ರಿಯಾಜ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇನ್ನು ಕೂಡ ಸಕ್ರಿಯವಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಹಾಬ್ ರಿಯಾಜ್ ಅವರ ನೇಮಕಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. "ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಹಾಬ್ ರಿಯಾಜ್ ಅವರನ್ನು ರಾಷ್ಟ್ರೀಯ ಪುರುಷರ ಆಯ್ಕೆ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 14ರಿಂದ ಜನವರಿ 7ರವರೆಗೆ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಹಾಗೂ ಅದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಗೆ ತಂಡವನ್ನು ಆಯ್ಕೆ ಮಾಡುವ ಮೂಲಕ ಅವರ ಜವಾಬ್ಧಾರಿ ಆರಂಭವಾಗಲಿದೆ" ಎಂದು ಈ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇನ್ನು ನೂತನ ಜವಾಬ್ಧಾರಿಯನ್ನು ವಹಿಸಿಕೊಂಡಿರುವ ವಹಾಬ್ ರಿಯಾಜ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಧನ್ಯವಾದ ಸಲ್ಲಿಸಿದ್ದಾರೆ. "ರಾಷ್ಟ್ರೀಯ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರ ಜವಾಬ್ಧಾರಿ ನನಗೆ ದೊರೆಯುತ್ತಿರುವುದು ದೊಡ್ಡ ಗೌರವ. ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಪಿಸಿಬಿ ಆಡಳಿತ ಸಮಿತಿಯ ಅಧ್ಯಕ್ಷ ಶ್ರೀ ಝಾಕಾ ಅಶ್ರಫ್ ಅವರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕ್ರಿಕೆಟ್ ವಿಷಯಗಳಲ್ಲಿ ಮಾಜಿ ಆಟಗಾರರನ್ನು ತೊಡಗಿಸಿಕೊಳ್ಳುವ ನಿರ್ಧಾರವು ಶ್ಲಾಘನೀಯವಾಗಿದೆ ಮತ್ತು ನಾನು ಪಾಕಿಸ್ತಾನ ಕ್ರಿಕೆಟ್‌ನ ಸುಧಾರಣೆಗಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ" ಎಂದು ವಹಾಬ್ ರಿಯಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆಯ್ಕೆ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ಇನ್‌ಜಮಾಮ್ ಉಲ್ ಹಕ್ ರಾಜಿನಾಮೆ ನೀಡಿದ ಬಳಿಕ ಪಾಕ್ ತಂಡದ ನಾಯಕ ಬಾಬರ್ ಅಜಂ ಕೂಡ ಎಲ್ಲಾ ಮಾದರಿಯ ನಾಯಕತ್ವದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಟಿ20 ಮಾದರಿಗೆ ಶಾಹಿನ್ ಶಾ ಅಫ್ರಿದಿ ನಾಯಕನಾಗಿ ನೇಮಕವಾಗಿದ್ದು ಟೆಸ್ಟ್ ಮಾದರಿಗೆ ಶಾನ್ ಮಸೂದ್ ನಾಯಕನಾಗಿ ನೇಮಕಗೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications