Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಜಸ್ಥಾನ್ ರಾಯಲ್ಸ್ ಆಟಗಾರನಿಗೆ ಪಿಎಸ್‌ಎಲ್‌ನಿಂದ 1 ವರ್ಷ ಬ್ಯಾನ್

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್‌) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ನಡುವಣ ಸಂಘರ್ಷ ಮುಂದುವರಿದಿದೆ. ಪಿಎಸ್‌ಎಲ್‌ಗೆ ಸಂಬಂಧಿಸಿದಂತೆ ಒಂದು ದೊಡ್ಡ ವಿವಾದ ಹುಟ್ಟಿಕೊಂಡಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಶ್ರೀಲಂಕಾದ ಸ್ಟಾರ್ ಆಟಗಾರ, ನಾಯಕ ದಸುನ್ ಶನಕ ಅವರನ್ನು ಒಂದು ವರ್ಷ ಬ್ಯಾನ್ ವಿಧಿಸಿದೆ. ಪಿಎಸ್‌ಎಲ್‌ನಿಂದ ಹಠಾತ್ತನೆ ಹಿಂದೆ ಸರಿದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದಸುನ್ ಶನಕ ಐಪಿಎಲ್‌ ಆರಂಭಕ್ಕೂ ಮುನ್ನ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಾರೆ. ಇವರನ್ನು ರಾಜಸ್ಥಾನ ರಾಯಲ್ಸ್‌ ತಂಡ ಸ್ಯಾಮ್‌ ಕರನ್ ಬದಲಿಗೆ ತಂಡಕ್ಕೆ ಆಯ್ಕೆ ಮಾಡಿತ್ತು. ಇದರಿಂದ ಅಸಮಾಧಾನಗೊಂಡ ಪಿಸಿಬಿ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಆಟಗಾರರ ನೋಂದಣಿ ನಿಯಮಗಳು ಮತ್ತು ತ್ರಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿ ಮಾರ್ಚ್ 21, 2026 ರಂದು ದಸುನ್ ಶನಕ ಹಿಂದೆ ಸರಿದಿದ್ದಾರೆ ಎಂದು ಪಿಸಿಬಿ ತನಿಖೆಯಲ್ಲಿ ಕಂಡುಬಂದಿದೆ.

PCB Bans

ತನಿಖೆಯ ಸಮಯದಲ್ಲಿ ಶನಕ್ ತಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸಿದರೂ ಮತ್ತು ಪಾಕಿಸ್ತಾನದಲ್ಲಿ ಆಡುವ ಉತ್ಸಾಹವನ್ನು ವ್ಯಕ್ತಪಡಿಸಿದ್ದರು. ಲೀಗ್‌ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಪಿಸಿಬಿ ಈ ಶಿಸ್ತು ಕ್ರಮವನ್ನು ತೆಗೆದುಕೊಂಡಿದೆ ಎಂದು ತಿಳಿಸಿದೆ. ಶನಕ ಅವರು ಪಿಎಸ್‌ಎಲ್‌ನ ಮುಂದಿನ ಋತುವಿನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳು, ಪಾಕ್‌ ಜನರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಪಿಎಸ್‌ಎಲ್‌ ಒಂದು ಪ್ರತಿಷ್ಠಿತ ಲೀಗ್‌ ಆಗಿದ್ದು, ಅವರು ತೆಗೆದುಕೊಂಡ ನಿರ್ಧಾರ ನಿರಾಶೆ ತಂದಿದ್ದು, ಲಾಹೋರ್ ಖಲಂದರ್ ಅಭಿಮಾನಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ದಸುನ್ ಶನಕ ತಿಳಿಸಿದ್ದಾರೆ. ಪಾಕಿಸ್ತಾನಿ ಅಭಿಮಾನಿಗಳ ಬಗ್ಗೆ ಅವರಿಗೆ ಅಪಾರ ಗೌರವವಿದೆ ಮತ್ತು ಪಾಕಿಸ್ತಾನದಲ್ಲಿ ತಮ್ಮ ಸಮಯವನ್ನು ಯಾವಾಗಲೂ ಆನಂದಿಸಿದ್ದೇನೆ ಎಂದಿದ್ದಾರೆ.

ಶನಕ ಸಾಧನೆ

34 ವರ್ಷದ ದಸುನ್‌ ಶನಕ ಶ್ರೀಲಂಕಾ ತಂಡವನ್ನು ಟಿ20 ವಿಶ್ವಕಪ್‌ನಲ್ಲಿ ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇವರು ಲಂಕಾ ಪರ 6 ಟೆಸ್ಟ್‌, 71 ಏಕದಿನ, 131 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಟೆಸ್ಟ್‌ನಲ್ಲಿ 140 ರನ್‌ ಸಿಡಿಸಿದ್ದು, 13 ವಿಕೆಟ್‌ ಪಡೆದಿದ್ದಾರೆ. ಇನ್ನು ಏಕದಿನ ಪಂದ್ಯಗಳಲ್ಲಿ 1299 ರನ್‌ ಬಾರಿಸಿದ್ದು, 27 ವಿಕೆಟ್‌ ಕಬಳಿಸಿದ್ದಾರೆ. ಟಿ20 ಫಾರ್ಮೆಟ್‌ನಲ್ಲಿ 1912 ರನ್‌ ಸೇರಿಸಿದ್ದು, 46 ವಿಕೆಟ್‌ ಉರುಳಿಸಿದ್ದಾರೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ 3 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.

Story first published: Monday, April 20, 2026, 19:38 [IST]
Other articles published on Apr 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+