For Quick Alerts
ALLOW NOTIFICATIONS  
For Daily Alerts
 

ಭಾರತ- ಪಾಕ್ ಟೆಸ್ಟ್ ಸರಣಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ PCB ಮುಖ್ಯಸ್ಥ: ಬಿಸಿಸಿಐನಿಂದ ಪ್ರತಿಕ್ರಿಯೆ!

ಒಂದೆಡೆ ಏಷ್ಯಾ ಕಪ್ ಟೂರ್ನಿಯ ಆತಿಥ್ಯದ ವಿಚಾರವಾಗಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಮತ್ತೊಂದೆಡೆ ಇದೇ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಕೂಡ ನಡೆಯಲಿರುವ ಕಾರಣ ಈ ಟೂರ್ನಿಯಲ್ಲಿ ಭಾಗವಹಿಸುವ ವಿಚಾರವಾಗಿಯೂ ಪಾಕಿಸ್ತಾನ ಬೆದರಿಕೆಯಿಡ್ಡುವ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಧ್ಯಮಗಳು ನಜಮ್ ಸೇಥಿ ನೀಡಿರುವ ಅಚ್ಚರಿಯ ಹೇಳಿಕೆಯನ್ನು ಪ್ರಕಟಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜೀಮ್ ಸೇಥಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟೆಸ್ಟ್ ಸರಣಿಯ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ. ಈ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಟಸ್ಥ ತಾಣವಾಗಿರಲಿದೆ ಎಂದು ನಜೀಮ್ ಸೇಥಿ ಹೇಳಿದ್ದಾರೆ ಎನ್ನಲಾಗಿದೆ. ಈ ವರದಿಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು ಪ್ರತಿಕ್ರಿಯೆ ನೀಡಿದ್ದು ಸಾರಾಸಗಟಾಗಿ ವರದಿಯನ್ನು ತಿರಸ್ಕರಿಸಿದೆ.

PCB chairman Najam Sethi statement on Indo Pak test series, BCCI sources denied

ನಜೀಮ್ ಸೇಥಿ ಹೇಳಿಕೆಯಲ್ಲಿ ಏನಿದೆ?

ಆಸ್ಟ್ರೇಲಿಯಾಲ್ಲಿ ಹೌಸ್‌ಫುಲ್ ಪ್ರೇಕ್ಷಕರನ್ನು ಹೊಂದುವ ಸಾಧ್ಯತೆಯಿದ್ದರೆ ಆಸ್ಟ್ರೇಲಿಯಾವೇ ಈ ಸರಣಿಗೆ ಆತಿಥ್ಯವಹಿಸುವ ಸಾಧ್ಯತೆಯಿದೆ ಎಂದು ನಜೀಮ್ ಸೇಥಿ ಈ ಹೇಳಿಕೆಯನ್ನು ನೀಡಿದ್ದಾರೆ. "ಹೌದು, ದ್ವಿಪಕ್ಷೀಯ ಸರಣಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಅಥವಾ ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗುವ ಸಾಧ್ಯತೆಯಿದೆ. ಇದಕ್ಕೆ ಅತ್ಯುತ್ತಮ ಆಯ್ಕೆಯೆಂದರೆ ಇಂಗ್ಲೆಂಡ್ ಆಗಲಿದ್ದು ನಂತರ ಆಸ್ಟ್ರೇಲಿಯಾದಲ್ಲಿ ಅವಕಾಶವಿದೆ. ಆಸ್ಟ್ರೇಲಿಯಾದಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಕ್ರೀಡಾಂಗಣ ತುಂಬುವ ಭರವಸೆ ದೊರೆತರೆ ಅಲ್ಲಿಯೇ ನಡೆಯಬಹುದು" ಎಂದಿದ್ದಾರೆ ನಜೀಮ್ ಸೇಥಿ.

ಬಿಸಿಸಿಐ ಮೂಲಗಳ ಪ್ರತಿಕ್ರಿಯೆ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರ ಹೇಳಿಕೆಗೆ ಬಿಸಿಸಿಐ ಮೂಲಗಳು ಪ್ರತಿಕ್ರಿಯೆ ನೀಡಿದ್ದು ಎಎನ್‌ಐ ವರದಿ ಮಾಡಿದೆ. "ಅಂಥಾ ಸರಣಿಯ ಆಯೋಜನೆಯ ಬಗ್ಗೆ ಭವಿಷ್ಯದಲ್ಲಿ ಅಥವಾ ಮುಂದಿನ ದಿನಗಳಲ್ಲಿ ಯಾವುದೇ ಯೋಜನೆಗಳು ನಮ್ಮ ಮುಂದಿಲ್ಲ. ಪಾಕಿಸ್ತಾನದ ಜೊತೆಗೆ ಯಾವುದೇ ರೀತಿಯ ದ್ವಿಪಕ್ಷೀಯ ಸರಣಿಗೆ ನಾವು ಸಿದ್ಧವಾಗಿಲ್ಲ" ಎಂದು ಬಿಸಿಸಿಐ ಮೂಲಗಳ ಹೇಳಿಕೆಯನ್ನು ಎನ್‌ಐ ವರದಿ ಮಾಡಿದೆ.

16 ವರ್ಷಗಳಿಂದ ನಡೆದಿಲ್ಲ ಟೆಸ್ಟ್ ಸರಣಿ

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟೆಸ್ಟ ಸರಣಿ 2007ರ ಬಳಿಕ ಆಯೋಜನೆಯಾಗಿಲ್ಲ ಎಂಬುದು ಗಮನಾರ್ಹ. ಎರಡು ದೇಶಗಳ ನಡುವಿನ ಬಾಂಧವ್ಯ ಹಳಸಿದ ಕಾರಣ ಕ್ರಿಕೆಟ್ ಸರಣಿಯ ಮೇಲೂ ಬಿದ್ದಿದ್ದು ಈ ವಿಚಾರವಾಗಿ ಭಾರತ ಸ್ಪಷ್ಟ ನಿಲುವನ್ನು ಹೊಂದಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೊನೆಯ ಬಾರಿ ದ್ವಿಪಕ್ಷೀಯ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಿದ್ದು 2013ರಲ್ಲಿ. ಅಂದು ವೈಟ್‌ಬಾಲ್ ಸರಣಿಯಲ್ಲಿ ಎರಡು ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಅದಾದ ಬಳಿಕ ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.

Story first published: Wednesday, May 17, 2023, 17:39 [IST]
Other articles published on May 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+