Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್ 2020 ಬಗ್ಗೆ ಪಿಸಿಬಿ ಉಲ್ಟಾ: ಆಯೋಜನೆ ಅಪಾಯಕಾರಿ ಎಂದ ಪಿಸಿಬಿ ಮುಖ್ಯಸ್ಥ

Pcb Chief Ehsan Mani Confirms Cancellation Of Asia Cup 2020

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡುತ್ತಾ ಏಷ್ಯಾ ಕಪ್ ರದ್ದಾಗಿದೆ ಎಂದು ಹೇಳಿಕೊಂಡಿದ್ದರು. ಸೆಪ್ಟೆಂಬರ್‌ ತಿಂಗಳಲ್ಲಿ ನಿಗದಿಯಾಗಿದ್ದ ಏಷ್ಯಾಕಪ್ ಟೂರ್ನಿ ಕೊರೊನಾ ವೈರಸ್‌ನ ಕಾರಣದಿಂದ ನಡೆಸುವುದು ಅಸಾಧ್ಯ ಎಂದಿದ್ದರು. ಈ ಬಗ್ಗೆ ಟೂರ್ನಿಯ ಆತಿಥ್ಯದ ಜವಾಬ್ಧಾರಿ ಹೊತ್ತಿರುವ ಪಾಕಿಸ್ತಾನ ಕೂಡ ಸ್ಪಷ್ಟನೆಯನ್ನು ನೀಡಿದೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಎಷ್ಯಾ ಕಪ್ ಟೂರ್ನಿಯನ್ನು ಆಯೋಜನೆ ಮಾಡುವುದು ಅಪಾಯಕಾರಿ ಎಂದು ಪಾಕಿಸ್ತಾನ ಕ್ರಿಕೆಟ್ ಬೀರ್ಡ್‌ ಮುಖ್ಯಸ್ಥ ಇಹ್ಸಾನ್ ಮನಿ ಹೇಳಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನ ಈ ಬಾರಿಯ ಏಷ್ಯಾ ಶ್ರೀಲಂಕಾದಲ್ಲಿ ಆಯೋಜಿಸುವ ಬಗ್ಗೆ ಚಿಂತನೆಯನ್ನು ನಡೆಸಿತ್ತು.

"ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ಟೂರ್ನಿಯನ್ನು ಮುಂದಿನ ವರ್ಷ ಆಯೋಜಿಸಲು ಚಿಂತಿಸಿದೆ. ನಾವು ಈ ಬಾರಿ ಶ್ರೀಲಂಕಾದಲ್ಲಿ ಈ ಟೂರ್ನಿ ಆಯೋಜಿಸಲು ಚಿಂತಿಸಿದ್ದೆವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಟೂರ್ನಿ ಆಯೋಜಿಸುವುದು ಅತ್ಯಂತ ಅಪಾಯಕಾರಿ ಎಂದು ಇಹ್ಸಾನ್ ಮನಿ ಹೇಳಿಕೆ ನೀಡಿದ್ದಾರೆ.

ಟೂರ್ನಿ ನಡೆಯುವುದನ್ನು ಕಾಪಾಡಿಕೊಳ್ಳಬೇಕು ಎಂಬ ಒಂದೇ ಉದ್ದೇಶದಿಂದ ನಾವು ಶ್ರೀಲಂಕಾದಲ್ಲಿ ಏಷ್ಯಾ ಕಪ್ ಆಯೋಜಿಸಲು ಚಿಂತಿಸಿದ್ದೆವು, ಅದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಮ್ಮತಿಯನ್ನು ಸೂಚಿಸಿತ್ತು. ಇದರಲ್ಲಿ ಯಾವುದೇ ದುರುದ್ದೇಶವಾಗಲಿ ರಾಜಕೀಯವಾಗಲಿ ಇರಲಿಲ್ಲ ಎಂದು ಇಹ್ಸಾನ್ ಮನಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಮತ್ತೊಂದೆಡೆ ಟಿ20 ವಿಶ್ವಕಪ್ ಟೂರ್ನಿ ನಡೆಯುವುದು ಕೂಡ ಅಸಂಭವ ಎಂದೇ ಹೇಳಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಈ ಟೂರ್ನಿಯ ಬಗ್ಗೆಯೂ ಐಸಿಸಿ ಇನ್ನಷ್ಟೇ ತನ್ನ ನಿರ್ಧಾರವನ್ನು ತಿಳಿಸಿಬೇಕಾಗಿದೆ. ಇದು ಮುಂದೂಡಲ್ಪಟ್ಟರೆ ಬಿಸಿಸಿಐಗೆ ಐಪಿಎಲ್ ಆಯೋಜನೆಗೆ ಹಾದಿ ಸುಗಮವಾಗಲಿದೆ.

Story first published: Thursday, July 9, 2020, 10:06 [IST]
Other articles published on Jul 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+