ಕೊರೊನಾ ಪರೀಕ್ಷೆ ಹೈಡ್ರಾಮ: ಹಫೀಜ್ ವಿರುದ್ಧ ಶಿಸ್ತುಕ್ರಮವಿಲ್ಲ ಎಂದ ಪಿಸಿಬಿ

ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಮೊಹಮದ್ ಹಫೀಜ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಿಸ್ತುಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕ್ ಕ್ರಿಕೆಟ್ ಮಂಡಳಿಯ ಅನುಮತಿ ಪಡೆಯದೆ ಎರಡನೇ ಅಭಿಪ್ರಾಯಕ್ಕಾಗಿ ಕೊರೊನಾ ಪರೀಕ್ಷೆಯನ್ನು ನಡೆಸಿ ಹಫೀಜ್ ತನ್ನದು ಕೊರೊನಾ ನೆಗೆಟಿವ್ ಎಂದು ಘೋಷಿಸಿಕೊಂಡಿದ್ದರು. ಇದು ಪಾಕ್ ಮಂಡಳಿಯ ಕಣ್ಣು ಕೆಂಪಗಾಗಿಸಿತ್ತು.
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಮತ್ತು ಸಿಬ್ಬಂದಿಗಳ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಇಂಗ್ಲೆಂಡ್‌ಗೆ ಹಾರಲು ಸಜ್ಜಾಗಿದ್ದ ಹತ್ತು ಕ್ರಿಕೆಟಿಗರ ವರದಿ ಪಾಸಿಟಿವ್ ಎಂದು ಬಂದಿತ್ತು. ಅದರಲ್ಲಿ ಮೊಹಮದ್ ಹಫೀಜ್ ಹೆಸರು ಕೂಡ ಇದ್ದರು.
ಆದರೆ ಬಳಿಕ ಮೊಹಮದ್ ಹಫೀಜ್ ತಾವೇ ಖುದ್ದಾಗಿ ಪರೀಕ್ಷೆಯನ್ನು ನಡೆಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ವರದಿಯ ಸಹಿತ ಟ್ವೀಟ್ ಮಾಡಿದ್ದರು. ಇದು ಗೊಂದಲಕ್ಕೆ ಕಾರಣವಾಗಿತ್ತು, ಮಾತ್ರವಲ್ಲ ಪಾಕ್ ಮಂಡಳಿಗೆ ಮುಜುಗರವನ್ನು ತರಿಸಿತ್ತು.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ವಾಸಿಮ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ವೈಯಕ್ತಿಕವಾಗಿ ಪರೀಕ್ಷೆಗೆ ಒಳಪಡುವ ಮುನ್ನ ಮಂಡಳಿಯನ್ನು ಸಂಪರ್ಕಿಸಬೇಕಿತ್ತು. ಆತನ ನಿರ್ಧಾರದಿಂದ ಅಸಮಾಧಾನ ಉಂಟಾಗಿದೆ ಎಂದು ವಾಸಿಮ್ ಖಾನ್ ಹೇಳಿಕೆಯನ್ನು ನೀಡಿದ್ದರು. ಜೊತೆಗೆ ಶಿಸ್ತುಕ್ರಮವನ್ನು ತೆಗೆದುಕೊಳ್ಳುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದಿದ್ದರು.
ಆದರೆ ಈಗ ಪಿಸಿಬಿ ಮೊಹಮ್ಮದ್ ಹಫೀಜ್ ಶಿಸ್ತುಕ್ರಮದಿಂದ ಪಾರಾಗಿದ್ದಾರೆ. ಸದ್ಯ ಇವರ ವಿರುದ್ಧ ಯಾವುದೇ ವಿಚಾರಣೆ ನಡೆಸುವುದಿಲ್ಲ, ಶಿಸ್ತುಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಪಿಸಿಬಿ ತಿಳಿಸಿದೆ. ವಿಪರ್ಯಾಸವೆಂದರೆ ಈ ಗೊಂದಲದ ಬಳಿಕ ಮತ್ತೆ ಹಫೀಜ್ ಅವರ ಕೊರೊನಾ ಪರೀಕ್ಷೆಯನ್ನು ಪಿಸಿಬಿ ನಡೆಸಿತ್ತು ಅದರಲ್ಲಿ ಮತ್ತೊಮ್ಮೆ ಪಾಸಿಟಿವ್ ಎಂಬ ವರದಿ ಬಂದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications