ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು: ಪಿಸಿಬಿ ಆಯ್ಕೆ ಸಮಿತಿಯಲ್ಲಿ ಬದಲಾವಣೆ
ಮುಲ್ತಾನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಮೊದಲ ಇನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಕಲೆ ಹಾಕಿದರೂ, ಪಾಕ್ ಪ್ರವಾಸಿ ತಂಡದ ವಿರುದ್ಧ ಇನಿಂಗ್ಸ್ ಹಾಗೂ 47 ರನ್‌ಗಳ ಸೋಲು ಕಂಡಿದೆ. ಒಂದು ಸೋಲು ಮತ್ತೆ ಪಾಕ್ ತಂಡದ ಕಾರ್ಯವನ್ನು ಆತ್ಮಾವಲೋಕಿಸುವಂತೆ ಮಾಡಿದೆ. ಪಿಸಿಬಿ ಹೊಸ ಅಯ್ಕೆ ಸಮಿತಿಯನ್ನು ಪ್ರಕಟಿಸಿದೆ. ಈ ಆಯ್ಕೆ ಸಮಿತಿಯಲ್ಲಿ ಅಂಪೈರ್ ಒಬ್ಬರು ಸ್ಥಾನ ಪಡೆದಿದ್ದಾರೆ.
ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೆ ಸಾಬೀತಾಗುತ್ತದೆ. ಇತ್ತೀಚಿಗೆ ಪಾಕ್ ಮಾಜಿ ಆಟಗಾರ ಮೊಹಮ್ಮದ್ ಯೂಸುಫ್ ಆಯ್ಕೆ ಸಮಿತಿಯಿಂದ ಹೊರ ನಡೆದಿದ್ದರು. ಪಿಸಿಬಿ ಈಗ ಹೊಸ ಆಯ್ಕೆ ಸಮಿತಿಯನ್ನು ಪ್ರಕಟಿಸಿದ್ದು, ಇದರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಪಾಕಿಸ್ತಾನದ ಹೊಸ ಆಯ್ಕೆ ಸಮಿತಿಯಲ್ಲಿ ಅಲೀಂ ದಾರ್, ಆಕಿಬ್ ಜಾವೇದ್, ಅಸದ್ ಶಫೀಕ್, ಅಜರ್ ಅಲಿ ಮತ್ತು ಹಸನ್ ಚೀಮಾ ಸ್ಥಾನ ಪಡೆದಿದ್ದಾರೆ.

ಐಸಿಸಿ ಎಲೈಟ್ ಅಂಪೈರ್ ಆಗಿ ಅಲೀಮ್ ದಾರ್ ಕಾರ್ಯನಿರ್ವಹಿಸಿದ್ದಾರೆ. ಅಲೀಂ ದಾರ್ 19 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ತಮ್ಮ ಛಾಪು ಮೂಡಿಸಿದ್ದು, ಇತ್ತೀಚಿಗೆ ಅವರು ನಿವೃತ್ತಿಯನ್ನು ಸಹ ಪಡೆದಿದ್ದಾರೆ. ಸದ್ಯ ಆಯ್ಕೆ ಸಮಿತಿಯ ಭಾಗವಾಗಿರುವ ಅಸಾದ್ ಶಫೀಕ್ ಮತ್ತು ಹಸನ್ ಚೀಮಾ ಈ ಮೊದಲೇ ಆಯ್ಕೆ ಸಮಿತಿಯಲ್ಲಿ ಕಾಣಿಸಿಕೊಂಡಿದ್ದರು. '
ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆದ ಅಂಪೈರ್
ಇನ್ನು ಈ ಸಮಿತಿಯಲ್ಲಿ ಇದೇ ಮೊದಲ ಬಾರಿಗೆ ಅಂಪೈರ್ ಅಲೀಂ ದಾರ್, ಆಕಿಬ್ ಜಾವೇದ್ ಮತ್ತು ಅಜರ್ ಅಲಿ ಅವರನ್ನು ಮೊದಲ ಬಾರಿಗೆ ಸೇರಿಸಲಾಗಿದೆ. ಅಲೀಮ್ ದಾರ್ 17 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 18 ಲಿಸ್ಟ್ ಎ ಪಂದ್ಯಗಳನ್ನು ಸಹ ಆಡಿದ್ದಾರೆ. ಅಲೀಂ ದಾರ್ ಐಸಿಸಿಯ ಎಲೈಟ್ ಅಂಪೈರ್‌ಗಳಲ್ಲಿ ಒಬ್ಬರು.
ಅಲಿಂ ಒಟ್ಟು 435 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಮಾಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 3 ಬಾರಿ ಡೇವಿಡ್ ಶೆಫರ್ಡ್ ಟ್ರೋಫಿ ಪ್ರಶಸ್ತಿ ಪಡೆದಿದ್ದಾರೆ. ಇದಲ್ಲದೆ, ಅವರು 2007 ಮತ್ತು 2011 ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿಯೂ ಅಂಪೈರ್ ಮಾಡಿದ್ದಾರೆ.
2023ರ ಏಕದಿನ ವಿಶ್ವಕಪ್‌ನಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಪಾಕ್ ಅಬ್ಬರಿಸುವಲ್ಲಿ ವಿಫಲವಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications