ಭಾರತ, ಪಾಕ್ ಪಂದ್ಯಕ್ಕೂ ಮುನ್ನ ಐಸಿಸಿಗೆ ಪತ್ರ ಬರೆದ ಪಿಸಿಬಿ
ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳತ್ತ ಎಲ್ಲರ ಚಿತ್ತ ಈ ಪಂದ್ಯದ ಮೇಲೆ ನೆಟ್ಟಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಸಿಸಿಗೆ ಪತ್ರವನ್ನು ಬರೆದಿದೆ. ಅಲ್ಲದೆ ಈ ಪತ್ರದಲ್ಲಿ ಈ ಪಿಸಿಬಿ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದು ಎಲ್ಲರ ಗಮನ ಸೆಳೆದಿದೆ. ಹಾಗಿದ್ದರೆ ಪಿಸಿಬಿ, ಐಸಿಸಿಗೆ ಬರೆದ ಪತ್ರದಲ್ಲಿ ಏನದಿ ಎಂಬ ಬಗ್ಗೆ ವರದಿ ಇಲ್ಲಿದೆ.
ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ "ಬಿ" ಗುಂಪಿನ ಪಂದ್ಯ ನಡೆಯಿತು. ಈ ವೇಳೆ ಉಭಯ ದೇಶಗಳು ರಾಷ್ಟ್ರಗೀತೆ ಸಜ್ಜಾಗಿದ್ದವು. ಆಗ ಭಾರತದ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು. ಈ ಬಗ್ಗೆ ಮೈದಾನದಲ್ಲಿ ಗದ್ದಲ ಆರಂಭಾಗಿತ್ತು. ಅಸಲಿಗೆ ಭಾರತ ತನ್ನ ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಲಾಹೋರ್‌ದಲ್ಲಿ ಭಾರತದ ರಾಷ್ಟ್ರಗೀತಿ ಮೊಳಗಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿದ್ದವು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪಂದ್ಯಗಳ ವೇಳೆ ಭಾರತದ ರಾಷ್ಟ್ರಗೀತೆಯನ್ನು ಹೇಗೆ ಮೊಳಗಿಸಲಾಯಿತು ಎಂಬ ಪ್ರಶ್ನೆಗಳು ಎದ್ದಿವೆ.

ಪಿಸಿಬಿ ಬರೆದ ಪತ್ರದಲ್ಲಿ ಏನಿದೆ?
ಪಿಟಿಐ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಸಮಯದಲ್ಲಿ ಭಾರತದ ರಾಷ್ಟ್ರಗೀತೆ ನುಡಿಸಿದ ಘಟನೆಯ ಬಗ್ಗೆ ಪಿಸಿಬಿ, ಐಸಿಸಿಗೆ ಪತ್ರ ಬರೆದಿದೆ. ಈ ವೇಳೆ ಪಿಸಿಬಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ಆದ ಅಚಾತುರ್ಯಕ್ಕೆ ಐಸಿಸಿ ನೇರ ಹೊಣೆಯೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ. ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಈ ವೇಳೆ ಪ್ಲೇ ಪಟ್ಟಿಯಲ್ಲಿ ಭಾರತದ ರಾಷ್ಟ್ರಗೀತೆಯನ್ನು ಹೇಗೆ ನುಡಿಸಲಾಯಿತು. ಈ ಘಟನೆ ನಿಜಕ್ಕೂ ಅರ್ಥವಾಗದ ಸಂಗತಿ ಎಂದು ಪಿಸಿಬಿ ಪತ್ರದಲ್ಲಿ ತಿಳಿಸಿದೆ.
ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ. ಈ ವೇಳೆ ಬಾಂಗ್ಲಾದೇಶ ವಿರುದ್ಧ ಭಾರತ ಕಣಕ್ಕೆ ಇಳಿದಾಗ ಟಿವಿ ಪರದೆಯ ಮೇಲೆ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ ದೇಶದ ಹೆಸರನ್ನು ಲೋಗೋವನ್ನು ತೋರಿಸಿಲ್ಲ ಎಂದು ಪಿಸಿಬಿ ದೂರಿದೆ. ಈ ವೇಳೆ ಐಸಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಅಲ್ಲದೆ ದುಬೈನಲ್ಲಿ ನಡೆಯುವ ಎಲ್ಲಾ ಪಂದ್ಯಗಳಲ್ಲಿ ಪಾಕಿಸ್ತಾನದ ಹೆಸರನ್ನು ಹೊಂದಿರುವ ಲೋಗೋ ಬಳಿಸುವುದಾಗಿ ಪಿಸಿಬಿಗೆ ಭರವಸೆ ನೀಡಿದೆ.
ಭಾನುವಾರ ಹೈವೋಲ್ಟೇಜ್ ಫೈಟ್
ಭಾನುವಾರ ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯ ಪಾಕಿಸ್ತಾನಕ್ಕೆ ಬಹಳ ಮಹತ್ವದಾಗಿದೆ. ಪಾಕ್ ತಾನು ಆಡಿದ ಮೊದಲ ಪಂದ್ಯದಲ್ಲಿ 60 ರನ್ ಸೋಲು ಕಂಡಿದ್ದರಿಂದ, ಸೆಮಿಫೈನಲ್ ಪ್ರವೇಶಿಸಲು ಭಾರತದ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮೊಹಮ್ಮದ್ ರಿಜ್ವಾನ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications