Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್‌ಗೆ ಟೀಮ್ ಇಂಡಿಯಾವನ್ನು ಕಳಿಸುವಂತೆ ಅಂಗಲಾಚುತ್ತಿದೆ PCB

ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಪ್ರವಾಸ ಬೆಳೆಸದೆ ವರ್ಷಗಳೇ ಕಳೆದಿವೆ. ಈ ನಡುವೆ ಹಲವು ಬಾರಿ ಭಾರತ ತಂಡವನ್ನು ಪಾಕ್‌ಗೆ ಕಳುಹಿಸಿಕೊಡಿ ಎಂಬ ಕೂಗ ಸಹ ಕೇಳಿ ಬಂದಿತ್ತು. ಆದರೆ, ಅದಕ್ಕೆ ಬಿಸಿಸಿಐ ಸೊಪ್ಪು ಹಾಕಿರಲಿಲ್ಲ. ಆದರೆ ಈ ನಿಟ್ಟಿನಲ್ಲಿ ಪಿಸಿಬಿ ಈ ಬಾರಿ ಗಂಭೀರವಾಗಿ ಪ್ರಯತ್ನಿಸುತ್ತಿದೆ. ಅಂದಹಾಗೆ ಐಸಿಸಿಯ ಎರಡನೇ ಅತಿ ದೊಡ್ಡ ಪಂದ್ಯಾವಳಿ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್‌ ಟ್ರೋಫಿ ಮುಂದಿನ ವರ್ಷ ನಡೆಯಲಿದೆ.

ಈ ಟ್ರೋಫಿಯ ಸ್ಥಳದ ಬಗ್ಗೆ ಈಗಾಗಲೇ ವಿವಾದ ಪ್ರಾರಂಭವಾಗಿದೆ. ವಾಸ್ತವವಾಗಿ, 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗುವುದು. ಹೀಗಿರುವಾಗ ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವುದೇ ಎಂಬುದೇ ದೊಡ್ಡ ಪ್ರಶ್ನೆ.

PCB Requests BCCI to Send Team India to Pakistan

ಜಯ್‌ ಶಾ ಜೊತೆ ಭೇಟಿ?

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೊಸ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಬಿಸಿಸಿಐ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಿಲಿದ್ದಾರೆ. ಈ ವೇಳೆ ತಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ಭರವಸೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಂದ ನಿರೀಕ್ಷಿಸುತ್ತಿದ್ದಾರೆ. ಆದರೆ, ಸದ್ಯಕ್ಕೆ ಆ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕಾರ್ಯಕಾರಿ ಮಂಡಳಿ ಸಭೆ ಮುಂದಿನ ವಾರ ದುಬೈನಲ್ಲಿ ನಡೆಯಲಿದೆ. ಪಿಸಿಬಿ ಅಧ್ಯಕ್ಷ ನಖ್ವಿ ಅವರು ಜಾಗತಿಕ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಬಿಸಿಸಿಐ ಕಾರ್ಯದರ್ಶಿ ಶಾ ಅವರೊಂದಿಗೆ ಮಾತನಾಡಲು ಯೋಜಿಸಿದ್ದಾರೆ.

ಆದರೆ 2025 ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತೀಯ ಮಂಡಳಿಯೂ ಸಹ ಬದ್ಧವಿಲ್ಲ. ಏಕೆಂದರೆ ಈ ಟೂರ್ನಿ ಸಹ ಸುಮಾರು ಒಂದು ವರ್ಷ ದೂರದಲ್ಲಿದೆ.

PCB Requests BCCI to Send Team India to Pakistan

ಚಾಂಪಿಯನ್ಸ್‌ ಟ್ರೋಫಿ ಎಲ್ಲಿ?

ಚಾಂಪಿಯನ್ಸ್ ಟ್ರೋಫಿಯು ಐಸಿಸಿ ಪಂದ್ಯಾವಳಿ. ಕ್ರಿಕೆಟ್ ಆಡುವ ರಾಷ್ಟ್ರಗಳು ಪಾಕಿಸ್ತಾನಕ್ಕೆ ಭೇಟಿ ನೀಡುವುದರಿಂದ, ಬಿಸಿಸಿಐ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಪ್ರವಾಸ ಬೆಳೆಸುವುದಿಲ್ಲ ಎಂದು ಹೇಳುವುದು ಕೊಂಚ ಕಷ್ಟ. ಆದರೆ ಪಂದ್ಯಾವಳಿಯ ಪ್ರಾರಂಭಕ್ಕೆ ಕೆಲವು ವಾರಗಳ ಮೊದಲು ಭಾರತ ಸರ್ಕಾರದಿಂದ ಒಪ್ಪಿಗೆಯ ಅವಶ್ಯಕತೆ ಇದೆ.

ಇನ್ನು ಏಷ್ಯಾ ಕಪ್‌ನ್ನು ಪಾಕ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಟೀಮ್ ಇಂಡಿಯಾ ಪಾಕ್‌ಗೆ ಎಂಟ್ರಿ ನೀಡುವುದಿಲ್ಲ ಎಂದು ಹೇಳಿದ ತಕ್ಷಣ, ಇದರ ಸ್ವರೂಪವನ್ನೇ ಬದಲಿಸಲಾಯಿತು. ಅಲ್ಲದೆ ಹೈಬ್ರಿಡ್‌ ಮಾಡೆಲ್‌ ಬಳಿಸಲಾಗಿತ್ತು. ಭಾರತ ಈ ಬಾರಿಯೂ ಇದೇ ರೀತಿ ಹೇಳುತ್ತದೆಯಾ ಎಂಬ ಚಿಂತೆ ಪಿಸಿಬಿಗೆ ಕಾಡುತ್ತಿದೆ.

ಪಾಕಿಸ್ತಾನದಲ್ಲಿ ಆಡುವ ನಿರ್ಧಾರವನ್ನು ಭಾರತ ಸರ್ಕಾರ ಮಾತ್ರ ತೆಗೆದುಕೊಳ್ಳಬಹುದು. ಬಿಸಿಸಿಐ ಸರ್ಕಾರದ ಆದೇಶವನ್ನು ಪಾಲಿಸಬೇಕು. ಅಲ್ಲದೆ, ಸರ್ಕಾರದಿಂದ ಅನುಮತಿ ಪಡೆಯಲು ಇದು ಇನ್ನು ಸಮಯಾವಕಾಶ ಇದೆ. ಮತ್ತು ಅವರ ಪಿಸಿಬಿ ಹೊಸ ಅಧ್ಯಕ್ಷರು ಟೀಮ್ ಇಂಡಿಯಾದ ಪಾಕ್‌ ಪ್ರವಾಸ ಕೈಗೊಳ್ಳುವ ಬಗ್ಗೆ ಭರವಸೆಯ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಪಾಕಿಸ್ತಾನ ಆರ್ಥಿಪ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ಸಾಲದ ಸೂಲದಲ್ಲಿ ಸಿಕ್ಕು ಒದ್ದಾಟ ನಡೆಸಿದೆ. ಈ ಪರಿಸ್ಥಿತಿಯಲ್ಲಿ ಪಿಸಿಬಿ, ಭಾರತ ತಂಡವನ್ನು ಪಾಕ್‌ಗೆ ಆಹ್ವಾನ್‌ ನೀಡಿರುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.

Story first published: Monday, March 11, 2024, 18:32 [IST]
Other articles published on Mar 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+