ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ ಆಟಗಾರನಿಗೆ ಹೆಚ್ಚಾಯಿತು ಚಿಂತೆ: ಪಿಸಿಬಿ ನೋಟಿಸ್
ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಟೂರ್ನಿಗೆ ಎಲ್ಲ ತಂಡಗಳು ತಮ್ಮ ತಮ್ಮ ಅಭ್ಯಾಸವನ್ನು ಆರಂಭಿಸಿವೆ. ಮುಂಬೈ ಇಂಡಿಯನ್ಸ್ ಸಹ ತನ್ನ ತಾಲೀಮು ನಡೆಸಿದೆ. ಈ ವೇಳೆ ತಂಡದ ಸ್ಟಾರ್ ಆಟಗಾರರು ತಂಡದ ಕ್ಯಾಂಪ್ ಸೇರಿದ್ದಾರೆ. ಈ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಬಂದು ಆ ನೋಟೀಸ್ ಮುಂಬೈ ಇಂಡಿಯನ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಐಪಿಎಲ್ ಮುಂಚಿತವಾಗಿ ಗಾಯಗೊಂಡ ಲಿಜರ್ಡ್ ವಿಲಿಯಮ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರನ್ನು ಮುಂಬೈ ಇಂಡಿಯನ್ಸ್ ಸೇರಿಸಿಕೊಂಡಿದೆ. ಈಗ ಈ ಪ್ಲೇಯರ್‌ಗೆ ಸಂಬಂಧಿಸಿದಂತೆ ಪಿಸಿಬಿ ಈಗ ಕಾನೂನು ನೋಟೀಸ್ ಕಳುಹಿಸಿದೆ. ಪಿಸಿಬಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಪ್ರಕಟಣೆಯನ್ನು ನೀಡಿದೆ.

ನೋಟಿಸ್‌ನಲ್ಲಿ ಏನಿದೆ?
ಪಿಸಿಬಿ ಹೊರಡಿಸಿರುವ ಸೂಚನೆಯಲ್ಲಿ ಕಾರ್ಬಿನ್ ಬಾಷ್ ಒಪ್ಪಂದವನ್ನು ಗಾಳಿಗೆ ತೂರಿದೆ ಎಂದು ತಿಳಿಸಿದೆ. ಪಿಎಸ್‌ಎಲ್ ನಲ್ಲಿ ಪೇಶಾವರ್ ಝಲ್ಮಿ ಇವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಈ ಬಾರಿಯ ಐಪಿಎಲ್ ಹಾಗೂ ಪಿಸಿಬಿ ವೇಳಾಪಟ್ಟಿ ಒಂದೇ ಬಾರಿ ನಡೆಯುತ್ತಿದೆ. ಪಿಎಸ್ಎಲ್ ನಿಂದ ಹಿಂದೆ ಸರಿಯುವ ದಕ್ಷಿಣ ಆಫ್ರಿಕಾದ ಆಟಗಾರ ನಡೆ ತೊಂದರೆಗೆ ಸಿಲುಕಿಸಿದೆ. ಪಿಸಿಬಿ ಆಡಳಿತ ಮಂಡಳಿಯು ಅವರು ಲೀಗ್‌ನಿಂದ ನಿರ್ಗಮಿಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದೆ ಮತ್ತು ನಿಗದಿತ ಸಮಯದೊಳಗೆ ಅವರ ಪ್ರತಿಕ್ರಿಯೆಯನ್ನು ಕೋರಿದೆ.
ಕಾರ್ಬಿನ್ ಬಾಷ್ ಈಗಾಗಲೆ ವಿಶ್ವದ ನಾನಾ ಲೀಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಸಿದ್ದಾರೆ. ಇವರು ಸಿಪಿಎಲ್ ಹಾಗೂ ಎಂಎಸ್‌ಎಲ್ ಟೂರ್ನಿಗಳಲ್ಲಿ ಭಾಗವಾಗಿದ್ದರು. ಇವರು ಕೆರಿಬಿಯನ್ ಲೀಗ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಅಲ್ಲದೆ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದ್ದರು. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ 86 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 59 ವಿಕೆಟ್ ಪಡೆದಿದ್ದು, 113.33 ರ ಸ್ಟ್ರೈಕ್ ರೇಟ್‌ನಲ್ಲಿ 663 ರನ್ ಚಚ್ಚಿದ್ದಾರೆ.

ಕಾರ್ಬಿನ್ ಬಾಷ್ ಈಗಾಗಲೇ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್ ಆಡಿ ಸೈ ಎನಿಸಿಕೊಂಡಿದ್ದಾರೆ. ಸೆಂಚೂರಿಯನ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದಾರೆ. ಅಲ್ಲದೆ 5 ವಿಕೆಟ್ ಹಾಗೂ 81 ರನ್ ಸಿಡಿಸಿ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ. ಇನ್ನು ಎರಡು ಏಕದಿನ ಪಂದ್ಯಗಳನ್ನು ಆಡಿರುವ 55 ಪಂದ್ಯಗಳನ್ನು ಆಡಿದ್ದು 2 ವಿಕೆಟ್ ಪಡೆದು ಬಿಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications