For Quick Alerts
ALLOW NOTIFICATIONS  
For Daily Alerts
 

ಪ್ರತಿಷ್ಠೆಗಾಗಿ ಐಸಿಸಿ ಟೂರ್ನಿ ಆಯೋಜಿಸಿ 869 ಕೋಟಿ ರೂ. ನಷ್ಟ ಅನುಭವಿಸುತ್ತಿರುವ ಪಿಸಿಬಿ

ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸಿತ್ತು. ಈ ಟೂರ್ನಿಯ ಆಯೋಜನೆ ಮಾಡುವುದರಿಂದ ತನ್ನ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳಬಹುದು ಎಂಬ ಇರಾದೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯದ್ದಾಗಿತ್ತು. ಆದರೆ ಪಿಸಿಬಿ ಹಾಕಿಕೊಂಡ ಪ್ಲ್ಯಾನ್ ಎಲ್ಲ ಉಲ್ಟಾ ಆಗಿದೆ. ಚಾಂಪಿಯನ್ಸ್‌ ಟ್ರೋಫಿಯನ್ನು ಆಯೋಜನೆ ಮಾಡಿದ ಮೇಲೆ ಪಿಸಿಬಿ ಖಜಾನೆ ಖಾಲಿ ಖಾಲಿ ಆಗಿದೆ. ಅಲ್ಲದೆ ಸುಮಾರು 85 ಮಿಲಿಯನ್ ಯುಎಸ್ ಡಾಲರ್ (869 ಕೋಟಿ ರೂ.) ನಷ್ಟವನ್ನು ಆಯೋಜಿತ ಪಾಕ್‌ ಅನುಭವಿಸಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ಕ್ರಿಕೆಟ್‌ ತಂಡ ತವರಿನಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲೂ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ಎರಡನೇ ಪಂದ್ಯ ದುಬೈನಲ್ಲಿ ನಡೆದಿತ್ತು. ಮೂರನೇ ಪಂದ್ಯಕ್ಕೆ ಮಳೆ ಹಾಟ ನೀಡಿದ್ದರಿಂದ ನಡೆಯಲಿಲ್ಲ. ಈ ಎಲ್ಲ ಕಾರಣಗಳಿಂದ ಮೈದಾನಗಳತ್ತ ಕ್ರಿಕೆಟ್‌ ಅಭಿಮಾನಿಗಳು ಬರುವುದು ಕಡಿಮೆ ಆಯಿತು. ಅಲ್ಲದೆ ಆತಿಥೇಯ ತಂಡದ ಪ್ರದರ್ಶನ ಅಭಿಮಾನಿಗಳನ್ನು ನಿರಾಸೆ ಮೂಡಿಸಿತ್ತು. ಇಷ್ಟೇ ಅಲ್ಲದೆ ಮಳೆ ಎಲ್ಲರನ್ನೂ ಹೈರಾಣ ಮಾಡಿತ್ತು. ಈ ಎಲ್ಲದರ ಪರಿಣಾಮ ಚಾಂಪಿಯನ್ಸ್ ಟ್ರೋಫಿ ಆಯೋಜಿತ ಪಾಕ್‌ ನಷ್ಟಕ್ಕೆ ಗುರಿಯಾಗಿದೆ.

PCB Suffers 869 Crore Rupee Loss from Champions Trophy 2025 Due to Hybrid Model and Rain

ಎಷ್ಟು ನಷ್ಟ?

ಪ್ರತಿಷ್ಠಿತ ಐಸಿಸಿ ಟೂರ್ನಿಯನ್ನು ಆಯೋಜಿಸುವುದರಿಂದ ಪಾಕ್‌ ಖಜಾನೆ ತುಂಬುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ 29 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ್ದ ಪಾಕ್‌ 869 ಕೋಟಿ ರೂ. ನಷ್ಟವನ್ನು ಅನುಭವಿಸುತ್ತದೆ ಎಂದು ಸ್ವತಃ ಪಾಕ್‌ ಸಹ ಊಹಿಸರಲು ಸಾಧ್ಯವಿಲ್ಲ. ಪಾಕ್‌ನ ಭಾರೀ ನಷ್ಟಕ್ಕೆ ಬಿಸಿಸಿಐ ಆ ಒಂದು ನಿರ್ಧಾರವೂ ಕಾರಣ ಎಂದು ತಿಳಿದು ಬಂದಿದೆ.

2021 ರಲ್ಲಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವುದಾಗಿ ಐಸಿಸಿ ಘೋಷಿಸಿತ್ತು. ಈ ಬಳಿಕ, ಪಾಕಿಸ್ತಾನವು ಪ್ರತಿಷ್ಠಿತ ಟೂರ್ನಿಯ ಸಿದ್ಧತೆಗೆ ಸುಮಾರು 869 ಕೋಟಿ ರೂ. ಖರ್ಚು ಮಾಡಿದೆ. ಇಷ್ಟು ದೊಡ್ಡ ನಷ್ಟವನ್ನು ಪಾಕ್‌ ಹೇಗೆ ಅನುಭವಿಸಿತು ಎಂಬ ಬಗ್ಗೆ ವರದಿ ಇಲ್ಲಿದೆ.

3 ಪಂದ್ಯಗಳು ಮಳೆಗೆ ಆಹುತಿ

ಪಾಕ್‌ನಲ್ಲಿ ಅಯೋಜಿತ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡವನ್ನು ಭದ್ರತಾ ಕಾರಣಗಳಿಂದ ಕಳಿಸಲು ಬಿಸಿಸಿಐ ಒಪ್ಪಲಿಲ್ಲ. ಈ ಪರಿಸ್ಥಿತಿಯಲ್ಲಿ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಯಿತು. ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತು. ಟೀಮ್ ಇಂಡಿಯಾದಿಂದಾಗಿ ಪಿಸಿಬಿ ಬಂಪರ್ ಲಾಭ ಗಳಿಸಬೇಕಿತ್ತು ಆದರೆ ಅದು ಸಿಗಲಿಲ್ಲ. ಪಾಕ್‌ನಲ್ಲಿ ನಡೆದ 10 ಪಂದ್ಯಗಳಲ್ಲಿ 3 ಪಂದ್ಯ ಮಳೆಗೆ ಆಹುತಿಯಾಯಿತು. ಹೀಗಾಗಿ ಪಿಸಿಬಿ ಟಿಕೆಟ್ ಹಣವನ್ನು ಅಭಿಮಾನಿಗಳಿಗೆ ಮರು ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು.

ಪಿಸಿಬಿ ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್ ಮೈದಾನಗಳನ್ನು ನವೀಕರಿಸಲು ಸುಮಾರು 560 ಕೋಟಿ ರೂ. ಖರ್ಚು ಮಾಡಿದೆ ಎಂದು "ದಿ ಟೆಲಿಗ್ರಾಫ್‌" ವರದಿ ಮಾಡಿದೆ. ಮೈದಾನದ ನವೀಕರಣಕ್ಕೆ ಪೋಲಾದ ಹಣ ಮೂಲ ಬೆಲೆಗಿಂತ ಡಬಲ್ ಆಗಿದೆ. ಇನ್ನು ಟೂರ್ನಿಯ ಸಿದ್ಧತೆಗೆ 347 ಕೋಟಿ ಖರ್ಚು ಮಾಡಿತು. ಟಿಕೆಟ್‌ನಿಂದ ಪಾಕ್‌ಗೆ 52 ಕೋಟಿ ರೂ. ಗಳಿಸಿದೆ ಎಂದು ತಿಳಿದು ಬಂದಿದೆ.

ಪಿಸಿಬಿ ಈ ಭಾರೀ ಮೊತ್ತವನ್ನು ಸರಿದೂಗಿಸಲು ದೇಶೀಯ ಆಟಗಾರರ ಪಂದ್ಯ ಶುಲ್ಕದ ಮೇಲೆ ಕಣ್ಣು ಹಾಕಿದ್ದು, ಶೇಕಡಾ 90 ರಷ್ಟು ಕಡಿಮೆ ಮಾಡುವ ಚಿಂತನೆ ನಡೆದಿದೆ.

Story first published: Monday, March 17, 2025, 17:15 [IST]
Other articles published on Mar 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+