Champions Trophy 2025: ಮೈದಾನವನ್ನು ಐಸಿಸಿಗೆ ಹಸ್ತಾಂತರಿಸಲು ಇಂದೇ ಡೆಡ್ ಲೈನ್: ಏನು ಹೇಳುತ್ತೆ ಪಿಸಿಬಿ
ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿವೆ. ಈ ಮೆಗಾ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಚಾಂಪಿಯನ್ಸ್ ಟ್ರೋಫಿ ಏಳು ವರ್ಷಗಳ ಬಳಿಕ ನಡೆಯುತ್ತಿದ್ದ ಎಲ್ಲರ ಚಿತ್ತ ಕದ್ದಿದೆ. ಆದರೆ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಈಗ ಮತ್ತೊಂದು ಸುದ್ದಿ ಬಂದಿದೆ. ಚಾಂಪಿಯನ್ಸ್ ಟ್ರೋಫಿಗೆ ಮೈದಾನವನ್ನು ಪಿಸಿಬಿ, ಐಸಿಸಿಗೆ ಹಸ್ತಾಂತರಿಸಲು ಶುಕ್ರವಾರ ಕೊನೆಯ ದಿನಾವಗಿತ್ತು. ಆದರೆ ಸಮಯ ಕಳೆದರೂ ಯಾವುದೇ ಕಾರ್ಯಗಳು ಇನ್ನು ಮುಗಿಯದೇ ಇರುವುದುಕ್ಕೆ ಐಸಿಸಿ ಗರಂ ಆಗಿದೆ.
ನಿಗದಿತ ಸಮಯದಲ್ಲಿ ಮೈದಾನಗಳನ್ನು ಹಸ್ತಾಂತರಿಸದೇ ಇದ್ದರೇ ಹೇಗೆ ಎಂಬ ಪ್ರಶ್ನೆಗಳು ಮೂಡಿವೆ. ಇನ್ನು ಮೈದಾನದಲ್ಲಿ ಮೂಲ ಸೌಕರ್ಯಗಳ ಸುಧಾರಣೆ ಕಾರ್ಯ ನಡೆಯುತ್ತಿದೆ. ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್‌ನ ಕೆಲವು ಮೈದಾನಗಳಲ್ಲಿ, ಆಸನ ವ್ಯವಸ್ಥೆ ಇನ್ನೂ ಪೂರ್ಣಗೊಂಡಿಲ್ಲ, ಆದರೆ ಕೆಲವು ಕಡೆ ನಿರ್ಮಾಣ ಕಾರ್ಯಗಳು ಇನ್ನೂ ನಡೆಯುತ್ತಿವೆ. ಈಗ ಮೈದಾನದ ಸಿದ್ಧತೆಗೆ ಸಂಬಂಧಿಸಿದಂತೆ ಹೊಸ ಅಪ್‌ಡೇಟ್ ಹೊರ ಬಂದಿದೆ.

ಪಾಕಿಸ್ತಾನದ ಖ್ಯಾತ ಮಾಧ್ಯಮ ಸಂಸ್ಥೆ "ಡಿ ಡಾನ್" ಐಸಿಸಿ ನೀಡಿದ ಗಡುವಿನಲ್ಲಿ ಮೈದಾನಗಳ ಕಾರ್ಯ ಪೂರ್ಣಗೊಳಿಸುವುದು ಅಸಾಧ್ಯ ಎಂದು ತಿಳಿಸಿದೆ. ಈ ಬಗ್ಗೆ ಪಿಸಿಬಿ ಪದೇ ಪದೇ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕ್ರೀಡಾಂಗಣಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಂದು ಕರಾಚಿಯಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ.
ಚಾಂಪಿಯನ್ಸ್ ಟ್ರೋಫಿ ನಡೆಯಲಿರುವ ಮೂರು ಮೈದಾನಗಳಲ್ಲಿ ಪಾಕಿಸ್ತಾನ ಭರದ ಕಾರ್ಯಗಳನ್ನು ನಡೆಸಿದೆ. ಈ ಸಿದ್ಧತೆಗಾಗಿ ಪಿಸಿಬಿ ಸುಮಾರು 1200 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಮೊತ್ತವನ್ನು ಭಾರತದ ರೂಪಾಯಿಗಳಿಗೆ ಪರಿವರ್ತಿಸಿದಾಗ ಇದರ ಮೊತ್ತ 373 ಕೋಟಿ ರೂ ಆಗುತ್ತದೆ. ಮೈದಾನದ ಸಂಪೂರ್ಣ ಸಿದ್ಧತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಭಾರತದ ಪಂದ್ಯಗಳು ದುಬೈನಲ್ಲಿ
ಚಾಂಪಿಯನ್ಸ್ ಟ್ರೋಫಿ ಏಳು ವರ್ಷಗಳ ಬಳಿಕ ನಡೆಯಲಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಹೈ ಬ್ರಿಡ್ ಮಾಡೆಲ್‌ನಲ್ಲಿ ನಡೆಸಲಾಗುತ್ತಿದೆ. ಭಾರತ, ಪಾಕ್ ಪ್ರವಾಸ ಬೆಳೆಸುತ್ತಿಲ್ಲ. ಈ ಪಂದ್ಯಗಳನ್ನು ದುಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ನಡೆಯಲಿವೆ. ಇನ್ನು ಭಾರತ ಫೈನಲ್, ಸೆಮಿಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಲ್ಲಿಯೂ ಈ ಪಂದ್ಯಗಳು ಸಹ ದುಬೈನಲ್ಲಿ ನಡೆಯಲಿದೆ. ಒಂದು ವೇಳೆ ಭಾರತ ನಾಕೌಟ್‌ಗೆ ಪ್ರವೇಶ ಪಡೆಯದೇ ಇದ್ದಲ್ಲಿ, ಈ ಪಂದ್ಯಗಳು ಪಾಕ್‌ನಲ್ಲಿ ನಡೆಯಲಿವೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ "ಎ" ತಂಡದಲ್ಲಿ ಸ್ಥಾನ ಪಡೆದಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್ ತಂಡಗಳು ಲೀಗ್‌ನಲ್ಲಿ ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications