Champions Trophy 2025: ಟೂರ್ನಿಯ ವೇಳಾಪಟ್ಟಿಯನ್ನು ಪಿಸಿಬಿ ಬದಲಾವಣೆ ಮಾಡುತ್ತಾ?
ನವದೆಹಲಿ: 2025ರ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕ್ರೀಡಾಂಗಣಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದರೂ ಪಾಕಿಸ್ತಾನ ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸುತ್ತಿಲ್ಲ.
ಮತ್ತೊಂದೆಡೆ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಬದಲಾವಣೆ ಮಾಡುವ ಬಗ್ಗೆ ಎಲ್ಲಾ ಮಾಧ್ಯಮ ವರದಿ ಮಾಡಿವೆ. ಇದರ ನಡುವೆ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಮಾಡಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕ್ರಿಕೆಟ್ ಗಲ್ಲಿಯಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಭದ್ರತಾ ಕಾರಣಗಳಿಂದಾಗಿ ಚಾಂಪಿಯನ್ಸ್ ಟ್ರೋಫಿ ಟೂ ಮರುನಿಗದಿಪಡಿಸಲಾಗುವುದು ಎಂದು ಹೇಳುತ್ತಿರುವ ಎಲ್ಲಾ ಮಾಧ್ಯಮ ವರದಿಗಳನ್ನು ಪಿಸಿಬಿ ನಿರಾಕರಿಸಿದೆ. ಪಿಸಿಬಿ ಅಧಿಕೃತ ಹೇಳಿಕೆಯ ಮೂಲಕ ಮಾಧ್ಯಮಗಳ ವರದಿ ಸುಳ್ಳೆಂದು ತಿಳಿಸಿದೆ.
ಈಗಾಗಲೇ ಸಿದ್ಧಪಡಿಸಿರುವ ವೇಳಾಪಟ್ಟಿಯ ಪ್ರಕಾರ ಚಾಂಪಿಯನ್ಸ್ ಟ್ರೋಫಿಯನ್ನು ನಡೆಸಲಾಗುವುದು ಎಂದು ಪಿಸಿಬಿ ಖಚಿತಪಡಿಸಿದೆ. ಈ ಹಿಂದೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯುಎಇ ಅಥವಾ ಶ್ರೀಲಂಕಾದಲ್ಲಿ ತನ್ನ ಚಾಂಪಿಯನ್ ಟ್ರೋಫಿಯ ಪಂದ್ಯಗಳನ್ನು ನಡೆಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಮನವಿ ಮಾಡಿದೆ.
ಇನ್ನೊಂದೆಡೆ ಅಗತ್ಯವಿದ್ದರೆ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗಬಹುದು. ಆದರೆ ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಇದೆಲ್ಲದರ ನಡುವೆ ಪಿಸಿಬಿ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ್ದು, ವೇಳಾಪಟ್ಟಿಯ ಪ್ರಕಾರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಮೂರು ಪ್ರಮುಖ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಅನ್ನು ಆಯೋಜಿಸಲು ಪಿಸಿಬಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಐಸಿಸಿಗೂ ಟೂರ್ನಿಯ ಕರಡು ವೇಳಾಪಟ್ಟಿಯನ್ನು ಸಲ್ಲಿಸಿದೆ.
ಕೊನೆ ಬಾರಿ ಚಾಂಪಿಯನ್ ಟ್ರೋಫಿ ನಡೆಸಿದ್ದು?
ಎಂಟು ವರ್ಷಗಳ ಹಿಂದೆ ನಡೆದ ಚಾಂಪಿಯನ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ಪ್ರಶಸ್ತಿಯನ್ನು ಗೆದ್ದಿದೆ. ಈಗ ಪಾಕಿಸ್ತಾನವು ಹಾಲಿ ಚಾಂಪಿಯನ್ ಆಗಿದ್ದು, ಎಂಟು ವರ್ಷಗಳ ಸುದೀರ್ಘ ಅಂತರದ ನಂತರ ಟೂರ್ನಿಯನ್ನು ಆಯೋಜಿಸಲು ಉತ್ಸಾಹದಲ್ಲಿದೆ.
2017ರಲ್ಲಿ ಕೊನೆಯ ಬಾರಿ ಟೂರ್ನಿ ನಡೆದಾಗ ಪಾಕಿಸ್ತಾನ ತಂಡ ಭಾರತವನ್ನು 180 ರನ್ಗಳ ಅಂತರದಿಂದ ಸೋಲಿಸಿತ್ತು. ಇದೀಗ ಬಹಳ ಸಮಯದ ನಂತರ ಟೂರ್ನಿ ಮತ್ತೆ ಬರುತ್ತಿದ್ದು, ಈ ಬಾರಿಯೂ ಪಾಕಿಸ್ತಾನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಜ್ಜಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications