For Quick Alerts
ALLOW NOTIFICATIONS  
For Daily Alerts
 

2023ರ ಏಷ್ಯಾ ಕಪ್‌ಗೆ ಆಯ್ಕೆಯಾದ ಭಾರತ ತಂಡದ 17 ಆಟಗಾರರ ಏಕದಿನ ಪ್ರದರ್ಶನ ಹೇಗಿದೆ?

ಆಗಸ್ಟ್ 30ರಿಂದ ಆರಂಭಗೊಳ್ಳುವ 2023ರ ಏಷ್ಯಾ ಕಪ್‌ ಪಂದ್ಯಾವಳಿಗಾಗಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ಅವರು 17 ಸದಸ್ಯರ ಭಾರತ ತಂಡವನ್ನು ಸೋಮವಾರ, ಆಗಸ್ಟ್ 21ರಂದು ಪ್ರಕಟಿಸಿದರು.

ಸುದೀರ್ಘ ಗಾಯದ ವಿಶ್ರಾಂತಿಯಿಂದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಭಾರತ ತಂಡಕ್ಕೆ ಮರಳಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲ ತಂದುಕೊಡಲಿದೆ.

ಕೆಎಲ್ ರಾಹುಲ್‌ ಇನ್ನೂ ಸಂಪೂರ್ಣ ಫಿಟ್‌ನೆಸ್ ಹೊಂದಿರುವ ಅನುಮಾನದಲ್ಲಿ ಇಶಾನ್ ಕಿಶನ್ ಎರಡನೇ ವಿಕೆಟ್‌ಕೀಪರ್ ಆಗಿ ಆಯ್ಕೆಯಾಗಿದ್ದರೆ, ಸಂಜು ಸ್ಯಾಮ್ಸನ್ ಅವರನ್ನು ಬ್ಯಾಕ್ಅಪ್ ಆಟಗಾರ ಎಂದು ಹೆಸರಿಸಲಾಗಿದೆ.

analysis-and-statistics-of-indias-asia-cup-2023-squad

ಇನ್ನು 2023ರ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಭಾರತ ತಂಡದ ಮೊದಲ ಪಂದ್ಯ ಕ್ಯಾಂಡಿಯಲ್ಲಿ ಸೆಪ್ಟೆಂಬರ್ 2ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆಡಲಿದೆ.

ಈ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ ತಂಡವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ, ಇದು 2023ರ ಏಕದಿನ ವಿಶ್ವಕಪ್‌ಗಾಗಿ ತಂಡವು ಹೇಗಿರುತ್ತದೆ ಎಂಬುದರ ಕುರಿತು ಕಲ್ಪನೆಯನ್ನು ನೀಡಲಿದೆ.

2023ರ ಏಷ್ಯಾ ಕಪ್ ಪಂದ್ಯಾವಳಿಗೆ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಪ್ರಯಾಣದ ಮೀಸಲು ಆಟಗಾರ).

analysis-and-statistics-of-indias-asia-cup-2023-squad

2022ರಿಂದ ಏಷ್ಯಾ ಕಪ್ ಭಾರತ ತಂಡದ ಆಟಗಾರರ ಪ್ರದರ್ಶನ ಹೀಗಿದೆ

ರೋಹಿತ್ ಶರ್ಮಾ (ನಾಯಕ) - ಭಾರತ ತಂಡದ ಖಾಯಂ ನಾಯಕ ಮತ್ತು ಉತ್ತಮ ಆರಂಭಿಕ ಆಟಗಾರ ರೋಹಿತ್ ಶರ್ಮಾ 2022ರ ಆರಂಭದಿಂದ ಈವರೆಗೆ 17 ಏಕದಿನ ಪಂದ್ಯಗಳಲ್ಲಿ 45.14ರ ಸರಾಸರಿಯಲ್ಲಿ 632 ರನ್ ಗಳಿಸಿದ್ದಾರೆ.

ಶುಭ್ಮನ್ ಗಿಲ್ - ಕಳೆದ ಒಂದು ವರ್ಷದಿಂದ ಏಕದಿನ ಸ್ವರೂಪದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಬ್ಯಾಟರ್ ಎಂದರೆ ಶುಭ್ಮನ್ ಗಿಲ್. ಜನವರಿ 2022ರಿಂದ 24 ಏಕದಿನ ಪಂದ್ಯಗಳಲ್ಲಿ 69.40ರ ಸರಾಸರಿಯಲ್ಲಿ 1388 ರನ್ ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ - ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಖಾಯಂ ಸದಸ್ಯ. 2022ರಿಂದ 21 ಏಕದಿನ ಪಂದ್ಯಗಳನ್ನು ಆಡಿದ್ದು, 38.36ರ ಸರಾಸರಿಯಲ್ಲಿ 729 ರನ್ ಒಟ್ಟುಗೂಡಿಸಿದ್ದಾರೆ.

ತಿಲಕ್ ವರ್ಮಾ - ಇತ್ತೀಚಿಗೆ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಟಿ20 ಸರಣಿಯು ಯುವ ಬ್ಯಾಟರ್ ತಿಲಕ್ ವರ್ಮಾಗೆ ಭವಿಷ್ಯ ನೀಡಿದರೆ, ಭಾರತ ತಂಡಕ್ಕೆ ಭರವಸೆ ನೀಡಿದೆ. ಇದುವರೆಗೆ ಆಡಿರುವ 7 ಟಿ20 ಪಂದ್ಯಗಳಲ್ಲಿ 174 ರನ್ ಗಳಿಸಿ 1 ವಿಕೆಟ್ ಪಡೆದಿದ್ದಾರೆ.

ಕೆಎಲ್ ರಾಹುಲ್ (ವಿಕೆಟ್ ಕೀಪರ್) - ತೊಡೆ ಸಂದು ಗಾಯದಿಂದಾಗಿ ಕೆಎಲ್ ರಾಹುಲ್ ಮೇ ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದನ್ನು ತಡೆದಿದೆ. 2022ರಿಂದ 16 ಏಕದಿನ ಕ್ರಿಕೆಟ್ ಸ್ವರೂಪದಲ್ಲಿ 36.69ರ ಸರಾಸರಿಯಲ್ಲಿ 477 ರನ್ ಗಳಿಸಿದ್ದಾರೆ.

ಇಶಾನ್ ಕಿಶನ್ (ವಿಕೆಟ್ ಕೀಪರ್) - ಎರಡನೇ ಆಯ್ಕೆಯ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ. ಈ ಎಡಗೈ ಬ್ಯಾಟರ್ ಆರಂಭಿಕ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. 2022ರಿಂದ 15 ಏಕದಿನ ಪಂದ್ಯಗಳಲ್ಲಿ ಆಡಿದ್ದು, 48.76ರ ಸರಾಸರಿಯಲ್ಲಿ 634 ರನ್ ಬಾರಿಸಿದ್ದಾರೆ.

ಶ್ರೇಯಸ್ ಅಯ್ಯರ್ - ಬೆನ್ನು ನೋವಿಗೆ ಚಿಕಿತ್ಸೆ ಪಡೆದು ತಂಡಕ್ಕೆ ಮರಳಿದ ಮಧ್ಯಮ ಕ್ರಮಾಂಕದ ಮತ್ತೊಬ್ಬ ನಂಬಿಕಸ್ಥ ಆಟಗಾರ ಶ್ರೇಯಸ್ ಅಯ್ಯರ್. 2022ರಿಂದ ಆಡಿರುವ 20 ಏಕದಿನ ಪಂದ್ಯಗಳಲ್ಲಿ 51.12ರ ಸರಾಸರಿಯಲ್ಲಿ 818 ರನ್ ಕಲೆಹಾಕಿದ್ದಾರೆ.

ಸೂರ್ಯಕುಮಾರ್ ಯಾದವ್ - ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಆಟಗಾರ ಸೂರ್ಯಕುಮಾರ್ ಯಾದವ್. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಅವರ ಫಾರ್ಮ್ ಚಿಂತಾಜನಕವಾಗಿದೆ. 2022ರಿಂದ ಆಡಿದ 23 ಏಕದಿನ ಪಂದ್ಯಗಳಲ್ಲಿ 20.36ರ ಸರಾಸರಿಯಲ್ಲಿ 387 ರನ್ ಗಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ (ಉಪನಾಯಕ) - ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. 2022ರಿಂದ ಈವರೆಗೆ 14 ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು, 34.54ರ ಸರಾಸರಿಯಲ್ಲಿ 380 ರನ್ ಗಳಿಸಿ, 16 ವಿಕೆಟ್ ಕಿತ್ತಿದ್ದಾರೆ.

ರವೀಂದ್ರ ಜಡೇಜಾ - ಪ್ರಸ್ತುತ ಭಾರತ ತಂಡದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರು. ಅವರು 2022ರಿಂದ ಕೇವಲ 9 ಏಕದಿನ ಪಂದ್ಯಗಳನ್ನು ಆಡಿದ್ದು, 149 ರನ್ ಮತ್ತು ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ - ಗಾಯದ ಕಾರಣ 11 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಸದ್ಯ ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2022ರಿಂದ 5 ಏಕದಿನ ಪಂದ್ಯಗಳಲ್ಲಿ 13 ವಿಕೆಟ್‌ ಕಬಳಿಸಿದ್ದಾರೆ.

ಮೊಹಮ್ಮದ್ ಶಮಿ - ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಅವರನ್ನು ನಿರ್ಲಕ್ಷಿಸಲಾಗುವುದಿಲ್ಲ. 2022ರಿಂದ ಆಡಿರುವ 11 ಏಕದಿನ ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮೊಹಮ್ಮದ್ ಸಿರಾಜ್ - ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡದ ಪರ ಪರಿಣಾಮಕಾರಿ ಪ್ರದರ್ಶನ ನೀಡುತ್ತಿರುವ ವೇಗಿ ಮೊಹಮ್ಮದ್ ಸಿರಾಜ್. 2022ರಿಂದ ಆಡಿರುವ 23 ಏಕದಿನ ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ 43 ವಿಕೆಟ್ ಪಡೆದು ಗಮನಸೆಳೆದಿದ್ದಾರೆ.

ಶಾರ್ದೂಲ್ ಠಾಕೂರ್ - ಮತ್ತೊಬ್ಬ ವೇಗದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್. ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. 2022ರಿಂದ ಆಡಿದ 23 ಏಕದಿನ ಪಂದ್ಯಗಳಲ್ಲಿ 208 ರನ್ ಗಳಿಸಿಮ, 36 ವಿಕೆಟ್ ಕಿತ್ತಿದ್ದಾರೆ.

ಕುಲದೀಪ್ ಯಾದವ್ - ವೆಸ್ಟ್ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. 2022ರಿಂದ ಆಡಿದ 19 ಏಕದಿನ ಪಂದ್ಯಗಳಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಕ್ಷರ್ ಪಟೇಲ್ - ರವೀಂದ್ರ ಜಡೇಜಾ ಅವರಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯಗಳನ್ನು ಹೊಂದಿದ್ದಾರೆ. 2022ರಿಂದ ಕಾಣಿಸಿಕೊಂಡ 14 ಏಕದಿನ ಪಂದ್ಯಗಳಲ್ಲಿ 232 ರನ್ ಗಳಿಸಿ, 13 ವಿಕೆಟ್ ಪಡೆದಿದ್ದಾರೆ.

ಪ್ರಸಿದ್ಧ್ ಕೃಷ್ಣ - ಗಾಯದ ಕಾರಣದಿಂದ ಭಾರತ ತಂಡದಿಂದ ಹೊರಗುಳಿದಿದ್ದ ಪ್ರಸಿದ್ಧ್ ಕೃಷ್ಣ ಏಷ್ಯಾ ಕಪ್ ಮೂಲಕ ಹಿಂದಿರುಗಿದ್ದಾರೆ. ಸದ್ಯ ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. 2022ರಿಂದ ಆಡಿದ 11 ಏಕದಿನ ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸಂಜು ಸ್ಯಾಮ್ಸನ್ (ಮೀಸಲು ಆಟಗಾರ) - ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ 2022ರಿಂದ ಆಡಿದ 13 ಪಂದ್ಯಗಳಲ್ಲಿ 55.71ರ ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ.

Story first published: Monday, August 21, 2023, 16:28 [IST]
Other articles published on Aug 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+