ಪಿಎಸ್‌ಎಲ್ ಫೈನಲ್‌ಗೂ ಮುನ್ನ ಪೇಶ್ವರ್‌ನ ಹೈದರ್ ಅಲಿ, ಉಮೈದ್ ಆಸಿಫ್ ಅಮಾನತು

ಅಬುಧಾಬಿ: ಪೇಶ್ವರ್ ಝಲ್ಮಿ ಬ್ಯಾಟ್ಸ್‌ಮನ್ ಹೈದರ್ ಅಲಿ ಮತ್ತು ವೇಗಿ ಉಮೈದ್ ಆಸಿಫ್ ಅವರನ್ನು ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) 2021ರ ಫೈನಲ್ ಪಂದ್ಯಕ್ಕೂ ಮುನ್ನ ಅಮಾನತುಗೊಳಿಸಲಾಗಿದೆ. ಅವರಿಬ್ಬರೂ ಪಿಎಸ್‌ಎಲ್ ಫೈನಲ್ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ಹೈದರ್ ಅಲಿ ಉಮೈದ್ ಆಸಿಫ್ ಅವರನ್ನು ಅಮಾನತುಗೊಳಿಸುವ ನಿರ್ಧಾರವನ್ನು ಬುಧವಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಇಬ್ಬರೂ ಆಟಗಾರರು ಆರೋಗ್ಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರಿಂದ ಅವರನ್ನು ಫೈನಲ್ ಪಂದ್ಯದಿಂದ ಹೊರಗಿಡಲಾಗಿದೆ.
ಮುಂದೆ ಪಾಕ್ ತಂಡ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ಗೆ ಪ್ರವಾಸ ಹೋಗಲಿದ್ದು, ಪ್ರವಾಸದ ವೇಳೆ ಪಾಕ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗಿದ್ದ ಉಮೈದ್ ಆಸಿಫ್ ತಂಡದಲ್ಲಿ ಲಭ್ಯರಿಸುವ ನಿರೀಕ್ಷೆಯಿಲ್ಲ. ಅವರು ಆ ಪ್ರವಾಸದಿಂದಲೂ ಹೊರಗಿರುವ ಸಾಧ್ಯತೆಯಿದೆ.
"ಆರೋಗ್ಯ ಸುರಕ್ಷಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರಿಂದ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಬಯೋಬಬಲ್ ಉಲ್ಲಂಘಿಸಿ ಅವರು ಹೊರಗಿನವರನ್ನು ಭೇಟಿಯಾಗಿದ್ದರು. ಅಲ್ಲದೆ ಮಾರ್ಗಸೂಚಿಯಂತೆ ಅಂತರ ಕಾಯ್ದುಕೊಂಡಿರಲಿಲ್ಲ," ಎಂದು ಪಿಸಿಬಿ ಹೇಳಿಕೆಯ ಮೂಲಕ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications