Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾದ ಕೋಚ್ ಸ್ಥಾನಕ್ಕೆ ವಿಂಡೀಸ್ ದಿಗ್ಗಜನಿಂದ ಅರ್ಜಿǃ

ನವದೆಹಲಿ, ಜು 03: ಅನಿಲ್ ಕುಂಬ್ಳೆ ಅವರಿಂದ ತೆರವಾಗಿರುವ ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವೆಸ್ಟ್ ಇಂಡೀಸ್ ನ ದಿಗ್ಗಜ ಫಿಲ್ ಸಿಮನ್ಸ್ ಅರ್ಜಿ ಹಾಕಿದ್ದಾರೆ.

54ರ ಹರೆಯದ ಸಿಮನ್ಸ್ ಅವರು ಟೀಂ ಇಂಡಿಯಾ ಕೋಚ್ ಆಗಲು ಆಸಕ್ತಿ ಹೊಂದಿದ್ದು, ಇತ್ತೀಚೆಗೆ ಅರ್ಜಿ ಹಾಕಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಕೋಚಿಂಗ್ ನೀಡುವಲ್ಲಿ ಉತ್ತಮ ಅನುಭವ ಹೊಂದಿರುವ ಸಿಮನ್ಸ್ ಅವರ ಎಂಟ್ರಿಯಿಂದ ಟೀಂ ಇಂಡಿಯಾ ಕೋಚ್ ಆಯ್ಕೆ ರೇಸ್ ಕುತೂಹಲಕಾರಿಯಾಗಿದೆ.

Simmons


ಈ ನಡುವೆ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರು ಅಧಿಕೃತವಾಗಿ ಅರ್ಜಿ ಹಾಕಿದ್ದು, ಜುಲೈ 10ರಂದು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಎದುರು ಸಂದರ್ಶನಕ್ಕೆ ಆಯ್ಕೆಯಾಗುತ್ತಾರೆ ಎಂಬ ಸುದ್ದಿಯೂ ಇದೆ.

ವೆಸ್ಟ್‌ಇಂಡೀಸ್ ತಂಡಕ್ಕೆ ಎರಡು ಬಾರಿ ಕೋಚ್ ಆಗಿ ಆಯ್ಕೆಯಾಗಿದ್ದರು. ಸಿಮನ್ಸ್ ಮಾರ್ಗದರ್ಶನದಲ್ಲಿ ವಿಂಡೀಸ್ ತಂಡ ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸಿತ್ತು. ಇದಾದ ಬಳಿಕ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಜತೆ ಮನಸ್ತಾಪವಾಗಿ, ಕೋಚ್ ಹುದ್ದೆಯಿಂದ ಅವರನ್ನು ಕೆಳಗಿಳಿಸಲಾಗಿತ್ತು.

ಮುಖ್ಯ ಕೋಚ್ ಸ್ಥಾನಕ್ಕೆ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಲಾಲ್ ಚಂದ್ ರಜಪೂತ್, ದೊಡ್ಡ ಗಣೇಶ್, ರವಿಶಾಸ್ತ್ರಿ, ಟಾಮ್ ಮೂಡಿ, ರಿಚರ್ಡ್ ಪೈಬಸ್ ಅವರ ನಡುವೆ ಪೈಪೋಟಿ ಇದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+