ರೋಮ್ ರೋಮ್ ರೋಮಾಂಚನ ಎಂದ 'ಸಚಿನ್ನ'
ರೋಮ್, ಜೂ.30: ಟೀಂ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕುಟುಂಬದ ಜೊತೆಗೆ ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಅವರು ಇನ್ಸ್ಟಾ ಗ್ರಾಮ್ ಗೆ ಎಂಟ್ರಿ ಕೊಟ್ಟ ಮೇಲೆ ಸಕತ್ತಾಗಿ ಫೋಟೋಗಳನ್ನು ಹಾಕುತ್ತಿದ್ದಾರೆ.
42 ವರ್ಷ ವಯಸ್ಸಿನ ಸಚಿನ್ ಅವರು ತಮ್ಮ ಪತ್ನಿ ಅಂಜಲಿ, ಪುತ್ರಿ ಸಾರಾ ಜೊತೆಗೆ ರೋಮ್, ವ್ಯಾಟಿಕನ್ ಸಿಟಿ ಹಾಗೂ ಕ್ಯಾಪ್ರಿ ಪ್ರದೇಶಗಳನ್ನು ಕಂಡಿದ್ದಾರೆ. 2013ರಲ್ಲಿ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಸಚಿನ್ ಅವರು ಬಿಡುವಾದಾಗಲೆಲ್ಲಾ ಕುಟುಂಬದ ಜೊತೆಗೆ ವಿಹಾರಕ್ಕೆ ಹೋಗುತ್ತಿರುತ್ತಾರೆ.
ರೋಮಿನ ಪುರಾತನ ಆಪ್ತ ರಂಗಮಂದಿರ, ಕೊಲೊಸ್ಸೆಮ್ ಸೇರಿದಂತೆ ಅನೇಕ ಸ್ಮಾರಕಗಳ ಮುಂದೆ ನಿಂತು ಫೋಟೊ ಅಲ್ಲಲ್ಲ ಸೆಲ್ಫಿ ತೆಗೆದುಕೊಂಡಿರುವ ಸಚಿನ್ ಅವರು ಎಲ್ಲವನ್ನು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿದ್ದಾರೆ. ಫೇಸ್ ಬುಕ್ ನಲ್ಲಂತೂ ಸರಿ ಸುಮಾರು 5 ಲಕ್ಷಕ್ಕೂ ಅಧಿಕ ಲೈಕ್ಸ್, ಸಾವಿರಾರು ಕಾಮೆಂಟ್ಸ್ ಬಂದಿವೆ.

ಇಟಲಿಯಲ್ಲಿ ಸಚಿನ್ ತೆಂಡೂಲ್ಕರ್
ಇಟಲಿಯ ಕ್ಯಾಪ್ರಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.. ಎಲ್ಲಾ ಚಿತ್ರಗಳ ಕೃಪೆ ಸಚಿನ್ ಅವರ ಫೇಸ್ ಬುಕ್ ಪುಟ.

ವ್ಯಾಟಿಕನ್ ನಗರದಲ್ಲಿ ಸಚಿನ್ ದಂಪತಿ
ವ್ಯಾಟಿಕನ್ ನಗರದಲ್ಲಿ ಸಚಿನ್ ಹಾಗೂ ಅವರ ಪತ್ನಿ ಅಂಜಲಿ.

ವ್ಯಾಟಿಕನ್ ನಗರದಲ್ಲಿ ಸಚಿನ್
ವ್ಯಾಟಿಕನ್ ನಗರದಲ್ಲಿ ಕಟ್ಟಡ ಮುಂದೆ ಸಚಿನ್ ಅವರ ಸೆಲ್ಫಿಚಿತ್ರ

ಮ್ಯೂಸಿಕ್ ಪ್ರಿಯ ಸಚಿನ್ ಹಾಗೂ ಸಾರಾ
ಮ್ಯೂಸಿಕ್ ಪ್ರಿಯ ಸಚಿನ್ ಅವರು ಪುತ್ರಿ ಸಾರಾ ಜೊತೆ ಸೆಲ್ಫಿ

ಬೃಹತ್ ರಂಗಮಂದಿರ ಕಲೋಸಿಯಂ
ಗಿನ್ನಿಸ್ ರೆಕಾರ್ಡ್ ಸೇರಿರುವ ಪುರಾತನ ಬೃಹತ್ ಆಪ್ತ ರಂಗಮಂದಿರ ಕಲೋಸಿಯಂ ನಲ್ಲಿ ಸಚಿನ್

ನೀವೆ ನಿಜವಾದ ಗ್ಲಾಡಿಯೇಟರ್ ಎಂದ ಫ್ಯಾನ್ಸ್
ಈ ಚಿತ್ರ ನೋಡಿ ಗ್ಲಾಡಿಯೇಟರ್ ನೆನಪಿಸಿಕೊಂಡ ಅಭಿಮಾನಿಗಳು ನೀವು ನಿಜವಾದ ಗ್ಲಾಡಿಯೇಟರ್ ಎಂದು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

ಇಟಲಿ ಪ್ರವಾಸದ ಅನುಭವ ಹೇಗಿದೆ
ಇಟಲಿ ಪ್ರವಾಸದ ಅನುಭವ ಹೇಗಿದೆ ಎಂದು ಪ್ರಶ್ನಿಸಿದ ಅಭಿಮಾನಿಗಳು, ಫೋಟೋ ಸರಣಿಯಲ್ಲಿ ಮುಂದೆ ಯಾವ ಚಿತ್ರ ಬರಲಿದೆ ಎಂದು ಕೇಳಿದ್ದಾರೆ ಕೂಡಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications