ಕ್ರಿಕೆಟ್ ದೇವರ ಆತ್ಮಕಥೆ ಬಿಡುಗಡೆಗೆ ಯಾರೆಲ್ಲ ಬಂದಿದ್ದರು?
ಮುಂಬೈ, ನ.6 : ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಬುಧವಾರ ರಾತ್ರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಸಚಿನ್ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ಬಿಡುಗಡೆ ಸಮಾರಂಭದಲ್ಲಿ ಕ್ರಿಕೆಟ್ ದಿಗ್ಗಜರು ತಮ್ಮ ಅನುಭವ ಹಂಚಿಕೊಂಡರು. ಅಲ್ಲದೇ ಸುನೀಲ್ ಗಾವಸ್ಕರ್, ದಿಲೀಪ್ ವೆಂಗ್ ಸರ್ಕಾರ್, ರವಿಶಾಸ್ತ್ರೀ ಸಹ ತೆಂಡೂಲ್ಕರ್ ಆಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಬಗ್ಗೆ ಹೇಳಿದರು.[ಸಚಿನ್ ತೆಂಡೂಲ್ಕರ್ ಆತ್ಮಕಥೆ ಅಭಿಮಾನಿಗಳಿಗೆ ಅರ್ಪಣೆ]
ಸಚಿನ್ ಗುರು ರಮಾಕಾಂತ್ ಅಚ್ರೇಕರ್, ಪತ್ನಿ ಅಂಜಲಿ ಈ ಅನುಪಮ ಕ್ಷಣಕ್ಕೆ ಸಾಕ್ಷಿಯಾದರು. ತೆಂಡೂಲ್ಕರ್ ಆತ್ಮಕಥೆ ಬಿಡುಗಡೆ ಚಿತ್ರಗಳು ಇಲ್ಲಿವೆ...[ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ]

ಪುಸ್ತಕದ ಮುಖಪುಟ
ಸಚಿನ್ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ದ ಮುಖಪುಟ

ತಾಯಿಗೆ ಮೊದಲ ಪ್ರತಿ
ತಾಯಿ ರಜನಿಗೆ ಪುಸ್ತಕದ ಮೊದಲ ಪ್ರತಿ ನೀಡಿ ಆಶೀರ್ವಾದ ಪಡೆದ ಮಾಸ್ಟರ್.

ಪುಸ್ತಕ ಬಿಡುಗಡೆ ಕ್ಷಣ
ಕುತೂಹಲ ಕೆರಳಿಸಿದ್ದ ಪುಸ್ತಕ ಅಂತಿಮವಾಗಿ ಬಿಡುಗಡೆಯಾದ ಕ್ಷಣ.

ಗುರುವಿಗೆ ಎರಡನೇ ಪ್ರತಿ
ಸಚಿನ್ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರಿಗೆ ಪುಸ್ತಕದ 2 ನೇ ಪ್ರತಿ ಹಸ್ತಾಂತರ.

ಮಾಸ್ಟರ್ ಗಳ ಮಾತು
ಸುನೀಲ್ ಗಾವಸ್ಕರ್, ದಿಲೀಪ್ ವೆಂಗ್ ಸರ್ಕಾರ್, ರವಿಶಾಸ್ತ್ರೀ ಮತ್ತು ವಸು ಪರಂಜಪೆ ಸಚಿನ್ ಬಗ್ಗೆ ಮಾತನಾಡಿದರು.

ದಿಗ್ಗಜರ ಸಮಾಗಮ
ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್.

ಹೆಂಡತಿಯೊಂದಿಗೆ ಸಚಿನ್
ಪುಸ್ತಕ ಬಿಡುಗಡೆಗೂ ಮುನ್ನ ಹೆಂಡತಿ ಅಂಜಲಿಯೊಂದಿಗೆ ಸುಂದರ ಕ್ಷಣಗಳನ್ನು ಮೆಲಕು ಹಾಕಿದ ಸಚಿನ್.

ಸಹೋದರನ ಹಾಜರಿ
ಸಚಿನ್ ಸಹೋದರ ಅಜಿತ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications