PKL 2022: ಬೆಂಗಾಲ್ ವಾರಿಯರ್ಸ್ ವಿರುದ್ಧ ಅಬ್ಬರಿಸಿದ ಯು ಮುಂಬಾಗೆ ಗೆಲುವು

ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 47ನೇ ಪಂದ್ಯದಲ್ಲಿ ಯು ಮುಂಬಾ ತಂಡವು ಬೆಂಗಾಲ್ ವಾರಿಯರ್ಸ್ ವಿರುದ್ಧ 36-25 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿದೆ. ದಿನದ ಮೂರನೇ ಪಂದ್ಯದಲ್ಲಿ ಬೆಂಗಾಲ್ ವಿರುದ್ಧ ಪಾರುಪತ್ಯ ಮೆರೆಯುವ ಮೂಲಕ ಯು ಮುಂಬಾ ಅಬ್ಬರಿಸಿದೆ.
ಮೊದಲಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿರುವ ಯು ಮುಂಬಾ ತಂಡವು ರೈಡಿಂಗ್ ಮತ್ತು ಟ್ಯಾಕಲ್ ಪಾಯಿಂಟ್ಸ್ ಮೂಲಕ ಮಿಂಚಿದ್ದೇ ಹೆಚ್ಚು. ವಿರಾಮಕ್ಕೂ ಮುನ್ನು ಯು ಮುಂಬಾ 21-13 ಪಾಯಿಂಟ್ಸ್ ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು.
ದ್ವಿತಿಯಾರ್ಧದಲ್ಲೂ ಎದುರಾಳಿಗೆ ಯಾವುದೇ ಅವಕಾಶ ನೀಡದ ಸುರಿಂದರ್ ಸಿಂಗ್ ನಾಯಕತ್ವದ ಮುಂಬಾ ಟೀಂ 15-12 ಅಂತರದಲ್ಲಿ ದ್ವಿತಿಯಾರ್ಧದಕ್ಕೂ ಬೆಂಗಾಲ್ ವಿರುದ್ಧ ಪಾರುಪತ್ಯ ಮೆರೆಯಿತು. ಯು ಮುಂಬಾ ಗೆಲುವಿಗೆ ಪ್ರಮುಖ ಕಾರಣ 25ರಲ್ಲಿ 14 ಸಕ್ಸಸ್‌ಫುಲ್ ಟ್ಯಾಕಲ್‌ಗಳಾಗಿವೆ.
ಒಟ್ಟಾರೆ ಪಂದ್ಯದಲ್ಲಿ 36-25 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿದ ಯು ಮುಂಬಾ ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ ಗುಜರಾತ್ ತಂಡವನ್ನ ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿದೆ.
ಯು ಮುಂಬಾ ಪರ ಡಿಫೆಂಡರ್ ರಿಂಕು 8 ಪಾಯಿಂಟ್ಸ್, ಮೋಹಿತ್ 7, ನಾಯಕ ಸುರಿಂದರ್ ಸಿಂಗ್ 4 ಪಾಯಿಂಟ್ಸ್ ಪಡೆದರು. ಇನ್ನು ರೈಡಿಂಗ್‌ನಲ್ಲಿ ಮಿಂಚಿದ ಆಶಿಶ್ 8 ಪಾಯಿಂಟ್ಸ್ ಕಬಳಿಸಿದ್ರು. ಜೈ ಭಗವಾನ್ 5 ಪಾಯಿಂಟ್ಸ್ ತಮ್ಮದಾಗಿಸಿಕೊಂಡರು.
ಮತ್ತೊಂದೆಡೆ ಬೆಂಗಾಲ್ ವಾರಿಯರ್ಸ್ ಪರ ಶ್ರೀಕಾಂತ್ ಜಾಧವ್ 9 ಪಾಯಿಂಟ್ಸ್, ನಾಯಕ ಮಣಿಂದರ್ ಸಿಂಗ್ 6, ಆಲ್‌ರೌಂಡರ್ ಬಾಲಾಜಿ 4 ಪಾಯಿಂಟ್ಸ್ ಪಡೆದರು.
ಈ ಪಂದ್ಯ ಗೆಲ್ಲುವ ಮೂಲಕ ಯು ಮುಂಬಾ ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು ಮತ್ತು 3 ಸೋಲಿನೊಂದಿಗೆ 26 ಪಾಯಿಂಟ್ಸ್‌ನೊಂದಿಗೆ 5ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications