ಸಚಿನ್ ತೆಂಡೂಲ್ಕರ್ ಆತ್ಮಕಥೆ ಅಭಿಮಾನಿಗಳಿಗೆ ಅರ್ಪಣೆ
ಮುಂಬೈ, ನ.5: ಕ್ರಿಕೆಟ್ ಲೋಕದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ಬುಧವಾರ ಸಂಜೆ ಲೋಕಾರ್ಪಣೆಯಾಗಿದೆ. ಬಹುನಿರೀಕ್ಷಿತ ಪುಸ್ತಕದ ಮೊದಲ ಪ್ರತಿಯನ್ನು ತಮ್ಮ ತಾಯಿಗೆ ನೀಡಿದ ಸಚಿನ್ ಅವರು ತಮ್ಮ ಆತ್ಮಕಥೆಯನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.
28 ಅಧ್ಯಾಯಗಳುಳ್ಳ 496 ಪುಟಗಳ 'ಪ್ಲೇಯಿಂಗ್ ಇಟ್ ಮೈ ವೇ' ಪುಸ್ತಕ ಬಿಡುಗಡೆಗೂ ಮುನ್ನ ಭಾರಿ ಚರ್ಚೆಗೊಳಲ್ಪಟ್ಟಿತ್ತು. ಕೋಚ್ ಗ್ರೆಗ್ ಚಾಪೆಲ್ ಬಗ್ಗೆ, ವೆಸ್ಟ್ ಇಂಡೀಸ್ ಪ್ರವಾಸದ ನಂತರ ನಿವೃತ್ತಿ ಬಗ್ಗೆ, ಕ್ರಿಕೆಟ್ ಬಗ್ಗೆ ಪತ್ನಿ ಅಂಜಲಿಗಿದ್ದ ಅಭಿಪ್ರಾಯದ ಬಗ್ಗೆ ಸಚಿನ್ ಏನೆಲ್ಲ ಬರೆದಿರಬಹುದು ಎಂಬುದನ್ನು ಕುತೂಹಲದ ಕಣ್ಣುಗಳಿಂದ ಎಲ್ಲರೂ ನಿರೀಕ್ಷಿಸಿದ್ದರು. [ಗ್ರೆಗ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಎಂದ ಸಚಿನ್]
ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಾವು ಆತ್ಮಚರಿತ್ರೆ ಬರೆಯುತ್ತಿರುವುದಾಗಿ ಭಾರತರತ್ನ ಸಚಿನ್ ಹೇಳಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಆಡಿದ ನಂತರ ಕಳೆದ ವರ್ಷ ನವೆಂಬರ್ 17ರಂದು ಸಚಿನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ 200ನೇ ಟೆಸ್ಟ್ ಪಂದ್ಯವಾಡಿದ ಸಚಿನ್ ಅವರಿಗೆ ಭಾವಪೂರ್ಣ ಗುಡ್ ಬೈ ಹೇಳಲಾಗಿತ್ತು. [ಸಚಿನ್ ನಿವೃತ್ತಿ ಬಗ್ಗೆ ಟ್ವೀಟ್ಸ್ ಮಹಾಪೂರ]
ಹರ್ಷ ಬೋಗ್ಲೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನನ್ನನ್ನು ಕ್ರಿಕೆಟ್ ದೇವರೆಂದು ಅಭಿಮಾನಿಗಳು ಕರೆಯಬಹುದು. ಅದರೆ, ನನ್ನ ಬದುಕಿನಲ್ಲಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು ಅತ್ಯಂತ ಪ್ರಮುಖ ಪಾತ್ರವಹಿಸಿದೆ ಎಂದರು. [ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ]

ಕ್ರಿಕೆಟ್ ನಿವೃತ್ತಿ ನಂತರ ಏನು ಮಾಡುತ್ತಿದ್ದಾರೆ?
ಸಚಿನ್ ಅವರ ಸುದೀರ್ಘ ಕ್ರಿಕೆಟ್ ಪ್ರಯಣದ ನೋವು ನಲಿವಿನ ಕಥೆಯನ್ನು ಓದಲು ಅಭಿಮಾನಿಗಳು ಕಾತುರರಾಗಿದ್ದಾರೆ. ಸಚಿನ್ ಅವರು ಸದ್ಯಕ್ಕೆ ಫುಟ್ಬಾಲ್ ಲೀಗ್ ನಲ್ಲಿ ಕೊಚ್ಚಿ ತಂಡವನ್ನು ಪ್ರತಿನಿಧಿಸುತ್ತಿದ್ದು, ಕ್ರಿಕೆಟ್ ಅಲ್ಲದೆ ಇತರೆ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ.
ವರ್ಣರಂಜಿತ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು
ವರ್ಣರಂಜಿತ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟರ್ ಗಳಾದ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್, ರವಿಶಾಸ್ತ್ರಿ, ಸಮಕಾಲೀನರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮುಂತಾದವರು ಉಪಸ್ಥಿತರಿದ್ದರು.|
ಸಚಿನ್ ಜೊತೆಗಿನ ಒಡನಾಟದ ಮೆಲುಕು
ಸಚಿನ್ ಅವರ ಅಣ್ಣ ಅಜಿತ್, ಪತ್ನಿ ಅಂಜಲಿ, ಪುತ್ರಿ ಸಾರಾ ಅವರ ಜೊತೆಗೂಡಿ ಕಾರ್ಯಕ್ರಮದಲ್ಲಿದ್ದ ಸಚಿನ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಹರ್ಷ ಬೋಂಗ್ಲೆ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲರೂ ಸಚಿನ್ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ಅಣ್ಣ ಹಾಗೂ ಪತ್ನಿ ಜೊತೆ ಸಚಿನ್
ಅಣ್ಣ ಅಜಿತ್ ಹಾಗೂ ಪತ್ನಿ ಅಂಜಲಿ ಜೊತೆ ಸಚಿನ್ ಅವರು ಕ್ರಿಕೆಟ್ ಹಾಗೂ ಕುಟುಂಬದ ಬೆಂಬಲ, ಅಂಜಲಿ ಜೊತೆಗಿನ ಮೊದಲ ಭೇಟಿ ಬಗ್ಗೆ ಮಾತನಾಡಿದರು.
ಪುಸ್ತಕದ ಮೊದಲ ಪ್ರತಿ ತಾಯಿಗೆ ನೀಡಿದ ಸಚಿನ್
ಪುಸ್ತಕದ ಮೊದಲ ಪ್ರತಿ ತಾಯಿಗೆ ನೀಡಿದ ಸಚಿನ್ ಅವರು ಟ್ವೀಟ್ ಮಾಡಿರುವ ಚಿತ್ರ
ಪುಸ್ತಕ ಬಿಡುಗಡೆಗೂ ಮುನ್ನ ಪ್ರೋಮೋ
ಪುಸ್ತಕ ಬಿಡುಗಡೆಗೂ ಮುನ್ನ ಪ್ರೋಮೋ ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದ ಸಚಿನ್ ತೆಂಡೂಲ್ಕರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications