ಭಾರತ ವಿರುದ್ಧದ ಟಿ20ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್!

ಕಿಂಗ್ಸ್‌ಟೌನ್, ಜುಲೈ 23: ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಆಗಸ್ಟ್ 3ರಿಂದ ಟಿ20 ಸರಣಿಯನ್ನಾಡಲಿದ್ದು, ಸರಣಿಗೆ ಸಂಬಂಧಿಸಿ ವೆಸ್ಟ್ ಇಂಡೀಸ್ ಕ್ರಿಕೆಟ್, 14 ಜನರ ತಂಡ ಪ್ರಕಟಿಸಿದೆ. ಚುಟುಕು ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್ಮನ್‌ಗಳು, ಆಲ್ ರೌಂಡರ್‌ಗಳಿಂದಾಗಿ ತಂಡ ಸಾಕಷ್ಟು ಬಲಿಷ್ಠವೆನಿಸಿದೆ.
ವೆಸ್ಟ್ ಇಂಡೀಸ್ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳದಿದ್ದ ಆಲ್ ರೌಂಡರ್ ಕೀರನ್ ಪೊಲಾರ್ಡ್, ಸುನಿಲ್ ನರೈನ್ ಮತ್ತು ಆ್ಯಂಡ್ರೆ ರಸೆಲ್ ಕೂಡ ಕಾಣಿಸಿಕೊಂಡಿದ್ದಾರೆ. ಸೋಮವಾರ (ಜುಲೈ 22) ವೆಸ್ಟ್ ಇಂಡೀಸ್ ಪ್ರಕಟಿಸಿರುವ ಈ ತಂಡ ಟಿ20 ಆರಂಭಿಕ ಎರಡು ತಂಡಗಳಿಗಾಗಿ ಮಾತ್ರ. ಟಿ20 ಸರಣಿ ಒಟ್ಟು ಮೂರು ಪಂದ್ಯಗಳನ್ನು ಒಳಗೊಂಡಿದೆ.
ಟಿ20 ಸರಣಿ ಒಟ್ಟು ಮೂರು ಪಂದ್ಯಗಳನ್ನು ಒಳಗೊಂಡಿದೆ. ವಿಂಡೀಸ್ ಸರಣಿಗೆ ಸಂಬಂಧಿಸಿ ಭಾರತ ಜುಲೈ 21ರಂದು ತಂಡ ಪ್ರಕಟಿಸಿತ್ತು.

ಬ್ರಾತ್‌ವೇಟ್ ನಾಯಕ
ವಿಂಡೀಸ್ ಟಿ20 ತಂಡವನ್ನು ಕಾರ್ಲೋಸ್ ಬ್ರಾತ್‌ವೇಟ್ (ನಾಯಕ) ಮತ್ತು ಎಡಗೈ ಆರಂಭಿಕ ಬ್ಯಾಟ್ಸ್ಮನ್ ಜಾನ್ ಕ್ಯಾಂಪ್‌ಬೆಲ್ (ಉಪನಾಯಕ) ಮುನ್ನಡೆಸಲಿದ್ದಾರೆ. ಪ್ರಕಟಿತ ತಂಡದಲ್ಲಿ ಎಡಗೈ ಸ್ಪಿನ್ನರ್ ಖೇರಿ ಪಿಯರೆ ಕೂಡ ಸೇರಿಕೊಂಡಿದ್ದಾರೆ. ಪಂದ್ಯಗಳು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ಭಾರತೀಯ ಕಾಲಮಾನ 8 pmನಂತೆ ಆರಂಭಗೊಳ್ಳಲಿದೆ.

ಟಿ20 3 ಪಂದ್ಯಗಳಿಗೆ ಭಾರತ ತಂಡ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್, ನವದೀಪ್ ಸೈನಿ.

ಟಿ20 2 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ತಂಡ
ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮೈಯರ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್, ರೋವನ್ ಪೊವೆಲ್, ಕಾರ್ಲೋಸ್ ಬ್ರಾತ್‌ವೇಟ್ (ಸಿ), ಕೀಮೋ ಪೌಲ್, ಸುನಿಲ್ ನರೈನ್, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್, ಆಂಥೋನಿ ಬ್ರಾಂಬಲ್, ಆ್ಯಂಡ್ರೆ ರಸೆಲ್, ಖೇರಿ ಪಿಯರೆ.

ಟಿ20, ಏಕದಿನ, ಟೆಸ್ಟ್ ಪಂದ್ಯಗಳು
ವಿಶ್ವಕಪ್ ಬಳಿಕ ಮೊದಲ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತ, ಆತಿಥೇಯರ ವಿರುದ್ಧ 3 ಟಿ20 ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆಗಸ್ಟ್ 3ರಂದು ಟಿ2ಯಿಂದ ಆರಂಭಗೊಳ್ಳಲಿರುವ ಪಂದ್ಯಗಳು ಟೆಸ್ಟ್ ನೊಂದಿಗೆ ಕೊನೆಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications