For Quick Alerts
ALLOW NOTIFICATIONS  
For Daily Alerts
 

ರೈನಾಗೆ ಪೆವಿಲಿಯನ್‌ ದಾರಿ ತೋರಿದ ಸೂಪರ್‌ಮ್ಯಾನ್ ಪೊಲಾರ್ಡ್: ವಿಡಿಯೋ

Pollard pulls off stunning one-handed catch against Chennai Super Kings - Watch

ಮುಂಬೈ, ಏಪ್ರಿಲ್ 4: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಸಿಕ್ಸ್ ಚಚ್ಚುವುದರೊಂದಿಗೆ ಅದ್ಭುತ ಫೀಲ್ಡಿಂಗ್‌ಗೂ ಫೇಮಸ್. ಇದು ಬುಧವಾರ (ಏಪ್ರಿಲ್ 3) ನಡೆದ ಮುಂಬೈ ಇಂಡಿಯನ್ಸ್-ಚೆನ್ನೈ ನಡುವಿನ ಪಂದ್ಯದ ವೇಳೆ ಮತ್ತೊಮ್ಮೆ ಸಾಭೀತಾಯಿತು.

ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಇನ್ನಿಂಗ್ಸ್‌ ವೇಳೆ 5ನೇ ಓವರ್‌ ನಲ್ಲಿ (4.6 ಓವರ್) ಜೇಸನ್ ಬೆಹೆರೆನ್ಡಾಫ್ ಎಸೆತಕ್ಕೆ ಬ್ಯಾಟ್ ಬೀಸಿದ ರೈನಾ ಚೆಂಡನ್ನು ಸಿಕ್ಸ್‌ ಲೈನ್‌ನತ್ತ ಅಟ್ಟಿದ್ದರು. ಆದರೆ ಸೂಪರ್‌ ಮ್ಯಾನ್‌ನಂತೆ ಜಿಗಿದ ಪೊಲಾರ್ಡ್ ಒಂದೇ ಕೈಯಲ್ಲಿ ಚೆಂಡನ್ನು ಕ್ಯಾಚ್ ಮಾಡಿ ರೈನಾ ಅವರನ್ನೇ ಪೆವಿಲಿಯನ್‌ಗೆ ಅಟ್ಟಿದರು.

ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಸೂರ್ಯಕುಮಾರ್ ಯಾದವ್ 59, ಕೃನಾಲ್ ಪಾಂಡ್ಯ 42, ಪೊಲಾರ್ಡ್ 17, ಹಾರ್ದಿಕ್ ಪಾಂಡ್ಯ 25 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 170 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ 20 ಓವರ್‌ಗೆ 8 ವಿಕೆಟ್ ಕಳೆದು 133 ರನ್ ಗಳಿಸಿ 37 ರನ್‌ಗಳಿಂದ ಸೋಲೊಪ್ಪಿಕೊಂಡಿತು (ವಿಡಿಯೋ ಹಕ್ಕನ್ನು ಬಿಸಿಸಿಐ ಕಾದಿರಿಸಿದೆ. ವಿಡಿಯೋಗಾಗಿ ಮೇಲಿನ ಟ್ವಿಟರ್‌ನಲ್ಲಿರುವ ಬಿಸಿಸಿಐ ವಿಡಿಯೋ ಲಿಂಕ್ ಅನುಸರಿಸಿ).

Story first published: Thursday, April 4, 2019, 1:03 [IST]
Other articles published on Apr 4, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+