Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಗುಜರಾತ್ ಟೈಟಾನ್ಸ್ ರಿಟೆನ್ಷನ್‌ ಪಟ್ಟಿಯಲ್ಲಿ ಶುಭಮನ್ ಗಿಲ್ ಸೇರಿದಂತೆ ಪವರ್ ಹಿಟ್ಟರ್‌ಗಳಿಗೆ ಸ್ಥಾನ!

ಐಪಿಎಲ್ 2025ರ ಮೆಗಾ ಹರಾಜಿಗೆ ಗುಜರಾತ್ ಟೈಟಾನ್ಸ್ ತಂಡ ಸಂಪೂರ್ಣ ಸಿದ್ಧಗೊಂಡಿದೆ. ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದ ನಂತರ, ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಗುಜರಾತ್ ಟೈಟಾನ್ಸ್ ಶುಭಮನ್ ಗಿಲ್ ಮೇಲೆ ವಿಶ್ವಾಸ ಇಟ್ಟಿದೆ.

ಐಪಿಎಲ್ 2025ರ ಮೆಗಾ ಹರಾಜಿನ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಉಳಿಸಿಕೊಳ್ಳಲಿರುವ ಆಟಗಾರರಲ್ಲಿ ಮೊದಲ ಹೆಸರು ನಾಯಕ ಗಿಲ್ ಅವರದು. ಗಿಲ್ ಹೊರತಾಗಿ ಗುಜರಾತ್ ಟೈಟಾನ್ಸ್ ತಂಡ ಅಫ್ಘಾನಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಕೂಡ ಉಳಿಸಿಕೊಳ್ಳಲಿದೆ.

Power hitters including Shubman Gill who has been placed on Gujarat Titans retention list

ಐಪಿಎಲ್ ಮೂಲಗಳು ಪ್ರಕಾರ, ಗುಜರಾತ್ ತಂಡ ಸ್ಪಿನ್ನರ್ ರಶೀದ್ ಖಾನ್, ಎಡಗೈ ಬ್ಯಾಟರ್‌ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್‌ಮನ್ ಗಿಲ್ ಅವರನ್ನು ಉಳಿಸಿಕೊಳ್ಳಲು ತಯಾರಾಗಿದೆ. ಈ ಮೂವರು ಆಟಗಾರರು ಉಳಿಸಿಕೊಳ್ಳಲು ತಂಡದ ಮೊದಲ ಆಯ್ಕೆಯಾಗಿದ್ದಾರೆ. ತಂಡವು ಅನ್‌ಕ್ಯಾಪ್ಡ್ ಹಿಟ್ಟರ್‌ಗಳಾದ ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಅವರನ್ನು ಸಹ ಉಳಿಸಿಕೊಳ್ಳಲಿದೆ.

ಗುಜರಾತ್ ಟೈಟಾನ್ಸ್ ಪರ ರಾಹುಲ್ ತೆವಾಟಿಯಾ ತಮ್ಮ ಖದರ್ ತೋರಿದ್ದಾರೆ. ಏಕಾಂಗಿಯಾಗಿ ಬ್ಯಾಟಿಂಗ್ ಮಾಡುವ ಮೂಲಕ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲಿಯೂ ತಂಡಕ್ಕೆ ಅವಶ್ಯಕತೆಯಿದ್ದಾಗ ವಿಕೆಟ್‌ಗಳನ್ನು ತೆಗೆದುಕೊಂಡಿದ್ದಾರೆ. ಶಾರುಖ್ ಖಾನ್ ಸಹಾ ಐಪಿಎಲ್‌ನಲ್ಲಿ ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

ಇತ್ತೀಚೆಗೆ ಶುಭ್‌ಮಾನ್ ಗಿಲ್ ಅವರನ್ನು ಭಾರತ ಏಕದಿನ ಮತ್ತು ಟಿ20 ತಂಡಗಳಿಗೆ ಉಪನಾಯಕನನ್ನಾಗಿ ಮಾಡಲಾಗಿದೆ. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಅನುಪಸ್ಥಿತಿಯಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದಾರೆ. ಈಗ ಐಪಿಎಲ್ 2022 ವಿಜೇತ ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಗಿಲ್ ಮೇಲೆ ವಿಶ್ವಾಸ ಇಟ್ಟಿದೆ. ಐಪಿಎಲ್ 2024ರಲ್ಲಿ ಗಿಲ್ ನಾಯಕತ್ವದಲ್ಲಿ ಟೈಟಾನ್ಸ್ ತಂಡವು 8ನೇ ಸ್ಥಾನ ಪಡೆದಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಐಪಿಎಲ್ ಆವೃತ್ತಿ 2022 ರಲ್ಲಿ ಚಾಂಪಿಯನ್ ಆಗಿತ್ತು. ಪ್ರಶಸ್ತಿಯನ್ನು ಗೆದ್ದು ನಂತರದ ಆವೃತ್ತಿಯಲ್ಲೂ ಫೈನಲ್ ತಲುಪಿದ ಗುಜರಾತ್
ರನ್ನರ್ ಅಪ್ ಆಗಿತ್ತು. ಹಾರ್ದಿಕ್ ಪಾಂಡ್ಯ ತಂಡವನ್ನು ಎರಡು ಬಾರಿ ಫೈನಲ್‌ಗೆ ಕರೆದೊಯ್ದಿದ್ದರು. ಆದರೆ ಕಳೆದ ಬಾರಿ ಗಿಲ್ ನಾಯಕತ್ವದಲ್ಲಿ ಗುಜರಾತ್ ತಂಡವು 8 ನೇ ಸ್ಥಾನದಲ್ಲಿ ಉಳಿಯಿತು.

Story first published: Wednesday, October 30, 2024, 15:33 [IST]
Other articles published on Oct 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+