ಪ್ರಸಿದ್ಧ್ ಕೃಷ್ಣ, ಅಮಿತ್ ಮಿಶ್ರಾ ಕೋವಿಡ್-19ನಿಂದ ಚೇತರಿಕೆ

ನವದೆಹಲಿ: ಟೀಮ್ ಇಂಡಿಯಾದ ಯುವ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಕೋವಿಡ್-19ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಮಿಶ್ರಾಗೆ ಸೋಂಕು ತಗುಲಿತ್ತು. ಐಪಿಎಲ್ ಅಮಾನತಾಗಿ ಕೆಲ ದಿನಗಳಲ್ಲಿ ಪ್ರಸಿದ್ಧ್‌ಗೂ ಕೋವಿಡ್ ಪಾಸಿಟಿವ್ ಬಂದಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿರುವ ಪ್ರಸಿದ್ಧ್ ಕೃಷ್ಣ ಸೋಂಕಿಗೀಡಾಗಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದ ಅಮಿತ್ ಮಿಶ್ರಾಗೂ ಸೋಂಕು ತಗುಲಿತ್ತು. ಪ್ರಸಿದ್ಧ್‌ಗೆ ಕೋವಿಡ್ ನೆಗೆಟಿವ್ ಬಂದಿರುವುದರಿಂದ ಅವರಿನ್ನು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬಹುದಾಗಿದೆ.
ತನಗೆ ಕೋವಿಡ್ ನೆಗೆಟಿವ್ ಬಂದಿರುವ ಸಂಗತಿಯನ್ನು ಮಿಶ್ರಾ ಟ್ವೀಟ್ ಮೂಲಕ ತಿಳಿಸಿದ್ದಾರೆ. 'ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಿಯಲ್ ಹೀರೋಗಳಿವರು (ಆರೋಗ್ಯ ಸಿಬ್ಬಂದಿ). ಫ್ರಂಟ್‌ಲೈನ್ ವರ್ಕರ್‌ಗಳಿವರು. ನನ್ನ ಚೇತರಿಕೆಗೆ ಇವರೆಲ್ಲರೂ ಕಾರಣಕರ್ತರು. ಇವರ ಕೆಲಸವನ್ನು ನಾನು ಅಭಿನಂದಿಸುತ್ತೇನೆ' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿರುವ ಮಿಶ್ರಾ, ವೈದ್ಯಾಧಿಕಾರಿಗಳ ಫೋಟೋ ಹಾಕಿಕೊಂಡಿದ್ದಾರೆ.
25ರ ಹರೆಯದ ಪ್ರಸಿದ್ಧ್ ಕೃಷ್ಣ, ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತೀಯ ತಂಡದಲ್ಲಿ ಮೀಸಲು ಆಟಗಾರರಾಗಿದ್ದಾರೆ. ಜೂನ್ 2ಕ್ಕೆ ಇಂಗ್ಲೆಂಡ್ ತಲುಪಲಿರುವ ಭಾರತ ತಂಡ ಅಲ್ಲಿ 10 ದಿನಗಳ ಕ್ವಾರಂಟೈನ್ ಬಳಿಕ ಜೂನ್ 18-22ರ ವರೆಗೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದೆ. ಬಳಿಕ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications