ಪದಾರ್ಪಣಾ ಪಂದ್ಯದಲ್ಲಿ ಪ್ರಸಿದ್ಧ್ ಮಿಂಚು, ಭಾರತೀಯ ಬೌಲರ್‌ಗಳ ಪೈಕಿ ದಾಖಲೆ ಬರೆದ ಕನ್ನಡಿಗ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿದ ಪ್ರಸಿದ್ಧ್ ಕೃಷ್ಣ ಮಿಂಚು ಹರಿಸಿದ್ದಾರೆ. ಇಂಗ್ಲೆಂಡ್‌ನ ನಾಲ್ಕು ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ ಪಂದ್ಯದ ಟಾಪ್ ವಿಕೆಟ್ ಟೇಕರ್ ಎನಿಸಿದ್ದಾರೆ. ಇಷ್ಟು ಮಾತ್ರವಲ್ಲ ಈ ಕನ್ನಡಿದ ಭಾರತದ ಪರವಾಗಿ ಚೊಚ್ಚಲ ಪಂದ್ಯದಲ್ಲಿ ದಾಖಲೆಯನ್ನು ಬರೆದಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನೀಡಿದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರಸಿದ್ಧ ಕೃಷ್ಣ ಭಾರತೀಯ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದರು. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೇ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿದ ಪ್ರಸಿದ್ಧ್ ಕೃಷ್ಣ ಸ್ಮರಣೀಯ ಪದಾರ್ಪಣೆ ಮಾಡಿದ್ದಾರೆ.

ಮೊದಲ ಸ್ಪೆಲ್‌ನಲ್ಲಿ ಪ್ರಸಿದ್ಧ್‌ಗೆ ಆಘಾತ
ಪ್ರಸಿದ್ಧ್ ಕೃಷ್ಣ ಭುವನೇಶ್ವರ್ ಕುಮಾರ್ ಅವರೊಂದಿಗೆ ಹೊಸ ಚೆಂಡನ್ನು ಹಂಚಿಕೊಂಡು ಬೌಲಿಂಗ್ ದಾಳಿಗೆ ಇಳಿದರು. ಆದರೆ ತನ್ನ ಮೂರನೇ ಓವರ್‌ನಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ ಯುವ ವೇಗಿಯ ಮೇಲೆ ಅಕ್ಷರಶಃ ದಾಳಿ ನಡೆಸಿದರು. ಈ ಒಂದೇ ಓವರ್‌ನಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದ ಬೈರ್‌ಸ್ಟೋವ್ ಅಬ್ಬರಿಸಿದರು. ಭಾರತೀಯ ಯುವ ವೇಗಿಯ ಆತ್ಮವಿಶ್ವಾಸ ಕುಸಿಯುವಂತೆ ಮಾಡುವ ಪ್ರಯತ್ನದಲ್ಲಿ ಆ ಹಂತದಲ್ಲಿ ಯಶಸ್ಸನ್ನೂ ಸಾಧಿಸಿದರು ಇಂಗ್ಲೆಂಡ್ ಆರಂಭಿಕ ಆಟಗಾರ.

ಇಂಗ್ಲೆಂಡ್ ಆರಂಭಿಕರ ದಾಳಿ
ಭಾರತೀಯ ಬೌಲರ್‌ಗಳ ಮೇಲೆ ಇಂಗ್ಲೆಂಡ್ ಆರಂಭಿಕರು ಸತತವಾಗಿ ದಾಳಿಯನ್ನು ನಡೆಸುತ್ತಾ ವೇಗವಾಗಿ ರನ್ ಗಳಿಸುತ್ತಾ ಸಾಗಿದ್ದರು. 14ನೇ ಓವರ್‌ಗೆ ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 130ರ ಗಡಿ ದಾಟಿತ್ತು. ಹೀಗೆ ಭಾರತದ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವ ವಿಶ್ವಾಸವನ್ನು ಇಂಗ್ಲೆಂಡ್‌ಗೆ ಮೂಡಿಸಿತ್ತು ಈ ಜೋಡಿ.

ತಿರುಗಿ ಬಿದ್ದ ಕನ್ನಡಿಗ ವೇಗಿ
ಮೊದಲ ಸ್ಪೆಲ್‌ನಲ್ಲಿ ಸಾಕಷ್ಟು ರನ್ ನೀಡಿದ ನಂತರ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಪಿಲ್‌ಗೆ ಪ್ರಸಿದ್ಧ್ ಕೃಷ್ಣ ಅವರನ್ನು 15ನೇ ಓವರ್‌ಗೆ ಮತ್ತೆ ದಾಳಿಗೆ ಇಳಿಸುತ್ತಾರೆ. ಈ ಸಂದರ್ಭದಲ್ಲಿ ಕೃಷ್ಣ ಭಾರತಕ್ಕೆ ಅತ್ಯಂತ ಅಗತ್ಯವಾಗಿದ್ದ ಯಶಸ್ಸನ್ನು ತಂದುಕೊಟ್ಟರು. ಜೇಸನ್ ರಾಯ್ ಅವರನ್ನು ಕ್ಯಾಚ್ ನೀಡಿ ನಿರ್ಗಮಿಸುವಂತೆ ಮಾಡಿದರು. ಆ ವಿಕೆಟ್ ಇಡೀ ಪಂದ್ಯವನ್ನು ಭಾರತದತ್ತ ವಾಲುವಂತೆ ಮಾಡಲು ಕಾರಣವಾಗಿತ್ತು.

ಭರ್ಜರಿ ಬೇಟೆಯಾಡಿದ ಪ್ರಸಿದ್ಧ್
ಬಳಿಕ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತನ್ನ ಮುಂದಿನ ಓವರ್‌ನಲ್ಲಿಯೇ ಫೆವಿಲಿಯನ್ ಸೇರುವಂತೆ ಮಾಡಿದರು. ನಂತರ ಸ್ಯಾನ್ ಬಿಲ್ಲಿಂಗ್ಸ್ ಹಾಗೂ ಟಾಮ್ ಕರ್ರನ್ ಕೂಡ ಪ್ರಸಿದ್ಧ್ ಕೃಷ್ಣಗೆ ಬಲಿಯಾದರು. ಈ ಮೂಲಕ ಪದಾರ್ಪಣಾ ಪಂದ್ಯದಲ್ಲಿಯೇ 4 ವಿಕೆಟ್ ಕಿತ್ತು ಮಿಂಚಿದರು ಕನ್ನಡಿಗ ವೇಗಿ.

ಚೊಚ್ಚಲ ಪಂದ್ಯದಲ್ಲಿ ದಾಖಲೆ ಬರೆದ ಪ್ರಸಿದ್ಧ್ ಕೃಷ್ಣ
ಭಾರತದ ಪರವಾಗಿ ಏಕದಿನ ಪಂದ್ಯಗಳಲ್ಲಿ ಪದಾರ್ಪಣಾ ಪಂದ್ಯದಲ್ಲಿ ಅತ್ಯಂತ ಹೆಚ್ಚು ವಿಕೆಟ್ ಕಿತ್ತ ಬೌಲರ್ ಎಂಬ ದಾಖಲೆಗೆ ಪ್ರಸಿದ್ಧ್ ಕೃಷ್ಣ ಪಾತ್ರರಾಗಿದ್ದಾರೆ. ಣಾರತೀಯ ಆಟಗಾರನೋರ್ವ ಏಕದಿನ ಪದಾರ್ಪಣಾ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತ ಪ್ರಪ್ರಥಮ ದೃಷ್ಟಾಂತ ಇದಾಗಿದೆ. 8.1 ಓವರ್ ಎಸೆದ ಪ್ರಸಿದ್ಧ್ ಒಂದು ಮೇಡನ್ ಓವರ್ ಮಾಡಿದ್ದು 54 ರನ್ ನೀಡಿ 4 ವಿಕೆಟ್ ಕಿತ್ತಿದ್ದಾರೆ. ಇದು ಪದಾರ್ಪಣಾ ಪಂದ್ಯದಲಲ್ಇ ಭಾರತೀಯ ಭೌಲರ್ ಮಾಡಿದ ಅತ್ಯುತ್ಕೃಷ್ಟ ಬೌಲಿಂಗ್ ಸ್ಪೆಲ್ ಎನಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications