ಟೀಮ್ ಇಂಡಿಯಾದ ಪರ ಈಗಾಗಲೇ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಪ್ರಸಿದ್ಧ ಕೃಷ್ಣಾ, ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಅಪ್‌ಡೇಟ್ ವರ್ಷನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಬಿಗುವಿನ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹ ಸ್ವಪ್ನರಾಗುತ್ತಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್‌ಗಳಿಗೆ ಖೆಡ್ಡಾ ತೋಡಿ ಅಬ್ಬರಿಸಿದರು. ಈ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು.
ಈ ಬಾರಿಯ ಐಪಿಎಲ್‌ನಲ್ಲಿ ಅಬ್ಬರದ ಪ್ರದರ್ಶನವನ್ನು ನೀಡುವ ಮೂಲಕ ಟೀಮ್ ಇಂಡಿಯಾ ಸಖತ್ ಕಂಬ್ಯಾಕ್ ಮಾಡುವ ಕನಸು ಕಾಣುತ್ತಿರುವ ಪ್ರಸಿದ್ಧ ಕೃಷ್ಣಾ, ಇದೇ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ತಮ್ಮ ಲೈನ್ ಹಾಗೂ ಲೆಂಥ್ ಮೇಲೆ ಕಂಟ್ರೋಲ್ ಇಟ್ಟುಕೊಂಡಿರುವ ಪ್ರಸಿದ್ಧ ಪಂದ್ಯದಿಂದ ಪಂದ್ಯಕ್ಕೆ ಪಕ್ವವಾಗುತ್ತಾ ಸಾಗುತ್ತಿದ್ದಾರೆ. ಇವರು ರಾಜಸ್ಥಾನ ವಿರುದ್ಧದ ಪಂದ್ಯದಲ್ಲೂ ರನ್‌ಗಳನ್ನು ನೀಡದೆ ಕಾಡಿದರು.

ಸಾಮಾನ್ಯವಾಗಿ ವೇಗದ ಬೌಲರ್ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುವುದನ್ನು ನೋಡಿರುತ್ತೇವೆ. ಆದರೆ ಈ ಐಪಿಎಲ್‌ನಲ್ಲಿ ಪ್ರಸಿದ್ಧ ಕೃಷ್ಣ ಮಿಡ್ಲ್ ಓವರ್‌ಗಳಲ್ಲಿ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟರ್‌ಗಳಿಗೆ ಕಾಡಿದದೆ. ಈ ಅವಧಿಯಲ್ಲಿ ರನ್‌ಗಳಿಗೆ ಕಡಿವಾಣ ಹಾಕುವ ಪ್ರಸಿದ್ಧ, ತಮ್ಮ ಶಿಸ್ತು ಬದ್ಧ ದಾಳಿಯಿಂದ ಬ್ಯಾಟರ್‌ಗಳಿಗೆ ಪೆವೆಲಿಯನ್ ಹಾದಿ ತೋರಿಸಿದ್ದಾರೆ.
ಪ್ರಸಿದ್ಧ ಕೃಷ್ಣಾ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆದು ಅಬ್ಬರಿಸಿದರು. ಈ ವೇಳೆ ಪ್ರಸಿದ್ಧ ಅವರನ್ನು ಸಖತ್ ಸೆಟಪ್ ಮಾಡಿದ್ದರು. ಪ್ರಸಿದ್ಧ ಎಕ್ಸ್‌ಟ್ರಾ ಬೌನ್ಸ್ ಇರುವ ಎಸೆತವನ್ನು ಶಾರ್ಟ್ ಥರ್ಡ್ ಮೇಲಿನಿಂದ ಬೌಂಡರಿ ಬಾರಿಸುವ ಯೋಚನೆಯನ್ನು ಹೊಂದಿದ್ದ ಸಂಜು ಸ್ಯಾಮ್ಸನ್‌ಗೆ ಶಾಕ್ ಕಾದಿತ್ತು. 30 ಯಾರ್ಡ್ ಸರ್ಕಲ್‌ನ ಶಾರ್ಟ್ ಥರ್ಡ್ ನಲ್ಲಿ ನಿಲ್ಲಿಸಿಕೊಂಡಿದ್ದ ಸಾಯಿ ಕಿಶೋರ್ ಸಂಜು ಅವರ ಕ್ಯಾಚ್ ಪಡೆದು ಬೀಗಿದರು. ಇದು ರಾಜಸ್ಥಾನ ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿತು.
ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಜೋಫ್ರಾ ಆರ್ಚರ್ ಅವರಿಗೂ ಪ್ರಸಿದ್ಧ ಖೆಡ್ಡಾ ತೋಡಿದರು. ಇವರು ಎಸೆದ ಬ್ಯಾಕ್ ಆಫ್ ಲೆಂಥ್ ಡಿಲೇವರಿಯನ್ನು ಎದುರಿಸುವಲ್ಲಿ ಆರ್ಚರ್ ವಿಫಲರಾಗಿ ಮಿಡ್ ಆಫ್ ನಲ್ಲಿದ್ದ ಶುಭಮನ್ ಗಿಲ್‌ಗೆ ಕ್ಯಾಚ್ ನೀಡಿದರು.
ಗುಜರಾತ್ ತಂಡಕ್ಕೆ ಅಪಾಯವಾಗಿ ಕಾಣುತ್ತಿದ್ದ ಶ್ರಿಮ್ರೋನ್ ಹೆಟ್ಮೆಯರ್ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದ್ದು, ಪ್ರಸಿದ್ಧ ಕೃಷ್ಣ. ರನ್ ರೇಟ್ ಏರುತ್ತಲೇ ಇತ್ತು. ಈ ಒತ್ತಡವನ್ನು ಹೋಗಲಾಡಿಸಲು ಶಿಮ್ರೋನ್ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಸಾಯಿ ಕಿಶೋರ್‌ಗೆ ಕ್ಯಾಚ್ ನೀಡಿದರು.
ಪ್ರಸಿದ್ಧ ರಾಜಸ್ಥಾನ ವಿರುದ್ಧ 4 ಓವರ್‌ಗಳ ಬಿಗುವಿನ ಸ್ಪೇಲ್‌ನಲ್ಲಿ 12 ಡಾಟ್ ಬೌಲ್ ಎಸೆದಿದ್ದು, 24 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.