Prasidh Krishna: ಗುಜರಾತ್‌ಗೆ ಮಿಡ್ಲ್ ಒವರ್‌ಗಳಲ್ಲಿ ಆಧಾರವಾದ ಕರ್ನಾಟದ ವೇಗಿ ಪ್ರಸಿದ್ಧ: ಸೂರ್ಯ ಹೆಲ್ಮೆಟ್‌ಗೆ ಬಿದ್ದ ಚೆಂಡು
ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ಅಮೊಘ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಟೈಟನ್ಸ್ ಗೆಲುವಿನಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಕೊಡುಗೆ ಅಪಾರ. ಇವರು ತಮ್ಮ ಬಿಗುವಿನ ದಾಳಿಯ ಮೂಲಕ ಗಮನ ಸೆಳೆದು ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಲ್ಲದೆ ಗುಜರಾತ್ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲು ಗೆಲುವಿನ ನಗೆ ಬೀರಲು ಕಾರಣರಾದರು. ಇವರ ಬಿಗುವಿನ ದಾಳಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು.
ಗುಜರಾತ್ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಬೆರೊಬ್ಬ ಬ್ಯಾಟರ್ ಉತ್ತಮ ಸಾಥ್ ನೀಡಲಿಲ್ಲ. ಈ ಹಂತದಲ್ಲಿ ಬಿಗುವಿನ ದಾಳಿ ನಡೆಸಿದ ಪ್ರಸಿದ್ಧ ಕೃಷ್ಣ ಅಬ್ಬರಿಸಿದರು.

ಸಾಮಾನ್ಯವಾಗಿ ಪ್ರಸಿದ್ಧ ಕೃಷ್ಣ ಹೊಸ ಚೆಂಡಿನೊಂದಿಗೆ ಬೌಲಿಂಗ್ ನಡೆಸುವುದನ್ನು ಕಾಣುತ್ತೇವೆ. ಆದರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಪ್ರಸಿದ್ಧ 12ನೇ ಓವರ್‌ನಲ್ಲಿ ಬೌಲಿಂಗ್ ನಡೆಸಿದರು. ಈ ವೇಳೆ ಬಿಗುವಿನ ದಾಳಿ ನಡೆಸಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಮೊದಲ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತಿದ್ದ ಪ್ರಸಿದ್ಧ ಅಬ್ಬರಿಸಿದರು. ಈ ಪಂದ್ಯದಲ್ಲಿ ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ನಡುವೆ ಒಳ್ಳೆಯ ಜೊತೆಯಾಟ ನಡೆಯುತಿತ್ತು. ಇದನ್ನು ಬೇರ್ಪಡಿಸುವಲ್ಲಿ ಪ್ರಸಿದ್ಧ ಸಫಲರಾದರು.
ಪ್ರಸಿದ್ಧ ಬಿಗುವಿನ ದಾಳಿ
ಆಫ್ ಸ್ಟಂಪ್ ಆಚೆ ಇದ್ದ ಚೆಂಡನ್ನು ಕೆಣಕಿದ ತಿಲಕ್ ವರ್ಮಾ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು. ಆದರೆ ಅದೇ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡ್ತಾ ಇದ್ದ ರಾಹುಲ್ ತೆವಾಟಿಯಾ ಹಿಡಿದ ಅದ್ಭುತ ಕ್ಯಾಚ್‌ಗೆ ಇವರು ಬಲಿಯಾದರು. ಪರಿಣಾಮ ಈ ಜೊತೆಯಾಟವನ್ನು ಮುರಿಯುವಲ್ಲಿ ಪ್ರಸಿದ್ಧ ಸಫಲರಾದರು.

ನಂತರ ಸತತ ನಾಲ್ಕು ಓವರ್‌ಗಳನ್ನು ಬೌಲ್ ಮಾಡಿದ ಪ್ರಸಿದ್ಧ ರನ್‌ಗಳನ್ನು ನೀಡಲೇ ಇಲ್ಲ. ಇವರು ತಮ್ಮ ಕೋಟಾದಲ್ಲಿ ಕೇವಲ 2 ಬೌಂಡರಿ ನೀಡಿದರು. ಅಲ್ಲದೆ 14 ಡಾಟ್ ಬೌಲ್‌ಗಳನ್ನು ಎಸೆದು ಮಿಂಚಿದರು. ಇದೇ ವೇಳೆ ಪ್ರಸಿದ್ಧ ಸೂರ್ಯಕುಮಾರ್‌ಗೆ ಒಂದು ಬೌನ್ಸರ್ ಎಸೆದರು ಪರಿಣಾಮ ಅವರಿಗೆ ಏಟಾಯಿತು.
ಸೂರ್ಯಕುಮಾರ್ ಯಾದವ್ ಮುಂದೆ ರನ್ ವೇಗವನ್ನು ಸರಿದೂಗಿಸುವ ಭರಾಟೆಯಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದರು. ಈ ವೇಳೆ ಪ್ರಸಿದ್ಧ ಆಫ್ ಸ್ಟಂಪ್ ಆಚೆಗೆ ಎಸೆದ ಚೆಂಡನ್ನು ಬಿಗ್ ಹಿಟ್ ಬಾರಿಸಲು ಹೋಗಿ ಗಿಲ್‌ಗೆ ಕ್ಯಾಚ್ ನೀಡಿದರು.
ಗುಜರಾತ್ 18ನೇ ಆವೃತ್ತಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು. ಈ ಪಂದ್ಯದಲ್ಲಿ ಪ್ರಸಿದ್ಧ 4 ಓವರ್ ಬೌಲ್ ಮಾಡಿ 4.50 ಎಕನಾಮಿಯಲ್ಲಿ 18 ರನ್ ನೀಡಿ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications