For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿ: ಇಂಗ್ಲೆಂಡ್-ಬಾಂಗ್ಲಾದೇಶ ನಡುವೆ ಉದ್ಘಾಟನಾ ಪಂದ್ಯ

ಲಂಡನ್‌, ಮೇ 31 : ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ (ಗುರುವಾರ) ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ಸೆಣಸಲಿವೆ.

ಜೂನ್ 01ರಂದು ಮಧ್ಯಾಹ್ನ 3ಕ್ಕೆ ಲಂಡನ್ ನಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯ ಸೋಲು ಕಂಡಿರುವ ಬಾಂಗ್ಲಾದೇಶ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ತವಕದಲ್ಲಿದೆ.[ಚಾಂಪಿಯನ್ಸ್ ಟ್ರೋಫಿ 2017: ಟೀಂ ಇಂಡಿಯಾ ಪಂದ್ಯಗಳಿಗೆ ಫುಲ್ ಗೈಡ್]

Preview: Champions Trophy 2017: Match 1: England Vs Bangladesh on June 1

ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನಪ್ ಹೊಂದಿರುವ ಇಂಗ್ಲೆಂಡ್ ತವರು ಅಂಗಳದಲ್ಲಿ ಗೆಲ್ಲುವ ಫೆವರೆಟ್ ತಂಡವಾಗಿದೆ. ಇನ್ನು ಬಾಂಗ್ಲಾದೇಶ ತಂಡವೂ ಸಹ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಒಳಗೊಂಡಿದ್ದು, ಸಮಯಕ್ಕೆ ತಕ್ಕಂತೆ ಪ್ರದರ್ಶನ ನೀಡಿದರೆ ಇಂಗ್ಲೆಂಡ್ ಗೆ ಕಂಟಕವಾಗಬಹುದು.

ಆಲ್ ರೌಂಡರ್ ಗಳಾದ ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ಹೋಕ್ಸ್ ಉತ್ತಮ ಫಾರ್ಮ್ ನಲ್ಲಿರುವುದು ಹಾಗೂ ತವರು ನೆಲ ಇಂಗ್ಲೆಂಡ್ ಗೆ ಪ್ಲಸ್ ಪಾಯಿಂಟ್. ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಪೂರ್ವಭಾವಿಯಾಗಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 2-0 ಅಂತರದಿಂದ ಸರಣಿ ಜಯಿಸಿತ್ತು.

ಒಟ್ಟಾರೆ ಉತ್ತಮ ಲಯದಲ್ಲಿರುವ ಇಂಗ್ಲೆಂಡ್ ಆಂಭಿಕ ಪಂದ್ಯದಲ್ಲಿ ಗೆಲ್ಲುವ ತವಕದಲ್ಲಿದೆ.
ತಂಡಗಳು:
England: Eoin Morgan (captain), Moeen Ali, Jonny Bairstow, Jake Ball, Sam Billings, Jos Buttler, Alex Hales, Liam Plunkett, Adil Rashid, Joe Root, Jason Roy, Ben Stokes, David Willey, Chris Woakes, Mark Wood.

Bangladesh: Mashrafe Mortaza (captain), Tamim Iqbal, Soumya Sarkar, Imrul Kayes, Mushfiqur Rahim (wicketkeeper), Shakib Al Hasan, Mahmudullah, Sabbir Rahman, Mosaddek Hossain, Mehedi Hasan, Sunzamul Islam, Mustafizur Rahman, Taskin Ahmed, Rubel Hossain, Shafiul Islam.

Match starts 3 PM IST - LIVE on Star Sports network.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+