Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2011ರ ವಿಶ್ವಕಪ್‌ನಲ್ಲಿ ಪೃಥ್ವಿ ಶಾ ಹೇಗಿದ್ರು ಗೊತ್ತಾ? ಶಾ, ಅರ್ಜುನ್ ತೆಂಡೂಲ್ಕರ್ ಫೋಟೋ ವೈರಲ್

prithvi shah with arjun tendulkar photo viral

ಟೀಮ್ ಇಂಡಿಯಾದ ಯುವ ಪ್ರತಿಭೆ ಪೃಥ್ವಿ ಶಾ ಭವಿಷ್ಯದ ಭರವಸೆಯ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಸಿಕ್ಕ ಅವಕಾಶವನ್ನು ಪೃಥ್ವಿ ಶಾ ಅತ್ಯುತ್ತಮವಾಗಿ ಬಳಸಿಕೊಂಡು ಮಿಂಚುತ್ತಿದ್ದಾರೆ. ದೇಸಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿರುವ ಶಾ ಟೀಮ್ ಇಂಡಿಯಾದಲ್ಲೂ ಮಿಂಚಿದ್ದಾರೆ.

ಸದ್ಯ ಯಾವುದೇ ಟೂರ್ನಿಗಳು ನಡೆಯುತ್ತಿಲ್ಲವಾದರು ಸುಮಾರು ದಶಕದ ಹಿಂದಿನ ಫೃಥ್ವಿ ಶಾ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಪುತ್ರ ಕೂಡ ಇದ್ದಾರೆ.

ಅದು 2011ರ ವಿಶ್ವಕಪ್‌ನ ಫೈನಲ್ ಪಂದ್ಯ. ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಎನಿಸಿಕೊಂಡಿತ್ತು. ಗುರುವಾರ ಈ ಸಂಭ್ರಮದ ಕ್ಷಣಕ್ಕೆ 9 ವರ್ಷ ತುಂಬಿತ್ತು. ಈ ಸಂದರ್ಭದಲ್ಲಿ ಸ್ಟಾರ್ ಸ್ಪೋಟ್ಸ್ ಈ ಐತಿಹಾಸಿಕ ಪಂದ್ಯದ ಹೈಲೈಟ್ಸನ್ನು ಮರುಪ್ರಸಾರ ಮಾಡಿತ್ತು.

ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 34 ನೇ ಓವರ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಪತ್ರನ ಮೇಲೆ ಟಿವಿ ಕ್ಯಾಮರಾ ಫೋಕಸ್ ಆಗಿತ್ತು. ಈ ವೇಳೆ ಸಚಿನ್ ಪುತ್ರ ಅರ್ಜುನ್ ಜೊತೆಗೆ ಪೃಥ್ವಿ ಶಾ ಪಂದ್ಯ ವೀಕ್ಷಿಸಿದ್ದು ಸೆರೆಯಾಗಿದೆ. ಈ ಫೋಟೋವನ್ನು ಅಭಿಮಾನಿಗಳು ಸಾಮಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಚಿನ್ ಜೊತೆಗೆ ಇದ್ದ ಇನ್ನೋರ್ವ ಯಾರು ಎಂಬ ಅರಿವು ಒಂಬತ್ತು ವರ್ಷ ಹಿಂದೆ ಯಾರಿಗೂ ಇರಲಿಲ್ಲ. ಆದರೆ ಕಾಲ ಬದಲಾಗಿದ್ದು ಆ ಹುಡುಗ ಈಗ ಸಚಿನ್ ಪುತ್ರ ಅರ್ಜುನ್‌ಗಿಂತಲೂ ಖ್ಯಾತಿ ಪಡೆದಿದ್ದು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Story first published: Saturday, April 4, 2020, 11:25 [IST]
Other articles published on Apr 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+