ಮತ್ತೆ ದಾಖಲೆ ಬರೆದ ದ್ರಾವಿಡ್ ಗರಡಿಯ ಹುಡುಗ ಪೃಥ್ವಿ
ಲಕ್ನೋ, ಸೆ. 26: ಮುಂಬೈನ 17 ವರ್ಷ ವಯಸ್ಸಿನ ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರಣಜಿಯಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದ ಪೃಥ್ವಿ ಈಗ ದುಲೀಪ್ ಟ್ರೋಫಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾನೆ.
ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಅಂಡರ್ 19 ತಂಡದಲ್ಲಿ ಆಡಿದ ಅನುಭವ ನನಗೆ ರಣಜಿ ಹಾಗೂ ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಯಿತು ಎಂದು ಪೃಥ್ವಿ ಶಾ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
17 ವರ್ಷ ಹಾಗೂ 320 ದಿನಗಳ ವಯಸ್ಸಿನ ಪೃಥ್ವಿ, ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ರೆಡ್ ಪರ ಆಡುತ್ತಾ ಶತಕ ಗಳಿಸಿದ್ದು ಈಗ ದಾಖಲೆಯಾಗಿದೆ. ಸೋಮವಾರ ರಾತ್ರಿ ಇಂಡಿಯಾ ಬ್ಲೂ ವಿರುದ್ಧದ ಪಂದ್ಯದಲ್ಲಿ ನೂರರ ಗಡಿ ದಾಟುತ್ತಿದ್ದಂತೆ ಹೊಸ ಹಾಲಿ ಕ್ರಿಕೆಟರ್ ಗಳ ಪೈಕಿ ದುಲೀಪ್ ಟ್ರೋಫಿಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.
ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಅವರು 17 ವರ್ಷ, 262 ದಿನಗಳಾಗಿದ್ದಾಗ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದರು.

ದಾಖಲೆಗಳ ವೀರ
14 ವರ್ಷ ವಯಸ್ಸಿದ್ದಾಗಲೇ ಶಾ ಅವರ ಪ್ರತಿಭೆ ವಿಶ್ವಕ್ಕೆ ಪರಿಚಯವಾಗಿತ್ತು. ಮುಂಬೈನ ಹ್ಯಾರೀಸ್ ಶೀಲ್ಡ್ ಶಾಲೆ ಟೂರ್ನಿಯಲ್ಲಿ 546ರನ್ ಗಳಿಸಿ ಹೊಸ ವಿಶ್ವದಾಖಲೆ ಬರೆದಿದರು. ಈ ಸಾಧನೆ ಮಾಡಿದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು.

ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿ
ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ಪೃಥ್ವಿ ಬರೋಬ್ಬರಿ 546 ರನ್ ಚೆಚ್ಚಿದ್ದರು. ಈ ಶಾಲಾ ಟೂರ್ನಿಮೆಂಟ್ ನಲ್ಲಿ ಸಚಿನ್ ಅವರು ತಮ್ಮ ಶಾಲಾ ದಿನಗಳಲ್ಲಿ 326 ರನ್ ಹೊಡೆದು ನಾಟೌಟ್ ಆಗಿದ್ದರು. ವಿನೋದ್ ಕಾಂಬ್ಳಿ ಅವರ ಜತೆ 664 ರನ್ ಗಳ ಜೊತೆಯಾಟ ಪ್ರದರ್ಶಿಸಿದ್ದರು. ಮುಂಬೈನ ಆಟಗಾರ ವಾಸಿಂ ಜಾಫರ್ ಅವರ ಸಂಬಂಧಿ ಅರ್ಮಾನ್ ಜಾಫರ್ ಅವರು ಇದೇ ಟೂರ್ನಿಯಲ್ಲಿ 498 ರನ್ ಚೆಚ್ಚಿ ಹೊಸ ದಾಖಲೆ ಬರೆದಿದ್ದರು.

ಮುಂಬೈ ಆಟಗಾರ ಪೃಥ್ವಿ
ಮುಂಬೈ ಆಟಗಾರ ಪೃಥ್ವಿ 154ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ ಅವರು ಶತಕ ಗಳಿಸಿದರು 83.3 ಓವರ್ ಗಳಲ್ಲಿ 317/5 ಸ್ಕೋರ್ ಮಾಡಿತು. ದುಲೀಪ್ ಟ್ರೋಫಿ ಫೈನಲ್ ಪಂದ್ಯ ಐದು ದಿನಗಳ ಪಂದ್ಯವಾಗಿದೆ. ತನ್ನ ನೆಚ್ಚಿನ ಆಟಗಾರ ಸಚಿನ್ ಜತೆ ಪೃಥ್ವಿ

ಪೃಥ್ವಿಗೂ ಮುನ್ನ ಬಾಬು ಭಾಯಿ
ಬಾಬುಭಾಯಿ ಪಟೇಲ್ ಅವರು ಮುಂಬೈ ನಿಂದ ರಣಜಿ ಟ್ರೋಫಿಯಿಂದ ಚೊಚ್ಚಲ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ ಆಟಗಾರರಾಗಿದ್ದಾರೆ. 1935-36ರಲ್ಲಿ ಈ ಸಾಧನೆ ಮಾಡಿದ್ದರು. 1988-89ರಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು. ಇದಾದ ಬಳಿಕ ಪೃಥ್ವಿ ಶಾ ಈ ದಾಖಲೆ ಬರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications