ಐಪಿಎಲ್‌ನಲ್ಲಿ ತನ್ನ ಫೇವರಿಟ್ ಓಪನಿಂಗ್ ಪಾರ್ಟ್ನರ್ ಹೆಸರಿಸಿದ ಪೃಥ್ವಿ ಶಾ

ನವದೆಹಲಿ, ಏಪ್ರಿಲ್ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಒಂದೇ ಒಂದು ಸಾರಿ ಫೈನಲ್‌ಗೆ ಪ್ರವೇಶಿಸಿದ ತಂಡವೆಂಬ ಕೆಟ್ಟ ಹಣೆಪಟ್ಟಿ ಈಗ ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರು ಬದಲಾಯಿಸಿಕೊಂಡಿರುವ ಹಿಂದಿನ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೇಲಿದೆ.
ಕೆಲವೊಂದು ಪಂದ್ಯಗಳಲ್ಲಿ ಅಭೂತಪೂರ್ವ ಪ್ರದರ್ಶನಕ್ಕಾಗಿ ಡೆಲ್ಲಿ ಗಮನ ಸೆಳೆದಿತ್ತು. ನಾಕೌಟ್ ಹಂತಕ್ಕೂ ಪ್ರವೇಶಿಸಿತ್ತು. ಆದರೆ ಒಂದು ಬಾರಿಯೂ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿಲ್ಲ. 2019ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ತಂಡದ ಹೆಸರು ಬದಲಾಗಿತ್ತು. ಅಲ್ಲದೆ ಡೆಲ್ಲಿಯ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ತಂಡ ಸೇರಿಕೊಂಡಿದ್ದರು.
ಡೆಲ್ಲಿ ಪರ ಟಾಪ್ ಆರ್ಡರ್‌ನಲ್ಲಿ ಬರುವ ಶಿಖರ್ ಧವನ್ ತಂಡಕ್ಕೆ ಬಲ ತುಂಬಿದ್ದರು. ಪೃಥ್ವಿ ಶಾ ಜೊತೆಗಿನ ಧವನ್ ಆರಂಭಿಕ ಪರ್ಟ್ನರ್ಶಿಪ್ ತಂಡಕ್ಕೆ ಅನೇಕಸಾರಿ ಗೆಲುವು ತಂದಿತ್ತು ಕೂಡ. ಡೆಲ್ಲಿ ಬ್ಯಾಟ್ಸ್‌ಮನ್ ಪೃಥ್ವಿ ಶಾ ಜೊತೆ ವೀಡಿಯೋ ಸಂದರ್ಶನದ ವೇಳೆ ಧವನ್ ಅವರನ್ನು ಶಾ ತನ್ನ ಬೆಸ್ಟ್ ಓಪನಿಂಗ್ ಪಾರ್ಟ್ನರ್ ಎಂದು ಹೆಸರಿಸಿದ್ದಾರೆ.
ನಿಮ್ಮ ಬೆಸ್ಟ್ ಓಪನಿಂಗ್ ಪಾರ್ಟ್ನರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಪೃಥ್ವಿ, 'ಶಿಖರ್ ಧವನ್. ಯಾಕೆಂದರೆ ನಾನು ಅವರ ಜೊತೆಗೆ ಸಾಕಷ್ಟು ಪಂದ್ಯಗಳಲ್ಲಿ ಆರಂಭಿಕ ಪಾರ್ಟ್ನರ್ ಆಗಿ ಆಡಿದ್ದೇನೆ,' ಎಂದರು. ದೆಹಲಿ ಸ್ಟೇಡಿಯಂನಲ್ಲಿ 2019ರಲ್ಲಿ ನಡೆದಿದ್ದ ಒಂದು ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಶಾ ಕೇವಲ 55 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು. ಅಂದಿನ ಆ ಪಂದ್ಯದಲ್ಲಿ ಡಿಸಿ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications