Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಅಲಭ್ಯ

Prithvi Shaw ruled out of first Test against Australia

ಸಿಡ್ನಿ, ನವೆಂಬರ್ 30 : ಬೌಂಡರಿಯಲ್ಲಿ ಕ್ಯಾಚ್ ಹಿಡಿಯಲು ಯತ್ನಿಸಿದಾಗ ಎಡಗಾಲಿನ ಹಿಮ್ಮಡಿ ಉಳುಕಿಸಿಕೊಂಡಿದ್ದ ಭಾರತದ ಆರಂಭಿಕ ಆಟಗಾರ ಪೃಥ್ವಿ ಶಾ ಅವರು, ಅಡಿಲೇಡ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಆಡುವುದಿಲ್ಲ.

ಶುಕ್ರವಾರ ಬೆಳಿಗ್ಗೆ ಸ್ಕ್ಯಾನ್ ಮಾಡಲಾಗಿದ್ದು, ಮೂಳೆಕಟ್ಟಿಗೆ ತೀವ್ರವಾದ ಗಾಯವಾಗಿದೆ. ಆದುದರಿಂದ ಮೊದಲ ಟೆಸ್ಟ್ ಗೆ ಅವರು ಲಭ್ಯವಾಗಿರುವುದಿಲ್ಲ. ಅವರು ತ್ವರಿತವಾಗಿ ಗುಣಮುಖರಾಗಲು ಚಿಕಿತ್ಸೆಯನ್ನು ಕೂಡಲೆ ಆರಂಭಿಸಲಾಗುತ್ತಿದ್ದು, ಗುಣಮುಖರಾದ ನಂತರ ಎರಡನೇ ಟೆಸ್ಟ್ ಗೆ ಪರಿಗಣಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾ XI ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಂಡರಿ ಬಳಿ ಕ್ಯಾಚ್ ಹಿಡಿಯಲು ಪೃಥ್ವಿ ಶಾ ಅವರು ಯತ್ನಿಸಿದಾಗ, ಎಡಗಾಲಿನ ಹಿಮ್ಮಡಿಗೆ ಗಾಯ ಮಾಡಿಕೊಂಡಿದ್ದರು. ಜಿಗಿದು ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲವಾದರೂ, ನೆಲದ ಮೇಲೆ ಕಾಲು ಊರುವಾಗ ಎಡಗಾಲು ಉಳುಕಿತ್ತು. ಅವರು ತೀವ್ರ ನೋವಿನಿಂದ ಬಳಲುತ್ತಿದ್ದರಿಂದ ಅವರನ್ನು ಮೈದಾನದಿಂದ ಎತ್ತಿಕೊಂಡು ಹೋಗಲಾಯಿತು.

ಕ್ರಿಕೆಟ್ ಆಸ್ಟ್ರೇಲಿಯಾ XI ವಿರುದ್ಧದ ಪಂದ್ಯದಲ್ಲಿ ತ್ವರಿತವಾಗಿ ಅರ್ಧ ಸೆಂಚುರಿ ಬಾರಿಸಿ, ಉತ್ತಮ ಲಯ ಕಂಡುಕೊಂಡು, ಡಿಸೆಂಬರ್ 6ರಿಂದ ಅಡಿಲೇಡ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಗೆ ತಂಡ ಸೇರಲು 19 ವರ್ಷದ ಯುವ ಆಟಗಾರ ಪೃಥ್ವಿ ಶಾ ಅವರು ಸಿದ್ಧರಾಗುತ್ತಿದ್ದರು. ಆದರೆ, ಕ್ಯಾಚ್ ಹಿಡಿಯು ಯತ್ನದಲ್ಲಿ ಹಿಮ್ಮಡಿ ಉಳುಕಿದೆ.

ಭಾರತದ ಅಗ್ರಮಾನ್ಯ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ಆರಂಭಿಕ ಆಟಗಾರ ಮ್ಯಾಕ್ಸ್ ಬ್ರಯಾಂಟ್ ಮಿಡ್ ವಿಕೆಟ್ ಮೇಲಿನಿಂದ ಬಾರಿಸಿದ ಹೊಡೆತವನ್ನು ಬೌಂಡರಿ ಬಳಿ ಹಿಡಿಯಲು ಪೃಥ್ವಿ ಶಾ ಯತ್ನಿಸಿದಾಗ ಕಾಲು ಉಳುಕಿತ್ತು. ನಡೆಯಲು ಸಾಧ್ಯವಾಗದಿದ್ದರಿಂದ ಅವರನ್ನು ಎತ್ತಿಕೊಂಡು ಮೈದಾನದಿಂದ ಹೊರಹೋಗಲಾಯಿತು.

Story first published: Friday, November 30, 2018, 11:35 [IST]
Other articles published on Nov 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+