ಭಾರತ vs ವೆಸ್ಟ್ ಇಂಡೀಸ್: ಪಾದಾರ್ಪಣೆ ಪಂದ್ಯದಲ್ಲಿ ಪೃಥ್ವಿ 'ಪಂದ್ಯ ಶ್ರೇಷ್ಠ'!

ರಾಜ್‌ಕೋಟ್, ಅಕ್ಟೋಬರ್ 6: ರಾಜ್ ಕೋಟ್ ನಲ್ಲಿ ನಡೆದ ವೆಸ್ಟ್ ಇಂಡೀಸ್ vs ಭಾರತ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ, ಪಂದ್ಯ ಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದಾರೆ. ಈ ಚೊಚ್ಚಲ ಪಂದ್ಯದಲ್ಲೇ ಪೃಥ್ವಿ ಶತಕ ಬಾರಿಸಿದ್ದರು.
ಟಾಸ್ ಗೆದ್ದು ವಿಂಡೀಸ್ ವಿರುದ್ಧ ಬ್ಯಾಟಿಂಗ್ ಗೆ ಇಳಿದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ 649 ರನ್ ಪೇರಿಸಿತ್ತು. ಇದರಲ್ಲಿ ಯುವ ಬ್ಯಾಟ್ಸ್ಮನ್ ಪೃಥ್ವಿಯ 134 ರನ್ ಕೂಡ ಸೇರಿತ್ತು. ಜೊತೆಗೆ ವಿರಾಟ್ ಕೊಹ್ಲಿ 139, ಚೇತೇಶ್ವರ ಪೂಜಾರ 86, ರಿಷಬ್ ಪಂತ್ 92, ರವೀಂದ್ರ ಜಡೇಜಾ 100 ರನ್ ಸೇರಿಸಿದ್ದರು.
ಇನ್ನಿಂಗ್ಸ್ ಗೆ ಇಳಿದ ವೆಸ್ಟ್ ಇಂಡೀಸ್ ಕಳಪೆ ಬ್ಯಾಟಿಂಗ್ ತೋರಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 181 ರನ್ ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ 196 ರನ್ ಪೇರಿಸುವುದರೊಂದಿಗೆ ವಿಂಡೀಸ್ ಭಾರತದೆದುರು 272 ರನ್ ನಿಂದ ಶರಣಾಗಿತ್ತು. ಈ ಮೂಲಕ ಭಾರತ ಒಂದು ಇನ್ನಿಂಗ್ಸ್ ಆಡದೆಯೇ ಭರ್ಜರಿ ಗೆಲುವು ಸಾಧಿಸಿತ್ತು.

'ಪಂದ್ಯ ಶ್ರೇಷ್ಠ'ಕ್ಕೆ ಕಾರಣ
ಪಾದಾರ್ಪಣೆ ಮಾಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ್ದ ಪೃಥ್ವಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದಕ್ಕೆ ಕಾರಣವಿದೆ. ಹಾಗೆ ನೋಡಿದರೆ ಪೃಥ್ವಿಗಿಂತ ನಾಯಕ ಕೊಹ್ಲಿ 139 ರನ್ ಗಳಿಸಿದ್ದರು. ಆದರೆ ಎಸೆತಗಳಿಗೆ ಹೋಲಿಸಿದರೆ ಪೃಥ್ವಿ 154 ಎಸೆತಗಳಲ್ಲಿ 134 ರನ್ ಪೇರಿಸಿದರೆ, ಕೊಹ್ಲಿ 230 ಎಸೆತಗಳಿಗೆ 139 ರನ್ ಪೇರಿಸಿದ್ದರು.

ನಿರ್ಭೀತಿಯ ಆಟ
ಪಂದ್ಯದ ವೇಳೆ ಪೃಥ್ವಿ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ದಿಗ್ಗಜರ ಗಮನ ಪೃಥ್ವಿ ಸೆಳೆಯಲು ಕಾರಣ ಅವರ ನಿರ್ಭೀತಿಯ ಆಟ. ಪಂದ್ಯದಲ್ಲಿ ಪೃಥ್ವಿ ಒಟ್ಟು 19 ಬೌಂಡರಿಗಳನ್ನು ಬಾರಿಸಿದ್ದರು. ಮುಂಬೈ ಆಟಗಾರ ಪಂದ್ಯಶ್ರೇಷ್ಠನಾಗಲು ಇದೂ ಕಾರಣವಾಯಿತು.

ಕೆರಿಬಿಯನ್ನರನ್ನು ಕಾಡಿದ ಬೌಲರ್ ಗಳು
ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ ವೇಳೆ ಮೊದಮ್ಮದ್ ಶಮಿ 2, ರವಿಚಂದ್ರನ್ ಅಶ್ವಿನ್ 4 (+2 ದ್ವಿತೀಯ ಇನ್ನಿಂಗ್ಸ್) ವಿಕೆಟ್ ತೆಗೆದರೆ, ದ್ವಿತೀಯ ಇನ್ನಿಂಗ್ಸ್ ನಲ್ಲಿ ಕುಲದೀಪ್ ಯಾದವ್ ಬರೋಬ್ಬರಿ 5 (+ಪ್ರಥಮ ಇನ್ನಿಂಗ್ಸ್ 1) ವಿಕೆಟ್ ಕೆಡವಿ ಕೆರಿಬಿಯನ್ನರನ್ನು ಕಾಡಿದರು.

ಪೃಥ್ವಿ vs ಸಚಿನ್ ಅಂಕಿಅಂಶ
ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಸಾಧನೆಯನ್ನು ಸಚಿನ್ ಮತ್ತು ಪೃಥ್ವಿಗೆ ಹೋಲಿಸಿದ್ರೆ ಒಂದರ್ಥದಲ್ಲಿ ಇಬ್ಬರೂ ಶ್ರೇಷ್ಠರೆ. ತೆಂಡೂಲ್ಕರ್ ಅವರು ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಟ್ರೋಫಿಯಲ್ಲಿ ಶತಕ ಗಳಿಸಿದ್ದಾರೆ; ಆದರೆ ಅಂತಾರಾಷ್ಟ್ರೀಯ ಚೊಚ್ಚಲ ಟೆಸ್ಟ್ ನಲ್ಲಿ ಶತಕ ಬಾರಿಸಿಲ್ಲ. ಇತ್ತ ಪೃಥ್ವಿ ರಣಜಿ, ದುಲೀಪ್, ಅಂತಾರಾಷ್ಟ್ರೀಯ ಟೆಸ್ಟ್ ನಲ್ಲಿ ಶತಕ ಬಾರಿಸಿದ್ದಾರೆ, ಇರಾನಿ ಟ್ರೋಫಿಯಲ್ಲಿ ಬಾರಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications