ವಿಂಡೀಸ್ ಟೆಸ್ಟ್ ನಲ್ಲೂ ಪೃಥ್ವಿ ರಣಜಿಯ ಆಕ್ರಮಣಕಾರಿ ಆಟ ಆಡಬೇಕು: ರಹಾನೆ

ರಾಜ್ ಕೋಟ್, ಅಕ್ಟೋಬರ್ 2: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಪೃಥ್ವಿ ಶಾ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಣಜಿಯಲ್ಲಿ ಮುಂಬೈಗೆ ಆಡಿದಂತೆ ಇಲ್ಲೂ ಪೃಥ್ವಿ ಬ್ಯಾಟ್ಸ್ಮನ್ ಗಳ ಆಕ್ರಮಣಕಾರಿ ಆಟ ಪ್ರದರ್ಶಿಸಬೇಕು ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.
ವಿಂಡೀಸ್ ಟೆಸ್ಟ್ ನಲ್ಲಿ ಪೃಥ್ವಿ ಶಾಗೆ ಅವಕಾಶ ದೊರೆತ ಬಗ್ಗೆ ಮಾತನಾಡುತ್ತ ರಹಾನೆ, 'ಶಾ ಬಗ್ಗೆ ನನಗೆ ಖುಷಿಯಿದೆ. ಬಾಲ್ಯದವರಾಗಿದ್ದಾಗಿನಿಂದಲೂ ನಾನವರನ್ನು ನೋಡುತ್ತಿದ್ದೇನೆ. ಭಾರತ ಎ ತಂಡದಲ್ಲಿ ಪೃಥ್ವಿ ಒಬ್ಬ ಆಕ್ರಮಣಕಾರಿ ಆರಂಭಿಕ ಆಟಗಾರರಾಗಿದ್ದರು' ಎಂದರು.
ಅಕ್ಟೋಬರ್ 4ರಿಂದ ಗುಜರಾತ್ ನ ರಾಜ್ ಕೋಟ್ ನಲ್ಲಿ ಆರಂಭವಾಗಲಿರುವ ಆರಂಭಿಕ ಟೆಸ್ಟ್ ನಲ್ಲಿ ಕೆಎಲ್ ರಾಹುಲ್ ಗೆ ಜೊತೆಯಾಗಿ ಪೃಥ್ವಿ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರಲ್ಲಿ ಯಾರು ಬರಲಿದ್ದಾರೆ ಎಂಬುದನ್ನು ರಹಾನೆ ತಿಳಿಸಿಲ್ಲ. 'ವೈಯಕ್ತಿಕವಾಗಿ ನನಗೂ ಕಾಂಬಿನೇಶನ್ ಬಗ್ಗೆ ಗೊತ್ತಿಲ್ಲ' ಎಂದು ಹೇಳಿದರು.
'ಒಟ್ಟಿನಲ್ಲಿ ದೇಸಿ ಕ್ರಿಕೆಟ್ ನಂತೆ ಇಲ್ಲೂ ತಮ್ಮನ್ನು ತಾವು ತೋರಿಸಿಕೊಳ್ಳಲು ಪೃಥ್ವಿ, ಮಯಾಂಕ್, ಸಿರಾಜ್ ಅವರಂತ ಆಟಗಾರರಿಗೆ ಇದೊಂದು ಅಪೂರ್ವ ಅವಕಾಶ. ಪೃಥ್ವಿಗೆ ನಾನು ಶುಭ ಹಾರೈಸುತ್ತೇನೆ. ಆತ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆಯೂ ನನಗಿದೆ' ಎಂದು ರಹಾನೆ ವಿಶ್ವಾಸ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications