Priyansh Arya: ಪ್ರಿಯಾಂಶ್ ಆರ್ಯ ನ್ಯೂ ಪೋಸ್ಟರ್ ಬಾಯ್
ಪಂಜಾಬ್ ಕಿಂಗ್ಸ್ ತವರಿನ ಅಂಗಳದಲ್ಲಿ ಪಟ ಪಟನೇ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ ಅಭಿಮಾನಿಗಳಿಗೆ ಆತಂಕ. ಎಲ್ಲಿ ತಮ್ಮ ತಂಡ ಹೀನಾಯ ಸೋಲನ್ನು ಕಾಣುತ್ತದೋ ಎಂದು. ಆದರೆ ಕ್ರಿಕೆಟ್ ಫಾಲೋ ಮಾಡುವ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು. ಕಾರಣ ಒಂದು ಬದಿಯಲ್ಲಿ ವಿಕೆಟ್‌ಗಳ ಪತನ ಆಗುತ್ತಾ ಇದ್ದರೆ, ಇನ್ನೊಂದು ಬದಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ.
ಪ್ರಿಯಾಂಶ್ ಆರ್ಯ ಹೆಸರು ಕೇಳುತ್ತಿದ್ದಂತೆ ಈ ಹೆಸರನ್ನು ಎಲ್ಲೋ ಕೆಳಿದ ನೆನಪು. ಇಲ್ಲವೇ ಓದಿದ ನೆನಪು ನಿಮಗೆ ಆಗಬಹುದು. ಎಸ್ ನಿಮ್ಮ ಊಹೆ ನೂರಕ್ಕೆ ನೂರ ಪ್ರತಿಷತ ಸರಿಯಾಗಿದೆ. ಪ್ರಿಯಾಂಶ್ ಅರ್ಯ, ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿ ಹೆಸರು ಮಾಡಿದ್ದ ಎಡಗೈ ಆಟಗಾರ. ಇವರು ಐಪಿಎಲ್‌ನಲ್ಲೂ ಧಮಾಕೆದಾರ ಪ್ರದರ್ಶನ ನೀಡಿದರು. ತಂಡ ಇಕ್ಕಟ್ಟಿನಲ್ಲಿದ್ದಾಗ ತಂಡಕ್ಕೆ ನೆರವಾದ ಪ್ರಿಯಾಂಶ್ ಆರ್ಯ ನಿಜಕ್ಕೂ ಪೋಸ್ಟರ್ ಬಾಯ್ ಆಗಿ ಹೊರ ಹೊಮ್ಮಿದ್ದಾರೆ.

ನ್ಯೂ ಚಂಢಿಗಡ್ ಅಂಗಳದಲ್ಲಿ ಮಂಗಳವಾರ ಸೂರ್ಯ ತನ್ನ ಕೆಲಸ ಮುಗಿಸಿದ್ದಾಗ ನಡೆದ ಟಾಸ್ ಪಂಜಾಬ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡಿತು. ಈ ವೇಳೆ ಭರವಸೆಯ ಹಾಗೂ ಅನುಭವಿ ಬ್ಯಾಟರ್‌ಗಳು ಚೆನ್ನೈ ತಂಡದ ಬೌಲರ್‌ಗಳ ಸವಾಲು ಎದುರಿಸುವಲ್ಲಿ ವಿಫಲರಾದರು. ಆದರೆ 24 ವರ್ಷದ ಪ್ರಿಯಾಂಶ್ ಆರ್ಯ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು.
ಮೊದಲ ಎಸೆತದಲ್ಲೇ ಸಿಕ್ಸರ್
ಪ್ರಿಯಾಂಶ್ ಆರ್ಯ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ವಿಶೇಷ ಸಾಧನೆಯನ್ನು ಮಾಡಿದರು. ಇದಕ್ಕೂ ಮೊದಲು ಈ ಸಾಧನೆಯನ್ನು ಕೆಕೆಆರ್ ಪರ ಆಡುವಾಗ 2009ರಲ್ಲಿ ನಮನ್ ಓಜಾ, 2019ರಂದು ಆರ್‌ಸಿಬಿ ಪರ ಆಡುವಾಗ ವಿರಾಟ್ ಕೊಹ್ಲಿ, 2014ರಲ್ಲಿ ಫಿಲ್ ಸಾಲ್ಟ್ ಸಹ ಇದೇ ಕೆಲಸವನ್ನು ಮಾಡಿದ್ದರು. ಈಗ ಈ ಸಾಲಿಗೆ ಪ್ರಿಯಾಂಶ್ ಆರ್ಯ ಹೆಸರು ಸೇರ್ಪಡೆ ಆಗಿದೆ. ವಿಕೆಟ್ ಬಿದ್ದ ಮೇಲೆ ಮೊದಲ ಎಸೆತವನ್ನು ಎದುರಿಸಿದರೂ, ಈ ಒತ್ತಡ ತಮ್ಮ ಮೇಲೆ ಬೀಳುವುದೇ ಇಲ್ಲ ಎಂಬಂತೆ ಬ್ಯಾಟ್ ಮಾಡಿದರು.
ಪ್ರಿಯಾಂಶ್ ಸ್ಫೋಟಕ ಆಟ
ಪ್ರಿಯಾಂಶ್ ಆರ್ಯ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಸುಮ್ನೆ ಕೂಡಲಿಲ್ಲ. ತಮ್ಮ ಮೇಲೆ ಹಾಗೂ ತಂಡದ ಮೇಲೆ ಇದ್ದ ಒತ್ತಡವನ್ನು ಮೆಟ್ಟಿನಿಂತು ಇವರು ಬ್ಯಾಟ್ ಮಾಡಿದರು. ಇವರು ಕೇವಲ 39 ಎಸೆತಗಳಲ್ಲಿ ಶತಕ ಗಳಿಸಿದರು. ಈಗ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ಐದನೇ ಬ್ಯಾಟ್ಸ್‌ಮನ್. ಇಷ್ಟೇ ಅಲ್ಲ, ಅವರು ಈಗ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್.

ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿದ ಬ್ಯಾಟರ್ಸ್
ಕ್ರಿಸ್ ಗೇಲ್, 30 ಎಸೆತ
ಯೂಸುಫ್ ಪಠಾಣ್, 37 ಎಸೆತ
ಡೇವಿಡ್ ಮಿಲ್ಲರ್, 38 ಎಸೆತ
ಪ್ರಿಯಾಂಶ್ ಆರ್ಯ, 39 ಎಸೆತ
ಟ್ರಾವಿಸ್ ಹೆಡ್, 39 ಎಸೆತ
ಮೊದಲು ಪ್ರಿಯಾಂಶ್ ಆರ್ಯ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ನಂತರ ಕೇವಲ 39 ಎಸೆತಗಳಲ್ಲಿ 100ರ ಗಡಿ ದಾಟಿದರು. ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್‌ಗಳು ಸೇರಿವೆ. ಪ್ರಿಯಾಂಶ್ ಶತಕ ಬಾರಿಸುತ್ತಿದ್ದಂತೆ ಪಂಜಾಬ್ ಸಹ ಮಾಲೀಕೆ ಪ್ರೀತಿ ಜಿಂಟಾ ಸಂತೋಷದಿಂದ ಕುಣಿದಾಡಿದರು.
3.80 ಕೋಟಿಗೆ ಖರೀದಿ
ಪ್ರಿಯಾಂಶ್ ಆರ್ಯ ಅವರ ಸಾಧನೆಯನ್ನು ಈ ಮೊದಲೇ ಗುರುತಿಸಿದ್ದ ಪಂಜಾಬ್ ಕಿಂಗ್ಸ್ ಐಪಿಎಲ್ ಮೆಗಾ ಹರಾಜಿನಲ್ಲಿ ಇವರನ್ನು ಖರೀದಿಸಿತ್ತು. ಇವರ ಮೂಲ ಬೆಲೆ 30 ಲಕ್ಷ ಆಗಿತ್ತು. ಆದರೆ ಪಂಜಾಬ್ ಇವರಿಗೆ 3.80 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಇವರು ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇದನ್ನು ಪರಿಗಣಿಸಿದ್ದ ಪಂಜಾಬ್ ದೊಡ್ಡ ಮೊತ್ತವನ್ನು ಬಿಡ್ ಮಾಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications