ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರೊ ಕಬಡ್ಡಿ 2021: ಯುಪಿ ಯೋಧಾ ವಿರುದ್ಧ ಪಿಂಕ್ ಪ್ಯಾಂಥರ್ಸ್‌ಗೆ ಗೆಲುವು

Pink panthers

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ 2021ರ ಸೀಸನ್‌ನಲ್ಲಿ ಇಂದು ಯುಪಿ ಯೋಧಾ ವಿರುದ್ಧ ಪಿಂಚ್ ಪ್ಯಾಂಥರ್ಸ್ ಅಬ್ಬರಿಸಿದೆ.

ಮಿಂಚಿನ ರೈಡ್‌ಗಳ ಜೊತೆಗೆ ಸೂಪರ್ ಟ್ಯಾಕಲ್‌ಗಳೊಂದಿಗೆ ಮಿಂಚಿದ ಪಿಂಕ್ ಪ್ಯಾಂಥರ್ಸ್ 32-29 ಪಾಯಿಂಟ್ಸ್‌ಗಳಿಂದ ಯುಪಿ ಯೋಧಾ ವಿರುದ್ಧ ಗೆಲುವನ್ನ ಕಂಡಿದೆ. ಪಿಂಕ್ ಪ್ಯಾಂಥರ್ಸ್ 20 ರೈಡ್ ಪಾಯಿಂಟ್ಸ್, 1 ಸೂಪರ್ ರೈಡ್, 8 ಟ್ಯಾಕಲ್ ಪಾಯಿಂಟ್‌ಗಳ ಜೊತೆಗೆ ಎದುರಾಳಿಯನ್ನ ಆಲೌಟ್ ಮಾಡಿ ಎರಡು ಪಾಯಿಂಟ್ಸ್ ಕಲೆಹಾಕಿತು. ಪ್ಯಾಂಥರ್ಸ್ ಪರ ಅರ್ಜುನ್ ದೇಶ್‌ಪಾಲ್ 11 ರೈಡ್‌ಗಳೊಂದಿಗೆ ಯಶಸ್ವಿ ರೈಡರ್ ಎನಿಸಿದ್ರೆ, ದೀಪಕ್ ನಿವಾಸ್ ಹೂಡ 7 ಪಾಯಿಂಟ್ಸ್ ಕಲೆಹಾಕಿದ್ರು.

ಫ್ಲ್ಯಾಶ್‌ಬ್ಯಾಕ್ 2021: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳ ಪಟ್ಟಿ; ಇಬ್ಬರು ಭಾರತೀಯರು!ಫ್ಲ್ಯಾಶ್‌ಬ್ಯಾಕ್ 2021: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳ ಪಟ್ಟಿ; ಇಬ್ಬರು ಭಾರತೀಯರು!

ಇನ್ನು ಯುಪಿ ಯೋಧಾ, ಪಿಂಕ್ ಪ್ಯಾಂಥರ್ಸ್‌ಗಿಂತ ಹೆಚ್ಚಿನ ರೈಡ್ ಪಾಯಿಂಟ್ಸ್‌ (23) ಗಳಿಸಿದ್ರು ಸಹ ರಕ್ಷಣಾ ಕ್ಷೇತ್ರದಲ್ಲಿ ಎಡವಿತು. ಕೇವಲ 4 ಟ್ಯಾಕಲ್ ಪಾಯಿಂಟ್ಸ್ ಗಳೊಂದಿಗೆ 29 ಪಾಯಿಂಟ್ಸ್ ಮುಟ್ಟಿತು. ಯುಪಿ ಯೋಧಾ ಪರ ಸುರೇಂದರ್ ಗಿಲ್ 7, ರೋಹಿತ್ ತೋಮರ್ 5 ಪಾಯಿಂಟ್ಸ್‌ನೊಂದಿಗೆ ಮಿಂಚಿದ್ರು.

ಇನ್ನು ಈ ಪಂದ್ಯಕ್ಕೂ ಮೊದಲು ನಡೆದ ಪಂದ್ಯದಲ್ಲಿ ತಮಿಳು ತಲೈವಾಸ್ ಮತ್ತು ಯು ಮುಂಬಾ ಸಮಬಲ ಸಾಧಿಸಿತು. ಯು ಮುಂಬಾ 18 ರೈಡ್ ಪಾಯಿಂಟ್ಸ್, 5 ಟ್ಯಾಕಲ್ ಪಾಯಿಂಟ್ಸ್, 4 ಆಲೌಟ್ ಪಾಯಿಂಟ್ಸ್, 3 ಎಕ್ಸ್‌ಟ್ರಾ ಪಾಯಿಂಟ್ಸ್‌ನೊಂದಿಗೆ 30 ಪಾಯಿಂಟ್ಸ್ ಗಳಿಸಿತು. ಅತ್ತ ತಮಿಳು ತಲೈವಾಸ್ ಕೂಡ 17 ರೈಡ್ ಪಾಯಿಂಟ್ಸ್ ಮತ್ತು 8 ಟ್ಯಾಕಲ್ ಪಾಯಿಂಟ್ಸ್‌ನೊಂದಿಗೆ 30 ಪಾಯಿಂಟ್ಸ್ ಕಲೆಹಾಕಿ ಸ್ಕೋರ್ ಲೆವೆಲ್ ಆಗಿದೆ.

Ashes : Australia ಮೂರನೇ ಪಂದ್ಯವನ್ನು ಗೆದ್ದಿದ್ದು ಹೀಗೆ | Oneindia Kannada

ಯು ಮುಂಬಾ ಪರ 13 ಪಾಯಿಂಟ್‌ಗಳೊಂದಿಗೆ ವಿ. ಅಜಿತ್ ಕುಮಾರ್ ಯಶಸ್ವಿ ರೈಡರ್ ಎನಿಸಿದ್ರೆ, ತಮಿಳು ತಲೈವಾಸ್ ಪರ ಮಂಜಿತ್, ಅಥುಲ್ ಎಂಎಸ್ ಕ್ರಮವಾಗಿ 5, 3 ರೈಡಿಂಗ್ ಪಾಯಿಂಟ್ಸ್ ಪಡೆದರು.

Story first published: Tuesday, December 28, 2021, 9:42 [IST]
Other articles published on Dec 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X