Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿವೊ ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 8ಕ್ಕೆ ನಾಳೆ ಚಾಲನೆ: ಬೆಂಗಳೂರು ಬುಲ್ಸ್‌ v/s ಯು ಮುಂಬಾ ಫೈಟ್

Pro kabaddi league 2021

ವಿವೊ ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 8ರ ಚಾಲನೆಗೆ ಕೌಂಟ್‌ಡೌನ್ ಶುರುವಾಗಿದೆ. ಡಿಸೆಂಬರ್ 22ರಂದು, ಅಂದ್ರೆ ನಾಳೆ(ಬುಧವಾರ)ಯಿಂದ ಪ್ರಾರಂಭಗೊಳ್ಳಲಿರುವ ಆವೃತ್ತಿಗೆ ಎಲ್ಲಾ ತಂಡಗಳು ಸಿದ್ಧವಾಗಿ ನಿಂತಿವೆ. ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಯು ಮುಂಬಾ ತಂಡವು ಬೆಂಗಳೂರು ಬುಲ್ಸ್ ಅನ್ನು ಎದುರಿಸುವುದರೊಂದಿಗೆ ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 8 ಪ್ರಾರಂಭವಾಗಲಿದೆ.

ಪಂದ್ಯಗಳು ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಈಗಾಗಲೇ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೀಕ್ಷಕರು ಇಲ್ಲದೆ ಬೆಂಗಳೂರು ವೈಟ್‌ಫೀಲ್ಡ್ ಹೋಟೆಲ್ ಶೆರಟಾನ್ ಗ್ರ್ಯಾಂಡ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಇಡೀ ಸೀಸನ್‌ ನಡೆಸಲಾಗುವುದು.

ಮೊದಲ ಪಂದ್ಯದಲ್ಲಿ ಬೆಂಗಳೂರು, ಮುಂಬೈ ಸೆಣಸಾಡಿದ್ರೆ, ಲೀಗ್‌ನ 'ಸದರ್ನ್ ಡರ್ಬಿ' ನಂತರ ಎರಡನೇ ಪಂದ್ಯದಲ್ಲಿ ತಮಿಳು ತಲೈವಾಸ್‌ನೊಂದಿಗೆ ತೆಲುಗು ಟೈಟಾನ್ಸ್ ಮುಖಾಮುಖಿಯಾಗಲಿದೆ. ಆರಂಭಿಕ ದಿನದ ಕೊನೆಯ ಪಂದ್ಯದಲ್ಲಿ ಯುಪಿ ಯೋಧಾ, ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ನೊಂದಿಗೆ ಸೆಣಸಾಟ ನಡೆಸಲಿದೆ.

ಈ ಬಾರಿ 12 ತಂಡಗಳ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಯಲಿದೆ. ಅದರಂತೆ ಬೆಂಗಳೂರು ಬುಲ್ಸ್, ಯು ಮುಂಬಾ, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಬೆಂಗಾಲ್ ವಾರಿಯರ್ಸ್, ಯುಪಿ ಯೋಧಾ, ಗುಜರಾತ್ ಜೈಂಟ್ಸ್, ದಬಾಂಗ್ ಡೆಲ್ಲಿ, ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ.

ನಾಳೆಯಿಂದ ಪ್ರಾರಂಭಗೊಳ್ಳಲಿರುವ 8ನೇ ಸೀಸನ್‌ನಲ್ಲಿ ಮೊದಲಾರ್ಧವು ಜನವರಿ 20, 2022 ರಂದು ಮುಕ್ತಾಯಗೊಳ್ಳಲಿದೆ. ಆ ಬಳಿಕ 2ನೇ ಸುತ್ತಿನ ಪಂದ್ಯಗಳು ಶುರುವಾಗಲಿದೆ. ಆದ್ರೆ ಈ ಕುರಿತಾಗಿ ಯಾವುದೇ ವೇಳಾಪಟ್ಟಿ ಬಿಡುಗಡೆಗೊಂಡಿಲ್ಲ.

ಪಂದ್ಯದ ಸಮಯ ಮತ್ತು ಪ್ರಸಾರ
ಮೊದಲ ಪಂದ್ಯವು ರಾತ್ರಿ 7.30ಕ್ಕೆ, ಎರಡನೇ ಪಂದ್ಯವು ರಾತ್ರಿ 8.30ಕ್ಕೆ ಮತ್ತು ಮೂರನೇ ಹಾಗೂ ಕೊನೆಯ ಪಂದ್ಯವು ರಾತ್ರಿ 9.30ಕ್ಕೆ ನಡೆಯಲಿದೆ. ಪ್ರತಿಬಾರಿಯಂತೆ ಈ ಬಾರಿಯು ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಪಂದ್ಯದ ನೇರ ಪ್ರಸಾರ ಬರಲಿದೆ. ಇನ್ನು ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲೂ ಸಹ ಪಂದ್ಯ ವೀಕ್ಷಿಸಬಹುದಾಗಿದೆ.

Story first published: Wednesday, December 22, 2021, 10:08 [IST]
Other articles published on Dec 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+