ಪಿಎಸ್‌ಎಲ್ 2021: ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ ಆ್ಯಂಡ್ರೆ ರಸೆಲ್

ಅಬುಧಾಬಿ: ಪಾಕಿಸ್ತಾನ್ ಸೂಪರ್ ಲೀಗ್ (ಐಪಿಎಲ್) 2021ರ ಆವೃತ್ತಿಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವ ಕ್ಯಮರಾ ತಂಡಗಳಿಗೆ ಅಬುಧಾಬಿ ಸರ್ಕಾರಿ ಅಧಿಕಾರಿಗಳಿಂದ ಇನ್ನೂ ಅನುಮತಿ ದೊರೆತಿಲ್ಲ. ಆದರೆ ಈಗಾಗಲೇ ಪಿಎಸ್‌ಎಲ್ ತಂಡಗಳು ನೆಟ್ ಅಭ್ಯಾಸ ಆರಂಭಿಸಿವೆ.
ಬೇರೆ ಬೇರೆ ಅಡಚಣೆಗಳಿಂದಾಗಿ ಪಾಕಿಸ್ತಾನ್ ಸೂಪರ್ ಲೀಗ್‌ನ ಆರಂಭಕ್ಕೆ ಹಿನ್ನಡೆಯಾಗಿದೆ. ಜೂನ್ ಆರಂಭದಲ್ಲೇ ಚಾಲನೆಗೊಳ್ಳಬೇಕಿದ್ದ ಪಿಎಸ್‌ಎಲ್ ಜೂನ್ 7 ಅಥವಾ 8ರಿಂದ ಶುರುವಾಗುವುದರಲ್ಲಿದೆ. ಹೀಗಾಗಿ ದುಬೈ ತಲುಪಿರುವ ತಂಡಗಳು ಅಭ್ಯಾಸ ಶುರು ಮಾಡಿವೆ.
ಇಸ್ಲಮಾಬಾದ್ ಯುನೈಟೆಡ್ ಮತ್ತು ಲಾಹೋರ್ ಕಲಂದರ್ ತಂಡಗಳು ದುಬೈಯಲ್ಲಿದ್ದು ಕ್ವಾರಂಟೈನ್ ಮುಗಿಸಿವೆ. ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿರುವ ಇತ್ತಂಡಗಳು ಜೂನ್ 3ರ ಗುರುವಾರ ನೆಟ್ ಅಭ್ಯಾಸ ಆರಂಭಿಸಿವೆ. ಆರು ತಂಡಗಳ ಟೂರ್ನಿ ಈ ವಾರ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುವ ಆ್ಯಂಡ್ರೆ ರಸೆಲ್ ಈ ಬಾರಿ ಪಿಎಸ್‌ಎಲ್‌ನಲ್ಲೂ ಆಡಲಿದ್ದಾರೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದಲ್ಲಿರುವ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ರಸೆಲ್ ಕೂಡ ಗುರುವಾರ ಅಭ್ಯಾಸ ನಡೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications